ಉತ್ಸವದ ವೇಳೆ ಜನರೇಟರ್ ಗೆ ಕೂದಲು ಸಿಲುಕಿ ಬಾಲಕಿ ಸಾವು – ಅಯ್ಯೋ ಇದೆಂಥಾ ದುರಂತ..?

ಉತ್ಸವದ ವೇಳೆ ಜನರೇಟರ್ ಗೆ ಕೂದಲು ಸಿಲುಕಿ ಬಾಲಕಿ ಸಾವು – ಅಯ್ಯೋ ಇದೆಂಥಾ ದುರಂತ..?

ಮೊದಲೇ ತಾಯಿಯನ್ನ ಕಳೆದುಕೊಂಡಿದ್ದ ಕಂದ ಅದು. ಅಪ್ಪನ ನೆರಳಿನಲ್ಲಿಯೇ ಬೆಳೆಯುತ್ತಿದ್ದ ಆ ಬಾಲಕಿ ಬಾಳಲ್ಲಿ ವಿಧಿ ತನ್ನ ವಕ್ರದೃಷ್ಟಿ ಬೀರಿದೆ. ಉತ್ಸವದ ವೇಳೆಯೇ ಹೊಂಚಾಕಿ ಕುಳಿತಿದ್ದ ಜವರಾಯ ಉಸಿರನ್ನೇ ನಿಲ್ಲಿಸಿದ್ದಾನೆ.ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಎತ್ತಿನ ಗಾಡಿಯಲ್ಲಿ ಇರಿಸಲಾಗಿದ್ದ ಜನರೇಟರ್‌ಗೆ ಕೂದಲು ಸಿಲುಕಿ 13 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ವಿಚ್ಚಂತಂಗಲ್ ಗ್ರಾಮದ ಎಸ್.ಲಾವಣ್ಯ ಮೃತ ಬಾಲಕಿ. ಲಾವಣ್ಯ ಮೂರು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡಿದ್ದು, ಆಕೆಯ ತಂದೆ ಸರವಣನ್ ಅವರು ಚೆನ್ನೈನಲ್ಲಿ ವಾಸಿಸುತ್ತಿದ್ದಳು.

ಇದನ್ನೂ ಓದಿ : 23 ವರ್ಷದ MBBS ವಿದ್ಯಾರ್ಥಿ H3N2 ವೈರಸ್ ಗೆ ಬಲಿ..?- ಪಿಕ್ನಿಕ್ ವೇಳೆಯೇ ಅಂಟಿತ್ತಾ ಹೆಮ್ಮಾರಿ?

ಲಾವಣ್ಯ ಮತ್ತು ಆಕೆಯ ಕಿರಿಯ ಸಹೋದರ ಭುವನೇಶ್ (9) ತಮ್ಮ ಅಜ್ಜ-ಅಜ್ಜಿಯಾದ ಕಾಂದೀಪನ್ ಮತ್ತು ಲತಾ ಅವರೊಂದಿಗೆ ವಾಸಿಸುತ್ತಿದ್ದರು. ಭಾನುವಾರ ರಾತ್ರಿ ಗ್ರಾಮದಲ್ಲಿ ದೇವಸ್ಥಾನದ ಉತ್ಸವವಿತ್ತು. ಊರ ಜನರೆಲ್ಲಾ ದೇವತೆಯಿದ್ದ ರಥವನ್ನು ಎಳೆಯುತ್ತಿದ್ದರು. ಡೀಸೆಲ್ ಜನರೇಟರ್ ಹೊಂದಿದ್ದ ಎತ್ತಿನ ಬಂಡಿಯನ್ನು ರಥದ ಹಿಂಭಾಗದಲ್ಲಿ ಇರಿಸಲಾಗಿತ್ತು. ಉತ್ಸವದಲ್ಲಿ ಭಾಗಿಯಾಗಿದ್ದ ಹಲವು ಮಕ್ಕಳು ಜನರೇಟರ್ ಸುತ್ತಲೂ ಜಮಾಯಿಸಿದ್ದರು.

ರಾತ್ರಿ 10 ಗಂಟೆ ಸುಮಾರಿಗೆ ಜನರೇಟರ್ ಬಳಿ ಕುಳಿತಿದ್ದ ಲಾವಣ್ಯ ಕೂದಲು ಆಕಸ್ಮಿಕವಾಗಿ ಜನರೇಟರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಲೌಡ್ ಸ್ಪೀಕರ್‌ಗಳಿದ್ದ ಕಾರಣ ಸಹಾಯಕ್ಕಾಗಿ ಲಾವಣ್ಯ ಕೂಗಿಕೊಂಡರೂ ಯಾರಿಗೂ ಕೇಳಿಸಿಲ್ಲ. ನಂತರ, ಜನರೇಟರ್ ಸುಮ್ಮನಾಗಿದೆ. ಬಂಡಿಯಲ್ಲಿನ ದೀಪಗಳು ಆಫ್ ಆಗಿವೆ. ಈ ವೇಳೆ ಬಾಲಕಿಯ ಕಿರುಚಾಟ ಕೇಳಿದ ಜನ ಸಹಾಯಕ್ಕೆ ಧಾವಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಕೂಡಲೇ ಬಾಲಕಿಯನ್ನ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ ತಲೆಗೆ ಗಂಭೀರವಾಗಿ ಗಾಯವಾಗಿದ್ದ ಪರಿಣಾಮ ಮೃತಪಟ್ಟಿದ್ದಾಳೆ. ಮಗರಾಳ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜನರೇಟರ್ ಆಪರೇಟರ್ ಮುನುಸಾಮಿಯನ್ನು ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

suddiyaana