ತಿಂಗಳಿಗೆ ಕೋಟಿ ಕೋಟಿ ಸಂಪಾದಿಸುತ್ತಿದ್ದ 11 ವರ್ಷದ ಬಾಲಕಿ ದಿಢೀರ್ ನಿವೃತ್ತಿಗೆ ಮುಂದಾಗಿದ್ದೇಕೆ..?
ಅವಳಿನ್ನೂ 11 ವರ್ಷದ ಬಾಲಕಿ. ಅವಳ ವಯಸ್ಸಿನ ಬೇರೆ ಮಕ್ಕಳೆಲ್ಲಾ ಶಾಲೆ, ಟ್ಯೂಷನ್, ಹಾಡು, ನೃತ್ಯ, ಆಟ ಅಂತಾ ಜಾಲಿಯಾಗಿದ್ದಾರೆ. ಆದ್ರೆ ಇವಳು ಓದೋ ವಯಸ್ಸಲ್ಲೇ ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾಳೆ. ತಿಂಗಳಿಗೆ ಬರೋಬ್ಬರಿ ₹1.1 ಕೋಟಿ ರೂ. ಸಂಪಾದಿಸುತ್ತಿದ್ರೂ ನಿವೃತ್ತಿಯಾಗಲು ತೀರ್ಮಾನ ಮಾಡಿದ್ದಾಳೆ.
ಆಟಿಕೆಗಳನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 110 ಸಾವಿರ ಪೌಂಡ್ (ರೂ. 1.1 ಕೋಟಿ) ಗಳಿಸುತ್ತಿದ್ದಾಳೆ. ಆಸ್ಟ್ರೇಲಿಯಾದ 11 ವರ್ಷದ ಬಾಲಕಿ ಸಣ್ಣ ವಯಸ್ಸಿನಲ್ಲೇ ತನ್ನ ಸ್ವಂತ ದುಡಿಮೆಯಿಂದ ಕೋಟ್ಯಧಿಪತಿ ಆಗಿದ್ದಾಳೆ. ಸುಮಾರು ಮೂರು ವರ್ಷಗಳಿಂದ ಆಸ್ಟ್ರೇಲಿಯಾದ ಪಿಕ್ಸೀ ಕರ್ಟಿಸ್ ತನ್ನದೇ ಸ್ವಂತ ವ್ಯಾಪಾರದಿಂದ ತಿಂಗಳಿಗೆ ಕೋಟಿಗಟ್ಟಲೆ ದುಡಿಯುತ್ತಿದ್ದಳು. ಆದ್ರೆ ಈಗ ತನ್ನ ವ್ಯಾಪಾರದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾಳೆ.
ಇದನ್ನೂ ಓದಿ : ರೊಮ್ಯಾನ್ಸ್ ಮಾಡಲು ವೇತನ ಸಹಿತ 30 ದಿನ ರಜೆ – ನವದಂಪತಿಗೆ ಸರ್ಕಾರದಿಂದಲೇ ಭರ್ಜರಿ ಆಫರ್!
ವಿಶ್ವಕ್ಕೆ ಕೊರೊನಾ ಹೆಮ್ಮಾರಿ ಬಂದು ಲಾಕ್ ಡೌನ್ ಆದ ಬಳಿಕ ಪಿಆರ್ ಗುರು ರಾಕ್ಸಿ ಜಾಸೆಂಕೊ ಅವರ ಮಗಳು ಪಿಕ್ಸೀ ತನ್ನದೇ ಆದ ಆನ್ಲೈನ್ ವ್ಯಾಪಾರ ಪ್ರಾರಂಭಿಸಿದಳು. ತನ್ನ ಆನ್ಲೈನ್ ಅಂಗಡಿಗೆ ಪಿಕ್ಸೀಸ್ ಬೋಸ್ ಎಂದು ಹೆಸರಿಟ್ಟು ಈ ಅಂಗಡಿಯಲ್ಲಿ ತಾವೇ ಖುದ್ದು ತಯಾರಿಸಿದ ಆಟಿಕೆಗಳನ್ನು ಮಾರುತ್ತಿದ್ದರು. ತಮ್ಮ ಕಷ್ಟದ ಪ್ರತಿಫಲವಾಗಿ ಈ ವ್ಯಾಪಾರ ಅವರನ್ನು ಇಂದು ಕೋಟ್ಯಧಿಪತಿಯನ್ನಾಗಿ ಮಾಡಿದೆ. ಹೌದು, ಪಿಕ್ಸೀ ಅವರ ಫೈಡ್ಜೆಟ್ ಸ್ಪಿನ್ನರ್ ವ್ಯಾಪಾರವು ಒಂದೇ ತಿಂಗಳಲ್ಲಿ 110,000 (1.1 ಕೋಟಿ ರೂ.) ಗಳಿಸಿತ್ತು ಎಂದು ವರದಿಗಳು ತಿಳಿಸಿವೆ. ಈ ವ್ಯಾಪಾರ ಇಷ್ಟೆಲ್ಲಾ ಲಾಭ ಮಾಡುತ್ತಿದ್ದರು, ಪಿಕ್ಸೀ ತನ್ನ ಶಿಕ್ಷಣದ ಮೇಲೆ ಕೇಂದ್ರೀಕರಿಸಲು ‘ತಾತ್ಕಾಲಿಕ-ನಿವೃತ್ತಿ’ ಹೊಂದಲು ಬಯಸಿದ್ದಾಳಂತೆ.
ಪಿಕ್ಸೀ ಸದ್ಯ ಹೈ ಸ್ಕೂಲ್ಗೆ ಪ್ರವೇಶಿಸುತ್ತಿದ್ದು, ಶಾಲೆಯ ಕಡೆ ಗಮನ ಹರಿಸಬೇಕಾಗುತ್ತದೆ. ಹಾಗಾಗಿ ತಾತ್ಕಾಲಿಕವಾಗಿ ಈ ವ್ಯಾಪಾರದಿಂದ ನಿವೃತ್ತಿ ಹೊಂದಲು ಬಯಸಿದ್ದಾಳೆ. ಕಳೆದ ಕೆಲವು ತಿಂಗಳುಗಳಿಂದ, ನಾವು ಕುಟುಂಬದವರೆಲ್ಲ ವ್ಯಾಪಾರದ ಕುರಿತು ಚರ್ಚಿಸುತ್ತಲೇ ಇದ್ದೇವೆ. ಇದು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಅದ್ಭುತ ಪ್ರಯಾಣವಾಗಿದ್ದರೂ, ಇದೀಗ ಪಿಕ್ಸೀ ತನ್ನ ಶಾಲೆಯ ಕಡೆ ಕೇಂದ್ರೀಕರಿಸಬೇಕಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.
View this post on Instagram
ಈ ಹಿಂದೆ, ಪಿಕ್ಸಿಯ ಯಶಸ್ಸುನ್ನು ನೋಡಿ ಅವಳು 15 ನೇ ವಯಸ್ಸಿನಲ್ಲಿ ಮಿಲಿಯನೇರ್ ಆಗಿ ನಿವೃತ್ತಿ ಹೊಂಡುತ್ತಾಳೆ ಎಂದು ರಾಕ್ಸಿ ಹೇಳಿದ್ದರು. ಪಿಕ್ಸೀ ತನ್ನ 11 ನೇ ಹುಟ್ಟುಹಬ್ಬದ ಪಾರ್ಟಿ ಸೇರಿದಂತೆ ಅವರ ಅದ್ದೂರಿ ಜೀವನಶೈಲಿ ಸಖತ್ ಫೇಮಸ್ ಆಗಿತ್ತು, ತಮ್ಮ11 ನೇ ಬರ್ತಡೇ ಪಾರ್ಟಿಗೆ ಸುಮಾರು 23,000 ಪೌಂಡ್ ( 23 ಲಕ್ಷ ರೂ.) ಖರ್ಚು ಮಾಡಿದ್ದರು. ಅಲ್ಲದೆ ಈ 11 ವರ್ಷದ ಬಾಲಕಿ Mercedes Benz GI ಕಾರನ್ನೂ ಕೂಡ ಹೊಂದಿದ್ದಾಳೆ.