ಬಾಂಗ್ಲಾದೇಶದಲ್ಲಿ 14 ದೇವಾಲಯಗಳು ಧ್ವಂಸ- ವಿಗ್ರಹಗಳನ್ನು ತುಂಡು ಮಾಡಿದ ದುಷ್ಕರ್ಮಿಗಳು
ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮುಂದುವರೆದಿದೆ. ಶನಿವಾರ ಒಂದೇ ರಾತ್ರಿಯಲ್ಲಿ ದುಷ್ಕರ್ಮಿಗಳು 14 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾರೆ. ವಿಗ್ರಹಗಳನ್ನು ತುಂಡು ತುಂಡು ಮಾಡಿದ ದುಷ್ಕರ್ಮಿಗಳು ಕೊಳದ ನೀರಲ್ಲಿ ಬಿಸಾಡಿದ್ದಾರೆ. ಈ ವಿಧ್ವಂಸಕ ಘಟನೆ ಬಾಂಗ್ಲಾದೇಶದ ವಾಯುವ್ಯ ಪ್ರದೇಶದ ಠಾಕೂರ್ ಗಾಂವ್ನ ಬಲಿಯಾದಂಗಿಯಲ್ಲಿ ನಡೆದಿದೆ. ಘಟನೆಯ ನಂತರ, ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದೂಗಳು ಭಯಭೀತರಾಗಿದ್ದಾರೆ. ತಮ್ಮ ಪ್ರಾಣ ಮತ್ತು ಆಸ್ತಿ ರಕ್ಷಣೆ ಮಾಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಉಚಿತ ಪ್ರಯಾಣ..! – ಸಿಎಂ ಬಂಪರ್ ಆಫರ್
ಬಾಂಗ್ಲಾದೇಶದ ಹಿಂದೂ ಮುಖಂಡ ಸಮರ್ ಚಟರ್ಜಿ ಈ ಕೃತ್ಯವನ್ನು ಖಂಡಿಸಿದ್ದಾರೆ. ಶೀಘ್ರವೇ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಪತ್ತೆ ಹಚ್ಚಿದ ಕೂಡಲೇ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಅಕ್ಟೋಬರ್ ನಲ್ಲೂ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿನಡೆದಿತ್ತು.