ಬೇಲಿ ಹಾರಿ, ಕಾರಿನಲ್ಲಿದ್ದವನ ಮೇಲೆ ಎರಗಿದ ಚಿರತೆ – ಜೀವ ಉಳಿದಿದ್ದೇ ಹೆಚ್ಚು!

ಬೇಲಿ ಹಾರಿ, ಕಾರಿನಲ್ಲಿದ್ದವನ ಮೇಲೆ ಎರಗಿದ ಚಿರತೆ – ಜೀವ ಉಳಿದಿದ್ದೇ ಹೆಚ್ಚು!

ಅಸ್ಸಾಂ: ದೇಶದಾದ್ಯಂತ ಈಗ ಚಿರತೆ ಬಿಟ್ಟರೆ ಬೇರೆ ಮಾತೇ ಇಲ್ಲ. ಮಂಡ್ಯ, ಬೆಂಗಳೂರು ಸೇರಿ ಹಲವೆಡೆ ಚಿರತೆಗಳು ದಾಳಿ ನಡೆಸುತ್ತಿವೆ. ಬರೀ ಕುರಿ, ನಾಯಿ ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಚಿರತೆಗಳು, ಈಗ ಜನರ ಮೇಲೂ ದಾಳಿ ಮಾಡುತ್ತಿವೆ. ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೇವೆ. ಅಸ್ಸಾಂನ ಜೋಹ್ರಾತ್ ಪ್ರದೇಶದ ಚಿರತೆ ದಾಳಿ ವಿಡಿಯೋ ಭಾರಿ ವೈರಲ್ ಆಗುತ್ತಿದೆ.

ಅಸ್ಸಾಂನ ಜೋಹ್ರಾತ್ ಪ್ರದೇಶದಲ್ಲಿನ ಮಳೆಕಾಡು ಸಂಶೋಧನಾ ಕೇಂದ್ರದ (ಆರ್ ಎಫ್ ಆರ್ ಐ) ದ ವಸತಿಗೃಹದ ಕ್ಯಾಂಪ್ ಆವರಣದ ತಡೆಬೇಲಿಯಿಂದ ಚಿರತೆಯೊಂದು ಜಿಗಿದು ಕಾರಿನಲ್ಲಿದ್ದ ಯುವಕನ ಮೇಲೆ ದಾಳಿ ಮಾಡಿದೆ. ಈ ಭಯಾನಕ ದೃಶ್ಯ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಮೂರು ತಿಂಗಳಿಂದ ಬೃಂದಾವನದ ಬಳಿ ಆಡಿದ್ದೇ ಆಟ – ಕೊನೆಗೂ ಸೆರೆ ಸಿಕ್ಕ ಚಿರತೆ

ಕಳೆದ 24 ಗಂಟೆಗಳಿಂದ ಚಿರತೆ ಅರಣ್ಯಾಧಿಕಾರಿಗಳು, ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 15 ಮಂದಿ ಮೇಲೆ ದಾಳಿ ಮಾಡಿದೆ. ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವ ಪ್ರಯತ್ನದ ವೇಳೆ ವಿಡಿಯೋವೊಂದನ್ನು ಸೆರೆಹಿಡಿದಿದ್ದಾರೆ. ಅದರಲ್ಲಿ ಚಿರತೆ ದೊಡ್ಡ ಮುಳ್ಳುತಂತಿ ಬೇಲಿಯಿದ್ದ ಗೋಡೆಯನ್ನು ಹಾರಿ ವಾಹನಗಳ ಮೇಲೆ ದಾಳಿ ಮಾಡುವುದು ಕಂಡುಬಂದಿದೆ.

ಆರ್‌ಎಫ್‌ಆರ್‌ಐ ಜೋರ್ಹತ್‌ನ ಹೊರವಲಯದಲ್ಲಿ ಕಾಡುಗಳಿದ್ದು, ಅಲ್ಲಿಂದ ಚಿರತೆ ಜನವಸತಿ ಪ್ರದೇಶಕ್ಕೆ ಬಂದಿದೆ ಎನ್ನಲಾಗಿದೆ. ಚಿರತೆಯನ್ನು ಹಿಡಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ. ಚಿರತೆ ದಾಳಿಯಿಂದಾಗಿ ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ಇಲ್ಲಿಯವರೆಗೂ ಯಾರಿಗೂ ಪ್ರಾಣಾಪಾಯವಾಗಿರುವ ಬಗ್ಗೆ ವರದಿಯಾಗಿಲ್ಲ.

suddiyaana