ಅಪರಿಚಿತನಾಗಿಯೇ ಉಳಿದ ಕಳ್ಳತನದ ಆರೋಪಿ! – ಸತ್ತು 128 ವರ್ಷಗಳ ಬಳಿಕ ಅಂತ್ಯಕ್ರಿಯೆಗೆ ಡೇಟ್‌ ಫಿಕ್ಸ್‌!

ಅಪರಿಚಿತನಾಗಿಯೇ ಉಳಿದ ಕಳ್ಳತನದ ಆರೋಪಿ! – ಸತ್ತು 128 ವರ್ಷಗಳ ಬಳಿಕ ಅಂತ್ಯಕ್ರಿಯೆಗೆ ಡೇಟ್‌ ಫಿಕ್ಸ್‌!

ಯಾರಾದರೂ ಸಾವನ್ನಪ್ಪಿದರೆ ಆ ದಿನವೇ ಅವರ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಇನ್ನು ಸಾವನ್ನಪ್ಪಿದವರ ಕುಟುಂಬಸ್ಥರು ದೂರದ ಊರುಗಳಲ್ಲಿದ್ದರೆ ಅವರು ಬರುವವರೆಗೂ ಕಾದು ನಂತರ ಅಂತ್ಯಕ್ರಿಯೆ ಮಾಡಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಸತ್ತು 128 ವರ್ಷಗಳಾದರೂ ಅಂತ್ಯ ಸಂಸ್ಕಾರ ಮಾಡಿಲ್ಲ. ಇದೀಗ ಕಡೆಗೂ ಆತನ ಅಂತ್ಯಕ್ರಿಯೆಗೆ ದಿನಾಂಕ ನಿಗದಿಯಾಗಿದೆ.

ಏನಿದು ಘಟನೆ?

ವ್ಯಕ್ತಿಯೊಬ್ಬ ಕಳ್ಳತನದ ಆರೋಪದಿಂದ ಜೈಲು ಸೇರಿದ್ದ. ಆತ ಜೈಲಿನಲ್ಲಿದ್ದಾಗ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ. 19 ನವೆಂಬರ್ 1895 ರಂದು ಸಾವನ್ನಪ್ಪಿದ್ದಾನೆ. ಆತ ಸತ್ತು ಸುಮಾರು 128 ವರ್ಷಗಳಾಗಿದ್ದು ಈಗ ಅಂತ್ಯಕ್ರಿಯೆ ಮಾಡಲಾಗುತ್ತದೆ. ವ್ಯಕ್ತಿಯನ್ನು ಮುಂದಿನ ಶನಿವಾರ ಅಂದರೆ 7 ಅಕ್ಟೋಬರ್ (2023) ರಂದು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ.

ಅಂದೇ ಅಂತ್ಯ ಸಂಸ್ಕಾರ ಮಾಡಿಲ್ಲ ಯಾಕೆ?

ಅವನೊಬ್ಬ  ಕಳ್ಳ. 128 ವರ್ಷಗಳ ಹಿಂದೆ ಆತ ಜೈಲಿನಲ್ಲಿಯೇ ಸಾವನ್ನಪ್ಪಿದ್ದಾನೆ. ಆದರೆ ಆತನ ನಿಜವಾದ ಹೆಸರನ್ನು ಹೇಳದ ಕಾರಣ ಆತನ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಜೈಲು ಅಧಿಕಾರಿಗಳು ಮತ್ತು ಪೊಲೀಸರು ನಿರಾಕರಿಸಿದ್ದರು. ಇದರಿಂದ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಸಾಧ್ಯವಾಗದ ಕಾರಣ ಮೃತ ದೇಹವನ್ನು ಮಮ್ಮಿಯಾಗಿ ಪರಿವರ್ತಿಸಿ ಸಂರಕ್ಷಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೂ ಮಮ್ಮಿ ಸುರಕ್ಷಿತವಾಗಿತ್ತು.

ಮಮ್ಮಿ ಸೂಟ್ ಮತ್ತು ಟೈ ಇನ್ನೂ ಹಾಗೇ ಇದೆ!

ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಮಮ್ಮಿ ಸೂಟ್ ಮತ್ತು ಟೈ ಇನ್ನೂ ಹಾಗೇ ಇದೆ. ಕೂದಲು ಮತ್ತು ಹಲ್ಲುಗಳು ಸಹ ಹಾಗೇ ಇವೆ. ಅಮೆರಿಕದ ಪೆನ್ಸಿಲ್ವೇನಿಯಾ ಜೈಲಿನಲ್ಲಿ ಸಾವನ್ನಪ್ಪಿದ್ದ ಕಳ್ಳನ ದೇಹವನ್ನು ಅಧಿಕಾರಿಗಳು ಮಮ್ಮಿ ಮಾಡಿದ್ದಾರೆ. ಇದರ ಫಲವಾಗಿ ಅಮೆರಿಕದ ಪುಟ್ಟ ನಗರವಾದ ರೀಡಿಂಗ್ ನಲ್ಲಿ ಕಳೆದ 128 ವರ್ಷಗಳಿಂದ ಸಂರಕ್ಷಿಸಲ್ಪಟ್ಟ ‘ಸ್ಟೋನ್ ಮ್ಯಾನ್ ವಿಲ್ಲಿ’ ಎಂದು ಕರೆಯುತ್ತಾರೆ. ಮುಂದಿನ ಶನಿವಾರ (ಅಕ್ಟೋಬರ್ 7) ಈ ಮಮ್ಮಿಯ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಇದನ್ನೂ ಓದಿ: ತಾಯಿಗೆ ಸರ್ಪ್ರೈಸ್ ಗಿಫ್ಟ್‌ ನೀಡಿದ ರಾಹುಲ್‌ ಗಾಂಧಿ! – ಮಗ ಕೊಟ್ಟ ಉಡುಗೊರೆ ನೋಡಿ ಸೋನಿಯಾ ಗಾಂಧಿ ಭಾವುಕ!  

ಮಮ್ಮಿಯನ್ನು ಪ್ರದರ್ಶನಕ್ಕಿಟ್ಟಿದ್ದ ಅಧಿಕಾರಿಗಳು!

ಆ ವ್ಯಕ್ತಿ ಸತ್ತ ನಂತರ ಮೃತ ದೇಹವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ಅಧಿಕಾರಿಗಳು ನಡೆಸಿದ ಪ್ರಯತ್ನ ವ್ಯರ್ಥವಾಗಿದೆ. ಬಳಿಕ ಸರ್ಕಾರದ ಅನುಮತಿ ಪಡೆದು ಅಲ್ಲಿನ ಸಿಬ್ಬಂದಿ ಅಂದು ತಮಗಿದ್ದ ಅಲ್ಪ ಜ್ಞಾನದಿಂದಲೇ ಮೃತ ದೇಹವನ್ನು ಮಮ್ಮಿಯಾಗಿ ಪರಿವರ್ತಿಸಿದ್ದಾರೆ. ಆ ಮಮ್ಮಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಮಮ್ಮಿಯನ್ನು ನೋಡಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು.

ಅಪರಿಚಿತನಾಗಿಯೇ ಉಳಿದ ಆರೋಪಿ!

ಮೃತ ವ್ಯಕ್ತಿ ಜೇಬುಗಳ್ಳ ಮದ್ಯವ್ಯಸನಿ ಎಂಬೆಲ್ಲಾ ಕುಖ್ಯಾತಿ ಗಳಿಸಿದ್ದ. ಕಳ್ಳನ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲು ಜೈಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಜೈಲಿಗೆ ಕರೆತಂದಾಗ ದಾಖಲಿಸಿದ ವಿವರಗಳೊಂದಿಗೆ ಸಂಬಂಧಿಕರನ್ನು ವಿಚಾರಿಸಿದರು. ವಿಚಾರಣೆ ವೇಳೆ ಕಳ್ಳ ತನ್ನ ಹೆಸರನ್ನು ಇಡದೆ ಬೇರೆ ಹೆಸರನ್ನು ಇಟ್ಟಿರುವುದು ಗೊತ್ತಾಗಿದೆ. ಈತನಿಗೆ ತನ್ನ ಕುಟುಂಬದವರ ಪರಿಚಯ ತಿಳಿಸಿ ಅವರನ್ನು ಅವಮಾನಿಸುವುದಕ್ಕೆ ಇಷ್ಟವಿರಲಿಲ್ಲವಂತೆ. ಹೀಗಾಗಿ ಸಾವಿನ ಕೊನೆ ಕ್ಷಣದಲ್ಲೂ ಈತ ತನ್ನ ಕುಟುಂಬದ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಡದೇ ಅಪರಿಚಿತನಾಗಿಯೇ ಉಳಿದಿದ್ದನಂತೆ.

ಬೀದಿಗಳಲ್ಲಿ ಮಮ್ಮಿಯ ಶವಯಾತ್ರೆಗೆ ಸಿದ್ದತೆ!

128 ವರ್ಷಗಳ ನಂತರವೂ ಈ ಮಮ್ಮಿಯ ಕೂದಲು ಮತ್ತು ಹಲ್ಲುಗಳು ಹಾಗೇ ಇದೆ. ಅಧಿಕಾರಿಗಳು ಇತ್ತೀಚೆಗೆ ಕೆಲವು ಪುರಾತನ ದಾಖಲೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ. ಇದರ ಅಂಗವಾಗಿ ಮುಂದಿನ ಶನಿವಾರ ವಾಚನದ ಬೀದಿಗಳಲ್ಲಿ ಮಮ್ಮಿಯ ಶವಯಾತ್ರೆಗೆ ವ್ಯವಸ್ಥೆ ಮಾಡಲಾಗುತ್ತಿದೆ.

Shwetha M