ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸ್ಪೀಡ್‌ಗೆ ಬ್ರೇಕ್ – ಗಂಟೆಗೆ 100 ಕಿ.ಮೀ. ವೇಗದ ಮಿತಿ ನಿಗದಿ..!

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸ್ಪೀಡ್‌ಗೆ ಬ್ರೇಕ್ – ಗಂಟೆಗೆ 100 ಕಿ.ಮೀ. ವೇಗದ ಮಿತಿ ನಿಗದಿ..!

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಇನ್ನು ಮುಂದೆ ಸುಂಯ್ ಅಂತಾ ಸ್ಪೀಡ್ ಆಗಿ ಹೋಗುವಂತಿಲ್ಲ. ಹೊಸ ರಸ್ತೆ, ಇರೋದೇ ಎಕ್ಸ್ ಪ್ರೆಸ್ ವೇ ಎಂದುಕೊಂಡು ನೀವೇನಾದರೂ ವೇಗವಾಗಿ ಹೋದರೆ ದಂಡ ಕಟ್ಟಲೇಬೇಕು. ಯಾಕೆಂದರೆ, ದಶಪಥ ರಸ್ತೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಂದಾಗಿ, ವೇಗಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಕುರಿತು ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಅಪಘಾತಗಳಿಗೆ ಕುಡುಕರೇ ಕಾರಣ –‘ಕುಡುಕ ಮುಕ್ತ ಹೈವೇ’ಗೆ ಅಲೋಕ್ ಕುಮಾರ್ ಸೂಚನೆ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇನಲ್ಲಿ 120 ಕಿ.ಮೀ. ವೇಗದಲ್ಲಿ ವಾಹನಗಳು ಸಂಚರಿಸುವುದರಿಂದ ಅಪಘಾತ ಹೆಚ್ಚಳವಾಗಿದೆ. ಹೀಗಾಗಿ ಅಪಘಾತ ತಡೆಯಲು ಗಂಟೆಗೆ 100 ಕಿ.ಮೀ. ವೇಗದ ಮಿತಿ ನಿಗದಿ ಮಾಡಲಾಗಿದೆ. ಅದರಂತೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಸ್ಪೀಡ್ ರಡಾರ್ ಗನ್, ವಾಹನಗಳ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಗದಿತ ವೇಗದಲ್ಲಿ ವಾಹನಗಳು ಸಂಚರಿಸಬೇಕು. 100 ಕಿ.ಮೀ. ವೇಗದ ಮಿತಿ ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲು ಮಾಡಲಾಗುತ್ತದೆ ಎಂದು ರಸ್ತೆ ಸುರಕ್ಷಿತ ಮತ್ತು ಸಂಚಾರ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ವಾರಾಂತ್ಯದ ದಿನಗಳಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸುವವರ ಸಂಖ್ಯೆ ಹೆಚ್ಚಾಗಿದ್ದು, ಇಂತವರಿಂದ ಅಪಘಾತಗಳು ಹೆಚ್ಚುತ್ತಿವೆ ಎಂಬುದಾಗಿ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾರಾಂತ್ಯದ ದಿನಗಳಲ್ಲಿ ಟೋಲ್ಗೇಟ್ ಬಳಿ ‘ಡ್ರಿಂಕ್ ಆ್ಯಂಡ್ ಡ್ರೈವ್’ ಟೆಸ್ಟ್ ಮಾಡುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ರಾಮನಗರ ಪೊಲೀಸರು ಬೆಂಗಳೂರು-ಮೈಸೂರು ಎಕ್ಸ್​​​ಪ್ರೆಸ್​​ವೇನಲ್ಲಿ ನಿಗದಿತ ವೇಗದಲ್ಲಿ ಚಲಿಸದ ವಾಹನಗಳ ಪತ್ತೆಗಾಗಿ ಸ್ಪೀಡ್​​​ ರಡಾರ್ ಗನ್​ನ್ನು ಬಳಸಲು ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಮಂಡ್ಯ ಮತ್ತು ಮೈಸೂರು ಪೊಲೀಸರು ಬಳಸಲು ಶುರು ಮಾಡುತ್ತಾರೆ. ಅದರಂತೆ ನಿನ್ನೆ(ಜು.4) ರಾಮನಗರ ಪೊಲೀಸರು 44 ವೇಗ ಮೀತಿ ಮೀರಿದ ವಾಹನಗಳ ಮೇಲೆ ಕೇಸ್​ ಬುಕ್​ ಮಾಡಿದ್ದಾರೆ. ಈ ಕುರಿತು ರಾಮನಗರ ಎಸ್ಪಿ ಪ್ರಶಂಸಿದ್ದಾರೆ ಎಂದು ಟ್ವೀಟ್​ ಮೂಲಕ ಹೇಳಿದ್ದಾರೆ.

suddiyaana