ಗಡಿಯಲ್ಲಿ ಮತ್ತೆ ಕ್ಯಾತೆ ಮುಂದುವರಿಸಿದ ಚೀನಾ – 24 ಗಂಟೆಗಳಲ್ಲೇ 103 ಯುದ್ಧ ವಿಮಾನಗಳನ್ನ ಹಾರಿಸಿ ಉದ್ಧಟತನ

ನೆರೆ ರಾಷ್ಟ್ರಗಳ ಜೊತೆ ಚೀನಾ ಕಿರಿಕ್ ಮಾಡಿಕೊಳ್ಳೋದು ಹೊಸತೇನಲ್ಲ. ಒಂದಿಲ್ಲೊಂದು ಕಾರಣಗಳನ್ನ ಪದೇಪದೆ ಕಿತಾಪತಿ ಮಾಡುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಭಾರತದ ಭೂಪ್ರದೇಶವನ್ನ ಚೀತಾ ತನ್ನ ಮ್ಯಾಪ್ ಗೆ ಸೇರಿಸಿಕೊಂಡು ಉದ್ಧಟತನ ತೋರಿತ್ತು. ಇದೀಗ ತನ್ನ ನೆರೆಯ ದೇಶ ತೈವಾನ್‌ಗೆ (China-Taiwan Conflict) ಬೆದರಿಕೆ ಹಾಕುವುದನ್ನು ಮುಂದುವರಿಸಿದೆ. ತೈವಾನ್‌ನ ವಾಯು ಗಡಿಯ ಬಳಿ ಮತ್ತೊಮ್ಮೆ ಚೀನಾ ತನ್ನ ಯುದ್ಧ ವಿಮಾನಗಳನ್ನು ಕಳುಹಿಸುವ ಮೂಲಕ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ಹೊಸ ನಕ್ಷೆಯನ್ನು ಸಮರ್ಥಿಸಿಕೊಂಡ ಚೀನಾ – ಅತಿರೇಕದ ವ್ಯಾಖ್ಯಾನ ಬೇಡ ಎಂದ ಡ್ರ್ಯಾಗನ್ ರಾಷ್ಟ್ರ
ಕಳೆದ 24 ಗಂಟೆಗಳಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಗಳನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ತೈವಾನ್ ರಕ್ಷಣಾ ಸಚಿವಾಲಯ ಸೋಮವಾರ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ದ್ವೀಪದ ಸುತ್ತ 103 ಚೀನಾದ ಯುದ್ಧ ವಿಮಾನಗಳನ್ನು ತೈವಾನ್ ಪತ್ತೆ ಮಾಡಿದೆ. ವರದಿಯಲ್ಲಿ, ಸೆಪ್ಟೆಂಬರ್ 17 ಮತ್ತು ಸೆಪ್ಟೆಂಬರ್ 18 ರ ನಡುವೆ ರಾಷ್ಟ್ರೀಯ ರಕ್ಷಣಾ ಸಚಿವಾಲಯವು ಒಟ್ಟು 103 ಚೀನಾದ ಯುದ್ಧ ವಿಮಾನಗಳನ್ನು ಪತ್ತೆ ಮಾಡಿದೆ. ಇತ್ತೀಚಿಗೆ ಚೀನಾ ಕಳುಹಿಸಿದ ಯುದ್ಧ ವಿಮಾನಗಳಲ್ಲಿ ಇದು ಅತಿ ಹೆಚ್ಚು. ಇದು ತೈವಾನ್ ಜಲಸಂಧಿ ಮತ್ತು ಪ್ರದೇಶದ ಭದ್ರತೆಗೆ ಗಂಭೀರ ಸವಾಲುಗಳನ್ನು ಸೃಷ್ಟಿಸಿದೆ. ಬೀಜಿಂಗ್‌ನ ಮಿಲಿಟರಿ ಕಿರುಕುಳ ಮುಂದುವರಿಸುವುದರಿಂದ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಮತ್ತು ಪ್ರಾದೇಶಿಕ ಭದ್ರತೆಯನ್ನು ಹದಗೆಡಿಸಬಹುದು ಎಂದು ಸಚಿವಾಲಯ ಹೇಳಿದೆ. ಅಲ್ಲದೇ, ‘ಇಂತಹ ವಿಧ್ವಂಸಕ ಏಕಪಕ್ಷೀಯ ಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ಚೀನಾಕ್ಕೆ ತೈವಾನ್ ಸಚಿವಾಲಯ ಕರೆ ನೀಡಿದೆ.
ಚೀನಾ ತನ್ನ ಭೂಪ್ರದೇಶದ ಭಾಗವೆಂದು ಪರಿಗಣಿಸುವ ತೈವಾನ್‌ನಲ್ಲಿ ತನ್ನ ಹಕ್ಕನ್ನು ಪ್ರತಿಪಾದಿಸುವುದನ್ನು ಮುಂದುವರೆಸಿದ್ದು, ಇದರ ಹೊರತಾಗಿಯೂ, ತೈವಾನ್ ತನ್ನದೇ ಆದ ಸರ್ಕಾರ, ಸೈನ್ಯ ಮತ್ತು ಸಂವಿಧಾನವನ್ನು ಹೊಂದಿದೆ. ತೈವಾನ್‌ನ ಮೇಲಿನ ಚೀನಾದ ಹಕ್ಕು ಸಾಧಿಸುವುದು ಚೀನಾ ನೀತಿಯ ಒಂದು ಭಾಗವಾಗಿದೆ. ಇದು ಚೀನಾ’ ಒಂದೇ ಒಂದು ಸಾರ್ವಭೌಮ ರಾಜ್ಯ ಎಂದು ಪ್ರತಿಪಾದಿಸಲು ಚೀನಾ ಪದೇ ಪದೇ ಪ್ರಯತ್ನ ಪಡುತ್ತಿದೆ.