ಗಂಗಾ ನದಿಯಲ್ಲಿ ಭೀಕರ ದುರಂತ! – 13 ಮಕ್ಕಳು ಸೇರಿ 15 ಮಂದಿ ಸಾ*ವು!

ಗಂಗಾ ನದಿಯಲ್ಲಿ ಭೀಕರ ದುರಂತ! – 13 ಮಕ್ಕಳು ಸೇರಿ 15 ಮಂದಿ ಸಾ*ವು!

ಬಿಹಾರದ ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿದ್ದು, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ 13 ಮಕ್ಕಳು ಸೇರಿದಂತೆ ಒಟ್ಟು 15 ಮಂದಿ ಮೃತಪಟ್ಟಿದ್ದಾರೆ ಎನ್ನಲಾದ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಬಿಹಾರದ ವೈಶಾಲಿ ಜಿಲ್ಲೆಯ ಗಂಗಾ ನದಿಯಲ್ಲಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ನದಿಯಲ್ಲಿ ದೋಣಿ ಸಾಗುತ್ತಿದ್ದ ವೇಳೆ ಅದು ಏಕಾಏಕಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ದೋಣಿಯಲ್ಲಿದ್ದವರು ನೀರಿಗೆ ಬಿದ್ದ ಪರಿಣಾಮ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: ಸಿಎಂ, ಮಾಜಿ ಸಿಎಂಗೆ ಸ್ಟಿಂಗ್ ಶಾಕ್? – ಕೋರ್ಟ್ ಮೆಟ್ಟಿಲೇರಿದ ಸಿದ್ದರಾಮಯ್ಯ!

ದುರಂತಕ್ಕೀಡಾದ ದೋಣಿಯಲ್ಲಿ ಸುಮಾರು 20 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ ಏಳು ಮಕ್ಕಳನ್ನು ರಕ್ಷಿಸಲಾಗಿದ್ದು, ಪಾಟ್ನದ ಎನ್‌ಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ವರ್ಷಾ ಸಿಂಗ್ ತಿಳಿಸಿದ್ದಾರೆ.  ರಾಮ್‌ಪುರ ಶ್ಯಾಮಚಂದ್ ಗ್ರಾಮದ ನಿವಾಸಿಗಳು ನದಿಯ ಇನ್ನೊಂದು ಬದಿಯ ಗ್ರಾಮವೊಂದರಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆರಂಭದಲ್ಲಿ ಐದರಿಂದ ಎಂಟು ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಸಾವಿನ ಸಂಖ್ಯೆ 15ಕ್ಕೆ ಏರಿರುವುದು ದೃಢಪಟ್ಟಿದೆ. ಮೃತಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ.

ವಿಶೇಷವಾಗಿ, ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು , ಕುಟುಂಬದವರ ಜೊತೆ ಸಂತೋಷದಿಂದ ಪ್ರಯಾಣಕ್ಕೆ ತೆರಳಿದ್ದ ಮಕ್ಕಳು ದುರಂತಕ್ಕೆ ಬಲಿಯಾಗಿರುವುದು ತೀವ್ರ ನೋವು ತಂದಿದೆ. ಘಟನೆ ನಡೆದ ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ನದಿಯಲ್ಲಿ ಸಿಲುಕಿದವರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.

Kishor KV

Leave a Reply

Your email address will not be published. Required fields are marked *