ಕಣ್ಣು ಮಿಟುಕಿಸುವಷ್ಟರಲ್ಲಿ ಗಣಪತಿಗೆ ಇಟ್ಟಿದ್ದ 11 ಕೆಜಿ ತೂಕದ ಲಡ್ಡು ಮಾಯ! – ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಂಡಿದ್ದು ಅಚ್ಚರಿ!
ದೇಶದಾದ್ಯಂತ ವಿಜೃಂಭಣೆಯಿಂದ ಗಣೇಶ ಚತುರ್ಥಿಯನ್ನು ಆಚರಿಸಲಾಗಿದೆ. ಕೆಲವು ಕಡೆಗಳಲ್ಲಿ ಈಗಾಗಲೇ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ 7 ದಿನ, ಒಂದು ತಿಂಗಳವರೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಈ ವೇಳೆ ಗಣಪತಿಗೆ ಇಷ್ಟವಾದ ತಿಂಡಿಗಳನ್ನು ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಇಲ್ಲೊಂದು ಕಡೆ ಸುಮಾರು 11 ಕೆಜಿ ತೂಕದ ಲಡ್ಡು ಪ್ರಸಾದವನ್ನು ಇಡಲಾಗಿದೆ. ಆದರೆ ಕಣ್ಣು ಮಿಟುಕಿಸುವಷ್ಟರಲ್ಲಿ ಈ ಲಡ್ಡು ಮಾಯವಾಗಿದೆ.
ಹೌದು ಹೈದರಾಬಾದ್ನಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹೈದರಾಬಾದ್ನ ಮಿಯಾಪುರ್ ಏರಿಯಾದಲ್ಲಿ ಬೃಹತ್ ಗ್ರಾತ್ರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸೆ.20ರಂದು ಬೆಳಗ್ಗೆ 4.15ರ ವೇಳೆಗೆ ಗಣಪತಿ ಮೂರ್ತಿಗೆ ಅರ್ಪಿಸಿದ್ದ 11 ಕೆಜಿ ಗಾತ್ರದ ಲಡ್ಡು, ಕಣ್ಣು ಮಿಟುಕಿಸುವಷ್ಟರಲ್ಲಿ ಮಾಯವಾಗಿದೆ. ಇದೀಗ ಈ ಪ್ರಕರಣ ಪೊಲೀಸ್ ಮೆಟ್ಟಿಲೇರಿದೆ.
ಇದನ್ನೂ ಓದಿ: ಗಣೇಶನ ನೈವೇದ್ಯದ ಲಡ್ಡು ಪ್ರಸಾದ ಬರೋಬ್ಬರಿ 32 ಸಾವಿರ ರೂಪಾಯಿಗೆ ಹರಾಜು!
ಏನಿದು ಘಟನೆ?
ಓಂಕಾರ ಸೇವಾ ಸಮಿತಿಯು ಮದಿನಾಗುಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಣಪತಿ ಉತ್ಸವನ್ನು ಅದ್ಧೂರಿಯಾಗಿ ಆಚರಿಸತು. ಈ ವೇಳೆ ಗಣೇಶನ ಮೂರ್ತಿಗೆ 11 ಕೆಜಿ ಗಾತ್ರದ ಲಾಡು ಪ್ರಸಾದವನ್ನು ಅರ್ಪಿಸಲಾಯಿತು. ಭಕ್ತರಿಂದ ದೇವರ ದರ್ಶನ ಮುಗಿದ ಬಳಿಕ ಗಣಪರಿ ಪೆಂಡಾಲ್ನಲ್ಲಿ ಭದ್ರತೆಗೆಂದು ಸಮಿತಿ ವತಿಯಿಂದ ಇಬ್ಬರನ್ನು ನಿಯೋಜಿಸಲಾಗಿತ್ತು. ಇಬ್ಬರನ್ನು ಭದ್ರತೆಗೆ ನಿಯೋಜಿಸಿದ್ದರೂ ಅವರು ಕಣ್ಣು ಮಿಟುಕಿಸುವಸ್ಟರಲ್ಲಿ ಬೆಲೆಬಾಳುವ ಲಡ್ಡುವು ಗಣೇಶನ ಮುಂದೆ ಅದರ ಪವಿತ್ರ ಸ್ಥಾನದಿಂದ ಕಣ್ಮರೆಯಾಗಿದೆ. ಈ ವಿಚಾರ ಗೊತ್ತಾಗಿ ಸ್ಥಳದಲ್ಲಿ ಕೋಲಾಹಲವೇ ಭುಗಿಲೆದ್ದಿತು ಮತ್ತು ಭಕ್ತರು ಉತ್ತರಗಳನ್ನು ಹುಡುಕುತ್ತಾ ಅಲೆದಾಡುತ್ತಿರುವಾಗ, ಓರ್ವ ವ್ಯಕ್ತಿ ಘಟನೆಗೆ ಸಾಕ್ಷಿಯಾಗಿ ಬಂದನು. ಆತನ ಹೇಳಿಕೆಯ ಆಧಾರದ ಮೇಲೆ, ಭಕ್ತರು ಕಳ್ಳತನದ ದೂರನ್ನು ಸಲ್ಲಿಸಿದರು. ಸ್ಥಳೀಯ ಅಧಿಕಾರಿಗಳು ನಿಗೂಢವಾಗಿ ಕಣ್ಮರೆಯಾದ ಲಾಡುವಿನ ಬಗ್ಗೆ ತನಿಖೆ ಆರಂಭಿಸಿದರು.
ಸಿಸಿಟಿವಿಯಲ್ಲಿ ನೆರಳಿನ ಆಕೃತಿಯ ದೃಶ್ಯ ಸೆರೆ!
ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ 4.20ಕ್ಕೆ ಗಣಪತಿ ಪೆಂಡಾಲ್ ಅನ್ನು ಪ್ರವೇಶಿಸುವ ನೆರಳಿನ ಆಕೃತಿಯ ದೃಶ್ಯ ಸೆರೆಯಾಗಿದೆ. ನೆರಳಿನ ದೃಶ್ಯ ಲಡ್ಡುವಿನೊಂದಿಗೆ ಅವಸರವಾಗಿ ಪೆಂಡಾಲ್ನಿಂದ ನಿರ್ಗಮಿಸಿದೆ. ಈ ಆಘಾತಕಾರಿ ದೃಶ್ಯ ಎಲ್ಲರನ್ನೂ ಅಚ್ಚರಿಗೆ ದೂಡಿದೆ. ಸಮಿತಿಯು ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದೆ. ಯಾರೋ ಖದೀಮ ಲಾಡನ್ನು ಕದ್ದಿರುವ ಶಂಕೆ ವ್ಯಕ್ತವಾಗಿದೆ. ಆದರೂ, ಈ ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಾಗಿದೆ.