ಪ್ರಿಯತಮನ ಮೊಬೈಲ್‌ನಲ್ಲಿ 13,000 ನಗ್ನಚಿತ್ರಗಳು – ಫೋನ್ ಚೆಕ್ ಮಾಡಲು ಹೋದ ಪ್ರಿಯತಮೆಗೆ ಫುಲ್ ಶಾಕ್..!

ಪ್ರೀತಿಯಲ್ಲಿ ಬಿದ್ದ ಮೇಲೆ ಪ್ರೇಮಿ ಪ್ರೇಯಸಿಗಾಗಿ ಏನೂ ಬೇಕಾದರೂ ಮಾಡಬಲ್ಲ. ಎಷ್ಟು ದುಡ್ಡು ಬೇಕಾದರೂ ಖರ್ಚು ಮಾಡಬಲ್ಲ. ಎಷ್ಟೇ ರಿಸ್ಕ್ ಅನಿಸುವ ಕೆಲಸವನ್ನೂ ಮಾಡಬಲ್ಲ. ಆದರೆ, ಫೋನ್ ತೋರಿಸು ಅಂದರೆ ಮಾತ್ರ ಗಾಬರಿಯಾಗುತ್ತಾನೆ. ಫೋನ್ ತೋರಿಸಲು ಮಾತ್ರ ಹಿಂದೆ ಮುಂದೆ ನೋಡ್ತಾನೆ. ಆದರೆ, ಇಲ್ಲೊಬ್ಬಳು ಪ್ರೇಯಸಿ, ಪ್ರೇಮಿಯ ಫೋನ್ ನೋಡಿ ಶಾಕ್ ಆಗಿದ್ದಲ್ಲದೇ, ಪ್ರೇಮಿ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಇದನ್ನೂ ಓದಿ: ಶಾಲೆಗೆ ರಜೆ ಸಿಗಲಿ ಅಂತಾ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ! – ವಿದ್ಯಾರ್ಥಿಯ ಕಿತಾಪತಿಗೆ ಮೂವರು ಅಸ್ವಸ್ಥ!
ಮನೆಯಲ್ಲಿ ಗಂಡ ಹೆಂಡತಿ ಕೂಡಾ ಎಷ್ಟೇ ಅನ್ಯೋನ್ಯವಾಗಿದ್ದರೂ ಕೂಡಾ ಗಂಡ ಮಾತ್ರ ಹೆಂಡತಿಗೆ ತನ್ನ ಫೋನ್ ಮುಟ್ಟಲು ಬಿಡುವುದೇ ಇಲ್ಲ. ಇನ್ನು ಪ್ರೇಮಿಗಳು. ಒಬ್ಬರ ಫೋನ್ ಒಬ್ಬರು ನೋಡುವುದಕ್ಕೆ ಬಿಡುವುದೇ ಇಲ್ಲ. ಆದರೆ, ಇಲ್ಲೊಂದು ಪ್ರಕರಣ ನಡೆದಿದೆ. ಪ್ರೇಮಿಯ ಫೋನ್ ಚೆಕ್ ಮಾಡಲು ಹೋದ ಪ್ರೇಯಸಿಯ ಹೃದಯ ಒಡೆಯದೇ ಉಳಿದಿದ್ದೇ ಹೆಚ್ಚು. ಬೆಂಗಳೂರಿನ ನಿವಾಸಿಯಾದ 22 ವರ್ಷದ ಯುವತಿಯೊಬ್ಬಳು ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ನಂತರ ಆಕೆಗೆ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಆದಿತ್ಯ ಸಂತೋಷ್ ಎಂಬ ಯುವಕನ ಪರಿಚಯವಾಗುತ್ತದೆ. ಇವರಿಬ್ಬರ ನಡುವೆ ಉತ್ತಮ ಸ್ನೇಹ ಬೆಳೆದು ಇಬ್ಬರೂ ಕಳೆದ ನಾಲ್ಕು ತಿಂಗಳಿನಿಂದ ರಿಲೇಷನ್ ಶಿಪ್‌ನಲ್ಲೂ ಇರುತ್ತಾರೆ. ತಾನು ಸಂತೋಷ್ ಜೊತೆ ಕಳೆದಿದ್ದ ಕೆಲವು ಆತ್ಮೀಯ ಕ್ಷಣಗಳ ಫೋಟೋಸ್, ವಿಡಿಯೋಗಳನ್ನು ಡಿಲಿಟ್ ಮಾಡಲು ಆತನಿಗೆ ತಿಳಿಯದಂತೆ ಆವನ ಫೋನ್ ತೆಗೆದುಕೊಂಡು ಗ್ಯಾಲರಿ ಓಪನ್ ಮಾಡುತ್ತಾಳೆ ಪ್ರೇಯಸಿ. ಆಗ ಯುವತಿಗೆ ಶಾಕ್ ಆಗಿದೆ. ತನ್ನ ಪ್ರಿಯತಮ ಸಂತೋಷ್ ಫೋನ್‌ನಲ್ಲಿ ಆಕೆ ಕಂಡಿದ್ದು ಬರೋಬ್ಬರಿ 13 ಸಾವಿರ ನಗ್ನ ಚಿತ್ರಗಳು. ಇದನ್ನು ನೋಡಿದ ಪ್ರಿಯತಮೆ ಸಂತೋಷ್ ಜೊತೆ ಜಗಳವಾಡುತ್ತಾಳೆ. ಅತನಿಂದ ದೂರವಾಗಿದ್ದಾಳೆ. ಬಳಿಕ ಮುಂದೆ ತನಗೆ ಹಾಗೂ ತನ್ನ ಸಹೋದ್ಯೋಗಿಗಳಿಗೆ ಸಂತೋಷ್‌ನಿಂದ ಯಾವುದೇ ಸಮಸ್ಯೆ ಆಗಬಾರದು ಎಂದು ನವೆಂಬರ್ 20 ರಂದು ತನ್ನ ಕಚೇರಿಯ ಹಿರಿಯರಿಗೆ ವಿಷಯವನ್ನ ತಿಳಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಂತೋಷ್ ಫೋನ್‌ನಲ್ಲಿರುವ 13,000 ನಗ್ನ ಚಿತ್ರಗಳಲ್ಲಿ, ಕೆಲವು ಅವರ ಮಹಿಳಾ ಸಹೋದ್ಯೋಗಿಗಳದ್ದೂ ಇದೆ ಎಂದು ತಿಳಿದು ಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಬೆಳ್ಳಂದೂರು ಮೂಲದ ಬಿಪಿಒ ಕಂಪನಿಯು ನವೆಂಬರ್ 23 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತೋಷ್ ವಿರುದ್ಧ ದೂರು ದಾಖಲಿಸಿದೆ. ಈ ಘಟನೆ ಹಲವಾರು ಇತರ ಮಹಿಳೆಯರ ಮೇಲೆ ಪರಿಣಾಮ ಬೀರಬಹುದು. ಕಚೇರಿಯಲ್ಲಿ ಇತರ ಮಹಿಳೆಯರಿಗೆ ಯಾವುದೇ ಹಾನಿ ಮಾಡದಿದ್ದರೂ, ಅವರ ಉದ್ದೇಶ ಯಾರಿಗೂ ತಿಳಿದಿರಲಿಲ್ಲ. ಫೋಟೋಗಳು ಲೀಕ್ ಆಗಿದ್ದರೆ ಅದರಿಂದ ಭಾರೀ ಅನಾಹುತ ಆಗುತ್ತಿತ್ತು. ಸದ್ಯ ಘಟನೆ ಬೇಗೆ ಬಯಲಾಗಿದ್ದು ದೂರು ದಾಖಲಿಸಿದ್ದೇವೆ ಎಂದು ಕಂಪನಿಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವನ ಕಚೇರಿಯಿಂದಲೇ ಬಂಧಿಸಿದ್ದಾರೆ. ಆದರೆ, ಈ ಚಿತ್ರಗಳನ್ನು ಸಂತೋಷ್ ಏಕೆ ಸಂಗ್ರಹಿಸಿಟ್ಟಿದ್ದ. ಇದರ ಉದ್ದೇಶವೇನು ಎಂಬ ಬಗ್ಗೆ ತನಿಖೆಯ ನಂತರವೇ ಸತ್ಯ ಬಯಲಾಗಬೇಕಿದೆ.