ಪಾಕಿಸ್ತಾನಕ್ಕೆ ಭಾರತ ಪ್ರತಿಕಾರದ ಭಯ – ಪಿಒಕೆಯಲ್ಲಿರುವ 1000ಕ್ಕೂ ಹೆಚ್ಚು ಮದರಸಾಗಳನ್ನು ತಾತ್ಕಾಲಿಕ ಬಂದ್

ಪಾಕಿಸ್ತಾನಕ್ಕೆ ಭಾರತ ಪ್ರತಿಕಾರದ ಭಯ –  ಪಿಒಕೆಯಲ್ಲಿರುವ 1000ಕ್ಕೂ ಹೆಚ್ಚು ಮದರಸಾಗಳನ್ನು ತಾತ್ಕಾಲಿಕ ಬಂದ್

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕ್‌ಗೆ ಕ್ಷಣ ಕ್ಷಣಕ್ಕೂ ಭಯ ಕಾಡುತ್ತಿದೆ.  ಭಾರತದ ಪ್ರತೀಕಾರದ ಭಯದಲ್ಲಿದ್ದಾರೆ. ಇದಕ್ಕಾಗಿಯೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ  ಮುಂದಿನ 10 ದಿನಗಳವರೆಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಿಷೇಧಿಸಿದೆ. ಇಷ್ಟು ಮಾತ್ರವಲ್ಲದೆ ಪಿಒಕೆಯಲ್ಲಿರುವ 1000ಕ್ಕೂ ಹೆಚ್ಚು ಮದರಸಾಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಭಾರತವು ಈ ಮದರಸಾಗಳನ್ನು ಭಯೋತ್ಪಾದಕ ತರಬೇತಿ ಕೇಂದ್ರಗಳೆಂದು ಪರಿಗಣಿಸಿ ಗುರಿಯಾಗಿಸಬಹುದು ಎಂಬ ಭಯ ಪಾಕಿಸ್ತಾನಿ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದಾರೆ.

ಈ ಮದರಸಾಗಳನ್ನು ತಾತ್ಕಾಲಿಕವಾಗಿ ಮುಚ್ಚುವುದು ನಮ್ಮ ರಕ್ಷಣಾತ್ಮಕ ಕ್ರಮವಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿ ಹಫೀಜ್ ನಜೀರ್ ಅಹ್ಮದ್  ತಿಳಿಸಿದ್ದಾರೆ. ಆದಾಗ್ಯೂ, ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಎರಡು ರೀತಿಯ ಉದ್ವಿಗ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದು ವಾತಾವರಣದ್ದಾದರೆ ಮತ್ತೊಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕೋಪದಿಂದಾಗಿ ಹುಟ್ಟಿಕೊಂಡಿದೆ. ಪಾಕಿಸ್ತಾನದಲ್ಲಿ ಅವ್ಯವಸ್ಥೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಬಿಸಿಲಿನ ಅಲೆಯನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಪಿಒಕೆಯಲ್ಲಿ 445 ನೋಂದಾಯಿತ ಮದರಸಾಗಳಿದ್ದು, 26 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪಾಕಿಸ್ತಾನಿ ಅಧಿಕಾರಿ ತಿಳಿಸಿದ್ದಾರೆ.

 

Kishor KV

Leave a Reply

Your email address will not be published. Required fields are marked *