ಯುವತಿಯರೇ ಎಚ್ಚರ.. – ನೈಲ್ ಪಾಲಿಶ್ ರಿಮೂವರ್ ಬಾಟಲ್ ಸ್ಪೋಟಗೊಂಡು ಬಾಲಕಿಗೆ ಗಾಯ

ಇದು ಫ್ಯಾಷನ್ ಯುಗ.. ಸ್ಟೈಲಿಶ್ ಆಗಿ ಕಾಣ್ಬೇಕು ಅಂತಾ ಅನೇಕ ಯುವತಿಯರು ಬಯಸ್ತಾರೆ. ಹೀಗಾಗಿ ಮನೆಯಿಂದ ಹೊರಗೆ ಹೋಗುವಾಗ ಮುಖಕ್ಕೆ ಮೇಕಪ್, ಕೈಗೆ ನೈಲ್ಫಾಲಿಶ್ ಹಾಕಿಕೊಂಡು ಹೋಗುತ್ತಾರೆ. ಉಗುರುಗಳು ಸುಂದರವಾಗಿ ಕಾಣಬೇಕು ಅಂತಾ ಹಾಕುವ ನೈಲ್ಪಾಲಿಶ್ ನಿಮ್ಮ ಪ್ರಾಣಕ್ಕೆ ಕಂಟಕವಾಗಬಹುದು ಅಂತಾ ನೀವು ಯೋಚಿಸಿದ್ದೀರಾ? ಇಲ್ಲೊಬ್ಬಳು ಯುವತಿ ನೈಲ್ ಪಾಲಿಶ್ ಹಚ್ಚಲು ಹೋಗಿ ಆಸ್ಪತ್ರೆ ಸೇರುವಂತಾಗಿದೆ.
ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಬಾಲಕಿಯ ಶಿರಚ್ಛೇದ – ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಅಷ್ಟಕ್ಕೂ ಆಗಿದ್ದೇನು?
ಈ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿದೆ. ಕೆನಡಿ(14) ಎಂಬ ಬಾಲಕಿ ಮೇಣದಬತ್ತಿಯ ಪಕ್ಕದಲ್ಲಿ ಕುಳಿತು ನೇಲ್ ಪಾಲಿಶ್ ಹಚ್ಚಲು ಮುಂದಾಗಿದ್ದಾಳೆ. ಈಗಾಗಲೇ ಉಗುರುಗಳಿಗೆ ಹಚ್ಚಿರುವ ಬಣ್ಣ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ.ಇದ್ದಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟಗೊಂಡಿದೆ. ಪರಿಣಾಮ ಬಾಲಕಿಯ ಕೂದಲು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ದೇಹದ ಇತರ ಭಾಗಗಳಲ್ಲಿಯೂ ಸಹ ಸುಟ್ಟ ಗಾಯಗಳಾಗಿವೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ.
ರಾತ್ರಿ ಮೇಣದ ಬತ್ತಿಯನ್ನು ಹಚ್ಚಿ ಪಕ್ಕದಲ್ಲೇ ಕುಳಿತು ತನ್ನ ಉಗುರುಗಳಿಗೆ ಹಚ್ಚಿರುವ ಬಣ್ಣವನ್ನು ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸಿದ್ದಾಳೆ. ಇದ್ದಕ್ಕಿದ್ದ ಹಾಗೆ ನೇಲ್ ಪಾಲಿಶ್ ರಿಮೂವರ್ ಬಾಟಲ್ ಸ್ಫೋಟಗೊಂಡಿದೆ. ಬಾಲಕಿ ಕುಳಿತು ಕೊಂಡಿದ್ದ ಹಾಸಿಗೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹರಡದಂತೆ ತಡೆಯಲು ಪ್ರಯತ್ನಿಸಿದ ಪರಿಣಾಮ ತಲೆ ಕೂದಲು, ಕೈ, ಕಾಲು ಸೇರಿದಂತೆ ದೇಹದ ಇತರ ಭಾಗಗಳಿಗೆ ಬೆಂಕಿ ತಗುಲಿದೆ. ಕೂಡಲೇ ನೋವಿನಿಂದ ಕಿರುಚಿಕೊಂಡಿದ್ದಾಳೆ. ತಕ್ಷಣ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.