ಅಕ್ವೇರಿಯಂನಲ್ಲಿದ್ದ ಮೀನು ಮೃತಪಟ್ಟಿದ್ದಕ್ಕೆ ಬಾಲಕ ಆತ್ಮಹತ್ಯೆ – ಮನೆಯ ಮಹಡಿ ಮೇಲೆ ಕಂಡಿದ್ದು ಭಯಾನಕ!

ಅಕ್ವೇರಿಯಂನಲ್ಲಿದ್ದ ಮೀನು ಮೃತಪಟ್ಟಿದ್ದಕ್ಕೆ ಬಾಲಕ ಆತ್ಮಹತ್ಯೆ – ಮನೆಯ ಮಹಡಿ ಮೇಲೆ ಕಂಡಿದ್ದು ಭಯಾನಕ!

ಮನೆಗಳಲ್ಲಿ ಈಗ ಅಕ್ವೇರಿಯಂ ಇಡುವುದು ಕೂಡ ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಅದ್ರಲ್ಲೂ ಕೆಲವರು ವಾಸ್ತು ಹೆಸ್ರಲ್ಲಿ ಇಂಥದ್ದೇ ಮೀನು, ಇಂಥದ್ದೇ ಸ್ಥಳದಲ್ಲಿ ಇಡಬೇಕು ಅಂತೆಲ್ಲಾ ನಂಬುತ್ತಾರೆ. ಮನೆಗಳಲ್ಲಿ ಹೀಗೆ ಮೀನುಗಳನ್ನ ಸಾಕಿದಾಗ ಮಕ್ಕಳಿಗೂ ಇಷ್ಟವಾಗುತ್ತದೆ. ದಿನನಿತ್ಯ ಅವುಗಳಿಗೆ ಫುಡ್ ಹಾಕುತ್ತಾ ಖುಷಿ ಪಡ್ತಾರೆ. ಹೀಗೆ ಇಲ್ಲೊಬ್ಬ ಬಾಲಕ ಮೀನನ್ನ ಅತಿಯಾಗಿ ಹಚ್ಚಿಕೊಂಡಿಲ್ಲ. ಆದ್ರೆ ಮುಂದೆ ಆಗಿದ್ದು ಅನಾಹುತ.

ಇದನ್ನೂ ಓದಿ : ಸೌರಮಂಡಲದಲ್ಲಿ ನಡೆಯಿತು ಅಪರೂಪದ ಚಮತ್ಕಾರ – ಖಗೋಳದ ಕೌತುಕತೆ ನಿಮಗೂ ಕಾಣುತ್ತೆ..!

ಕೇರಳದ ತಿರುವನಂತಪುರಂ ನಲ್ಲಿ ನಡೆದಿರೋ ಈ ಘಟನೆಯ ಬಗ್ಗೆ ತಿಳಿದ್ರೆ ಪೋಷಕರಿಗೆ ಭಯವಾಗೋದು ಪಕ್ಕಾ. ಯಾಕಂದ್ರೆ ಮೀನು ಸಾವನ್ನಪ್ಪಿದ್ದಕ್ಕೆ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಪೊನ್ನಾಯಿಯ ಚಂಗರಂಕುಲಂನಲ್ಲಿ ಈ ಘಟನೆ ನಡೆದಿದೆ. ರೋಷನ್ ಮೆನನ್ (13) ಮೃತ ಬಾಲಕ. ರೋಷನ್ ಮೂಕುತಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ. ಜೊತೆಗೆ ಆತನಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಹೀಗಾಗಿ ಪೋಷಕರು ಮನೆಯಲ್ಲಿ ಅಕ್ವೇರಿಯಂ ಇಟ್ಟಿದ್ರು. ಆದ್ರೆ  ಅಕ್ವೇರಿಯಂಯಲ್ಲಿ (Aquarium) ಸಾಕಿದ್ದ ಮೀನು (Fish) ಹಿಂದಿನ ದಿನ ಸಾವನ್ನಪ್ಪಿತ್ತು. ಇದರಿಂದಾಗಿ ರೋಷನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಮೀನು ಸಾವನ್ನಪ್ಪಿದ ಮರುದಿನ ರೋಷನ್ ಪಾರಿವಾಳಕ್ಕೆ ಆಹಾರ ನೀಡಲು ಮನೆಯಿಂದ ಹೊರಗೆ ಬಂದಿದ್ದ. ಅದಾದ ಬಳಿಕ ಒಂದು ಗಂಟೆಯಾದರೂ ರೋಷನ್ ಮನೆಗೆ ಮರಳಿ ಬಂದಿಲ್ಲ. ಜೊತೆಗೆ ಮನೆಯ ಸುತ್ತಮುತ್ತಲೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ಆತಂಕಗೊಂಡು ರೋಷನ್ ಕುಟುಂಬಸ್ಥರು ಹುಡಕಲು ಪ್ರಾರಂಭಿಸಿದ್ದಾರೆ. ಬಳಿಕ ಮಹಡಿಗೆ ಹೋದಾಗ ಟೆರೇಸ್‍ನಲ್ಲಿ ರೋಷನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

 

suddiyaana