ಇಸ್ರೇಲ್-ಇರಾನ್ ವಾರ್ – ಟೆಹ್ರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳು ಶಿಫ್ಟ್

ಇಸ್ರೇಲ್-ಇರಾನ್ ವಾರ್ – ಟೆಹ್ರಾನ್‌ನಿಂದ 110 ಭಾರತೀಯ ವಿದ್ಯಾರ್ಥಿಗಳು ಶಿಫ್ಟ್

ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಟೆಹ್ರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಭದ್ರತಾ ಮುನ್ನೆಚ್ಚರಿಕೆಯಾಗಿ ನಗರದಿಂದ ಸ್ಥಳಾಂತರಿಸಲಾಗಿದೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ ಟೆಹ್ರಾನ್‌ನಿಂದ ಹೊರಬರಲು ಭಾರತೀಯ ರಾಯಭಾರ ಕಚೇರಿ ಅವರಿಗೆ ಸಹಾಯ ಮಾಡಿದೆ. ಅರ್ಮೇನಿಯಾ ಗಡಿಯ ಮೂಲಕ ಕೆಲವು ಭಾರತೀಯರಿಗೆ ಇರಾನ್‌ನಿಂದ ಹೊರಬರಲು ಸಹಾಯ ಮಾಡಲಾಗಿದೆ. “ಟೆಹ್ರಾನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ” ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಕೆಲವು ಭಾರತೀಯರಿಗೆ ಅರ್ಮೇನಿಯಾ ಗಡಿಯಿಂದ ಇರಾನ್‌ನಿಂದ ಹೊರಹೋಗಲು ಸಹಾಯ ಮಾಡಲಾಗಿದೆ. 110 ಭಾರತೀಯ ವಿದ್ಯಾರ್ಥಿಗಳನ್ನು ಟೆಹ್ರಾನ್‌ನಿಂದ ಸ್ಥಳಾಂತರಿಸಲಾಗಿದೆ. ಆದಾಗ್ಯೂ, ಭಾರತೀಯ ವಿದೇಶಾಂಗ ಸಚಿವಾಲಯವು ಅಧಿಕೃತ ಸಂಖ್ಯೆಯನ್ನು ನೀಡಿಲ್ಲ.

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಟೆಹ್ರಾನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ನಗರದ ಹೊರಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಸಲಹೆಯನ್ನು ನೀಡಲಾಗಿದೆ. ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು X ನಲ್ಲಿ ಪೋಸ್ಟ್‌ ನಲ್ಲಿ ಮಾಡಿದ್ದು, ಟೆಹ್ರಾನ್‌ನಲ್ಲಿರುವ ಮತ್ತು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿಲ್ಲದ ಎಲ್ಲಾ ಭಾರತೀಯ ನಾಗರಿಕರು ತಕ್ಷಣ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮತ್ತು ಅವರ ಸ್ಥಳ ಮತ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸುವಂತೆ ವಿನಂತಿಸಲಾಗಿದೆ.

 

Kishor KV