ಮದುವೆ ಮೆರವಣಿಗೆಯಲ್ಲಿ ಹಣ ಎಸೆದು ಡ್ಯಾನ್ಸ್- ಹಣ ಹಿಡಿಯಲು ಹೋಗಿ ಬಾಲಕ ಭಸ್ಮ

ಮದುವೆ ಮೆರವಣಿಗೆ ವೇಳೆ ಎಸೆದ ಹಣ ಹಿಡಿಯಲು ಹೋಗಿ ಬಾಲಕ ಮೃತಪಟ್ಟ ಘಟನೆ ಹರ್ಯಾಣದ ಸೋನಿಪತ್ನಲ್ಲಿ ನಡೆದಿದೆ. ಮದುವೆಗೆ ಬಂದವರು ಮೆರವಣಿಗೆ ಸಮಯದಲ್ಲಿ ಎಸೆದ ಹಣವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ. ರೋಹ್ಟಕ್ನಿಂದ ಮದುವೆ ಮೆರವಣಿಗೆ ತಾಜ್ಪುರ್ ಗ್ರಾಮದ ತೋಟದ ಮನೆಗೆ ಆಗಮಿಸಿದಾಗ ತಡರಾತ್ರಿ ಈ ಘಟನೆ ಸಂಭವಿಸಿದೆ.
ಮದುವೆಗೆ ಬಂದ ಅತಿಥಿಗಳು ಸಂಭ್ರಮದಲ್ಲಿದ್ದಾಗ ಡ್ಯಾನ್ಸ್ ಮಾಡುತ್ತಾ ನೋಟುಗಳನ್ನು ಎಸೆಯುತ್ತಿದ್ದರು. ಗ್ರಾಮದ ನಿವಾಸಿಯಾದ 8 ನೇ ತರಗತಿಯ ವಿದ್ಯಾರ್ಥಿ ತೋಟದ ಮನೆಯ ಛಾವಣಿ ಮೇಲೆ ನಿಂತು ನೋಟುಗಳನ್ನು ಆಯ್ದುಕೊಳ್ಳುತ್ತಿದ್ದ. ಹೈ-ವೋಲ್ಟೇಜ್ ವಿದ್ಯುತ್ ತಂತಿಗಳಿಗೆ ನೇರ ಸಂಪರ್ಕಕ್ಕೆ ಬಂದು ಕೂಡಲೇ ಸಾವನ್ನಪ್ಪಿದ್ದಾನೆ. ಬಡಕುಟುಂಬವಾಗಿದ್ದು, ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ವಿದ್ಯುತ್ ಆಘಾತ ಎಷ್ಟು ತೀವ್ರವಾಗಿತ್ತು ಎಂದರೆ ಹುಡುಗನ ದೇಹವು ಸುಟ್ಟು ಕರಕಲಾಗಿತ್ತು.