ಅಬ್ಬಬ್ಬಾ.. ಈತನಿಗೆ ಪ್ರತಿದಿನ 110 ಮೊಟ್ಟೆಯೇ ಉಪಹಾರ! – ಎಗ್ಮ್ಯಾನ್ ಸ್ಪೆಷಾಲಿಟಿ ಏನು ಗೊತ್ತಾ?

ಕೆಲವರು ವಿಚಿತ್ರ ಆಹಾರ ಪದ್ದತಿಗಳನ್ನ ಅನುಸರಿಸುತ್ತಾರೆ. ಅದು ಆರೋಗ್ಯಕ್ಕೆ ಒಳ್ಳೆಯದು ಮಾಡುತ್ತೋ ಇಲ್ವೋ ಗೊತ್ತಿಲ್ಲ.. ಆದ್ರೆ ಜನ ತಿನ್ನೋದನ್ನ ಮಾತ್ರ ಬಿಡೋದಿಲ್ಲ. ಇದೀಗ ಇಲ್ಲೊಬ್ಬ ಪ್ರತಿದಿನ ಉಪಹಾರಕ್ಕೆ 110 ಹಸಿ ಮೊಟ್ಟೆಗಳನ್ನ ಸೇವಿಸುತ್ತಿದ್ದಾನೆ. ಇದ್ರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಕಾಂತಾರ ಕನಕವತಿ! – ರುಕ್ಮಿಣಿ ವಸಂತ್ ಕೇಸ್ ಕೊಟ್ಟಿದ್ದು ಯಾರ ಮೇಲೆ?
ಅಂದ್ಹಾಗೆ ನೂರಾರು ಮೊಟ್ಟೆ ತಿನ್ನುವ ವ್ಯಕ್ತಿ ಉಜ್ಬೇಕಿಸ್ತಾನದವರು. ಈ ವ್ಯಕ್ತಿ ಪ್ರತಿದಿನ 110 ಹಸಿ ಮೊಟ್ಟೆಗಳನ್ನು ಸೇವನೆ ಮಾಡುತ್ತಾರೆ. ಸುಮಾರು ವರ್ಷಗಳಿಂದ ಈ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದಾರಂತೆ. ಈ ವಕ್ತಿ, ಇದೊಂದು ಸೂಪರ್ ಫಿಟ್ ಆಹಾರ ಹಾಗೂ ಅನಾರೋಗ್ಯದಿಂದ ದೂರ ಇರಲು ಉಪಕಾರಿ ಎಂದು ಹೇಳಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಮೊಟ್ಟೆಗಳನ್ನು ಬೇಯಿಸದೆ, ಹಸಿಯಾಗಿ ಒಂದು ತಟ್ಟೆಗೆ ಹಾಕಿಕೊಂಡು ಕುಡಿದಿದ್ದಾರೆ. ಮೊಟ್ಟೆಯನ್ನ ಕುಡಿಯುತ್ತಾ, ಇದು ನನ್ನ ಸ್ನಾಯುಗಳನ್ನು ಬಲಪಡಿಸುತ್ತದೆ. ಜತೆಗೆ ತನ್ನ ತ್ರಾಣವನ್ನು ಹೆಚ್ಚಿಸಿ, 20 ವರ್ಷದ ಯುವಕ ರೀತಿ ಕಾಣುವಂತೆ ಮಾಡುತ್ತದೆ. ಇದನ್ನು ಸೇವನೆ ಮಾಡಿದ ನಂತರ ಒಂದು ದಿನವು ಅನಾರೋಗ್ಯದಿಂದ ಬಳಲಿಲ್ಲ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಈ ವ್ಯಕ್ತಿಯನ್ನು ಎಗ್ಮ್ಯಾನ್ ಎಂದು ಕರೆದಿದ್ದಾರೆ.
🥚🤯Forget coffee for breakfast! A man from Uzbekistan drinks 110 raw eggs every morning
According to him, this helps build muscle, increases endurance and gives him energy for the whole day.
He claims he hasn’t been sick for several years and feels young and healthy.
Shall we… pic.twitter.com/fFTk5IXLOM
— NEXTA (@nexta_tv) November 5, 2025
ಹಸಿ ಮೊಟ್ಟೆ ಸೇವನೆಗೂ ಮುನ್ನ ಈ ವಿಚಾರ ತಿಳ್ಕೊಳ್ಳಿ!
ಮೊಟ್ಟೆ ಸಮೃದ್ಧವಾಗಿದ್ದರೂ , ಅವು ಶಕ್ತಿ ಮತ್ತು ಸ್ನಾಯುಗಳ ಬೆಳವಣಿಗೆಗೆ ಬಹಳ ಪ್ರಯೋಜನಕಾರಿ, ಆದರೆ ವೈದ್ಯರು ಹೇಳುವ ಪ್ರಕಾರ, ಪ್ರತಿದಿನ 110 ಮೊಟ್ಟೆಗಳನ್ನು ಸೇವನೆ ಮಾಡುವುದು ದೇಹಕ್ಕೆ ಮಾರಕ ಎಂದು ಹೇಳಿದ್ದಾರೆ. ಹಸಿ ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದ ಅಪಾಯ ಹೆಚ್ಚಾಗಿದ್ದು, ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ, ಪ್ರತಿ 20,000 ಮೊಟ್ಟೆಗಳಲ್ಲಿ ಒಂದು ಸಾಲ್ಮೊನೆಲ್ಲಾ ಸೋಂಕಿಗೆ ಒಳಗಾಗಬಹುದು. ಇದರರ್ಥ ಒಬ್ಬ ವ್ಯಕ್ತಿಯು ವರ್ಷಕ್ಕೆ 40,000 ಕ್ಕೂ ಹೆಚ್ಚು ಮೊಟ್ಟೆಗಳನ್ನು ತಿನ್ನುತ್ತಿದ್ದರೆ, ಅದು ದೇಹದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ನೋಡಿರಿ

