ಹರಿಯಾಣದಲ್ಲಿ ನಿಲ್ಲದ ಕೋಮು ಸಂಘರ್ಷ – 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ?

ಹರಿಯಾಣದಲ್ಲಿ ನಿಲ್ಲದ ಕೋಮು ಸಂಘರ್ಷ – 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ?

ಚಂಡೀಗಢ: ಹರಿಯಾಣದಲ್ಲಿ ಕೋಮು ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎರಡು ಗುಂಪುಗಳ ಘರ್ಷಣೆಯಿಂದಾಗಿ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳಿಗೆ ಭಾರಿ ಹಾನಿಯುಂಟಾಗಿದೆ. ಈ ಮಧ್ಯೆಯೆ ಇಲ್ಲಿನ ಮೂರು ಜಿಲ್ಲೆಗಳ 14 ಹಳ್ಳಿಗಳಿಗೆ ಮುಸ್ಲಿಮರನ್ನ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ 14 ಗ್ರಾಮ ಪಂಚಾಯಿತಿಗಳು ಪೊಲೀಸ್‌, ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ ಬರೆದಿವೆ ಎಂದು ವರದಿಯಾಗಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆ ರದ್ದು – ಟ್ವಿಟರ್ ಬಯೋ ಬದಲಿಸಿದ ರಾಗಾ!

ಕೋಮು ಘರ್ಷಣೆಯಿಂದಾಗಿ ಹರಿಯಾಣದ ಮಹೇಂದ್ರಗಢ, ಜಜ್ಜರ್‌ ಮತ್ತು ರೇವಾರಿ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಮೂರು ಜಿಲ್ಲೆಗಳ 14 ಗ್ರಾಮಪಂಚಾಯತಿಗಳು ಮುಸ್ಲಿಮರನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿವೆ. ಕೋಮು ಘರ್ಷಣೆ ನಂತರ ಮುಸ್ಲಿಮರಿಗೆ ಮನೆ ಮತ್ತು ಅಂಗಡಿಗಳನ್ನ ಬಾಡಿಗೆಗೆ ನೀಡದಂತೆ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ.

ಪತ್ರದಲ್ಲಿ ಏನಿದೆ?

14 ಹಳ್ಳಿಗಳ ಹಿಂದೂ ಮುಖಂಡರು ಬರೆದಿರುವ ಪತ್ರದಲ್ಲಿ ಮುಸ್ಲಿಂ ಸಮುದಾಯದ ಜನರಿಗೆ ಬಾಡಿಗೆ ಮನೆ, ಅಂಗಡಿಗಳನ್ನು ಬಾಡಿಗೆ ನೀಡುವುದಿಲ್ಲ. ಇಲ್ಲಿನ ಸಂಸ್ಥೆಗಳಲ್ಲೂ ಕೆಲಸ ನೀಡುವುದನ್ನ ನಿರಾಕರಿಸುವಂತೆ ಮನವಿ ಮಾಡಿದ್ದೇವೆ. ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತದೆ. ಹಿಂದೆಯೂ ಈ ರೀತಿ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ.

ಈ ನಡುವೆ ಗುರುಗ್ರಾಮ್‌ ನಗರ ಪಾಲಿಕೆ ಕೌನ್ಸಿಲರ್‌ ಬ್ರಹ್ಮ್ ಯಾದವ್, ಜನರು ತಮ್ಮ ಆಸ್ತಿಯನ್ನು ಇತರರಿಗೆ ಬಾಡಿಗೆ ಅಥವಾ ಮಾರಾಟ ಮಾಡುವ ಮುನ್ನ ಗುರುತಿನ ಸಾಕ್ಷಿಗಳನ್ನ ಪರಿಶೀಲಿಸಬೇಕು. ಜಿಲ್ಲೆಯ ವಾಲ್ಮೀಕಿ ಜನಾಂಗದವರೇ ಮಾಂಸದ ಅಂಗಡಿಗಳನ್ನ ನಡೆಸಬೇಕು. ಮುಸ್ಲಿಮರು ನಡೆಸುತ್ತಿರುವ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

ಇನ್ನು ನುಹ್‌ ಜಿಲ್ಲೆಯಲ್ಲಿ ಸಂಭವಿಸಿದ ಕೋಮು ಸಂಘರ್ಷ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಗುರುಗ್ರಾಮ್‌, ಸೋನಿಪತ್‌ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೂ ವ್ಯಾಪಿಸಿತ್ತು. ಗಲಭೆಕೋರರ ಗುಂಪು ವಿವಿಧ ಪ್ರದೇಶಗಳಿಗೆ ನುಗ್ಗಿ ಹಾನಿಯುಂಟುಮಾಡಿತ್ತು. ಈವರೆಗೆ 50ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದ್ದು 200ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ. ಇದರೊಂದಿಗೆ ಹಿಂಸಾಚಾರಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.

suddiyaana