ಕರ್ನಾಟಕದಲ್ಲಿ ಸಿಗುತ್ತೆ 24 ಕ್ಯಾರೆಟ್ ಚಿನ್ನದ ದೋಸೆ!: ಬೆಲೆ ಮಾತ್ರ ಕೇವಲ ಸಾವಿರ ರೂ…
ಬೆಂಗಳೂರು: ಸಾಮಾನ್ಯವಾಗಿ ನಾವು ಉದ್ದಿನ ದೋಸೆ, ರಾಗಿ ದೋಸೆ, ಮೆಂತೆ ಸೊಪ್ಪು ದೋಸೆ, ನೀರ್ ದೋಸೆ ಕೇಳಿದ್ದೇವೆ. ಅವುಗಳನ್ನು ಸವಿದಿದ್ದೇವೆ. ಆದರೆ ಯಾವಾಗಲಾದರೂ 24 ಕ್ಯಾರೆಟ್ ಚಿನ್ನದ ದೋಸೆ ಬಗ್ಗೆ ಕೇಳಿದ್ದೀರಾ… ಅದನ್ನು ಸವಿದಿದ್ದೀರಾ?
ಇದನ್ನೂ ಓದಿ:ನಿಮಿಷಕ್ಕೆ ಸಾವಿರ ಚಪ್ಪಾಳೆ ತಟ್ಟಿ ವಿಶ್ವ ದಾಖಲೆ ಬರೆದ ಯುವಕ
ಹೌದು ತುಮುಕೂರಿನ ಹೊಟೇಲೊಂದರಲ್ಲಿ 24 ಕ್ಯಾರೆಟ್ ಚಿನ್ನದ ದೋಸೆ ಲಭ್ಯವಿದ್ದು, ಇದನ್ನು ಸವಿಯಲು ಜನರು ಸಾಲುಗಟ್ಟಿ ನಿಂತಿದ್ದಾರೆ.
ತುಮುಕೂರಿನ ಹೊಟೇಲೊಂದರಲ್ಲಿ ಚಿನ್ನದ ದೋಸೆ ಲಭ್ಯವಾಗುತ್ತಿರುವ ಬಗ್ಗೆ ವ್ಲಾಗರ್ ಒಬ್ಬರು ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗುತ್ತಿದ್ದಂತೆ ಜನರು ಚಿನ್ನದ ದೋಸೆ ಸವಿಯಲು ಹೊಟೇಲ್ ನತ್ತ ಸಾಲು ಗಟ್ಟಿ ನಿಂತಿದ್ದಾರೆ.
View this post on Instagram
ಬಿಸಿ ಬಿಸಿ ದೋಸೆಗೆ ಚಿನ್ನದ ಅಂಶವಿರುವ ಕಾಗದದ ಮಾರಿಯನ್ನು ಲೇಪನ ಮಾಡುತ್ತಾರೆ. ಇದು ದೋಸೆಯ ಬಿಸಿಗೆ ಅಂಟಕೊಳ್ಳುತ್ತದೆ. ಈ ಗೋಲ್ಡ್ ಪೇಪರ್ ಲೇಪನವಾಗಿರುವ ಚಿನ್ನದ ಮಸಾಲದೋಸೆಯ ಬೆಲೆ ಕೇವಲ 1000 ರೂ. ಆಗಿದ್ದು, ಮಾಹಿತಿಯ ಪ್ರಕಾರ ಇದು 24 ಕ್ಯಾರೆಟ್ ಚಿನ್ನದ ಗೋಲ್ಡ್ ಪೇಪರ್ ಆಗಿದೆ.