ವಿಷವಾಗುತ್ತಿದೆ ಕುಡಿಯುವ ನೀರು! – ಕಾವೇರಿ, ಕೃಷ್ಣಾ ಸೇರಿ 12 ನದಿ ನೀರು ಸೇವನೆಗೆ ಯೋಗ್ಯವಲ್ಲ!

ವಿಷವಾಗುತ್ತಿದೆ ಕುಡಿಯುವ ನೀರು! – ಕಾವೇರಿ, ಕೃಷ್ಣಾ ಸೇರಿ 12 ನದಿ ನೀರು ಸೇವನೆಗೆ ಯೋಗ್ಯವಲ್ಲ!

ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆ ಉಂಟಾಗಿದೆ. ಬೇಸಿಗೆಗೆ ಮುನ್ನವೇ ನೀರಿನ ಅಭಾವ ಎದುರಾಗುತ್ತಿದೆ. ಈ ಮಧ್ಯೆಯೇ ರಾಜ್ಯದ ಜನರಿಗೆ ಶಾಕಿಂಗ್‌ ಸುದ್ದಿಯೊಂದು ಹೊರಬಿದ್ದಿದೆ. ಕಾವೇರಿ, ಕೃಷ್ಣಾ ಸೇರಿದಂತೆ ರಾಜ್ಯದ ನದಿಗಳು ಸಂಪೂರ್ಣ ಕಲುಷಿತಗೊಂಡಿದ್ದು, ನೀರನ್ನು ಕುಡಿಯುವುದಕ್ಕೂ ಮುನ್ನ ಯೋಚಿಸುವ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ: ಪ್ರಚೋದನಕಾರಿ ಹೇಳಿಕೆ – ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲು

ಹೌದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದ  12 ನದಿಗಳ ವಿವಿಧ ಭಾಗಗಳ ನೀರು ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯ ವರದಿಯಲ್ಲಿ ಬೆಚ್ಚಿ ಬೀಳಿಸುವಂತಹ ಅಂಶ ಪತ್ತೆಯಾಗಿದೆ. ಆ 12 ನದಿಗಳ ನೀರನ್ನು ನೇರವಾಗಿ ಕುಡಿದರೆ ಗಂಟಲು, ಕಣ್ಣು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ನದಿಗಳ ನೀರಿನ ಗುಣಮಟ್ಟದ ಕುರಿತಂತೆ ಕಾಲಕಾಲಕ್ಕೆ ಪರೀಕ್ಷೆ ನಡೆಸುತ್ತದೆ. ಅದಕ್ಕಾಗಿಯೇ ಸ್ಥಾಪಿಸಲಾಗಿರುವ ಮೇಲ್ವಿಚಾರಣಾ ಘಟಕ (ಮಾನಿಟ ರಿಂಗ್ ಸ್ಟೇಷನ್)ಗಳಲ್ಲಿ ನೀರು ಸಂಗ್ರಹಿಸಿ ಅವುಗಳನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅದರಂತೆ ಕಳೆದ ನವೆಂಬರ್‌ನಲ್ಲಿ ನಡೆಸಲಾದ ಪರೀಕ್ಷೆಯ ವರದಿಯಂತೆ ರಾಜ್ಯದ 12 ನದಿಗಳಲ್ಲಿನ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂಬ ವರದಿ ಬಂದಿದೆ. ಅದರಲ್ಲೂ ಲಕ್ಷ್ಮಣತೀರ್ಥ, ಅರ್ಕಾವತಿ, ಕಬಿನಿ, ಶಿಂಷಾ ನದಿಗಳ ನೀರು ಶುದ್ದೀಕರಿಸಿದ ನಂತರವೂ ಕುಡಿಯಲು ಹಾಗೂ ಬಳಕೆಗೆ ಯೋಗ್ಯವಲ್ಲ ಎಂದು ಉಳಿದಂತೆ ನೇತ್ರಾವತಿ ನದಿ ನೀರನ್ನು ಶುದ್ದೀಕರಿಸಿ ಬಳಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ಯಾವ್ಯಾವ ನದಿ ನೀರು ಕುಡಿಯಲು ಯೋಗ್ಯವಲ್ಲ?

ಅರ್ಕಾವತಿ, ಲಕ್ಷ್ಮಣತೀರ್ಥ, ತುಂಗಭದ್ರಾ, ಭದ್ರಾ, ಕಾವೇರಿ, ಕಬಿನಿ, ಕಾಗಿನಿ, ಕೃಷ್ಣಾ, ಶಿಂಷಾ, ಭೀಮಾ, ನೇತ್ರಾವತಿ ,  ತುಂಗಾ ನದಿಯ ನೀರನ್ನು ಜನರು ನೇರವಾಗಿ ಸೇವಿಸಲು ಯೋಗ್ಯವಲ್ಲ ಎಂದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

ಯಾವ ನದಿಯೂ ವರ್ಗದಲ್ಲಿಲ್ಲ?

ರಾಜ್ಯದ ನದಿಗಳನೀರಿನ ಗುಣಮಟ್ಟವನ್ನಾಧರಿಸಿ ‘ಎ’ನಿಂದ ‘ಇವರೆಗೆ 5 ವರ್ಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಎ ವರ್ಗದ ನೀರು ನೇರವಾಗಿ ಕುಡಿಯಲು ಯೋಗ್ಯವಾದಂತಹದ್ದಾಗಿದೆ. ಉಳಿದಂತೆ ಬಿ ವರ್ಗದ ನೀರನ್ನು ಸ್ನಾನ ಸೇರಿ ಇನ್ನಿತರ ಗೃಹ ಬಳಕೆಗೆ ಉಪಯೋಗಿಸಬಹುದಾಗಿದೆ. ಸಿ ವರ್ಗದ ನೀರನ್ನು ಶುದ್ದೀಕರಿಸಿ, ಎಚ್ಚರಿಕೆಯಿಂದ ಕುಡಿಯಲು ಬಳಕೆ ಮಾಡಬಹುದು. ಡಿ ವರ್ಗದ ನೀರನ್ನು ಮೀನು ಸಾಕಣೆಗೆ ಬಳಸಬಹುದು. ಇ ವರ್ಗದ ನೀರನ್ನು ಕೃಷಿ, ಕೈಗಾರಿಕೆಗಳಿಗೆ ಬಳಸಬಹುದಾಗಿದೆ. ಆದರೆ, ಎವರ್ಗದ ನಂತರದ ಎಲ್ಲ ನೀರನ್ನು ಎಚ್ಚರಿಕೆಯಿಂದ ಬಳಸಬೇಕು. ಆದರೆ, ರಾಜ್ಯದ 12 ನದಿಗಳಲ್ಲಿ ಯಾವ ನದಿಯ ನೀರೂ ಎ ವರ್ಗದ ಗುಣಮಟ್ಟದಲ್ಲಿಲ್ಲ.

Shwetha M