₹100 ಕೋಟಿ ಲಾಟರಿ ಗೆದ್ದ ಅದೃಷ್ಟವಂತ – 4 ಸಾವಿರ ಮಹಿಳೆಯರ ಜೊತೆ ರೊಮ್ಯಾನ್ಸ್
ಜೀವನದಲ್ಲಿ ದಿಢೀರ್ ಶ್ರೀಮಂತರಾಗ್ಬೇಕು ಅಂದ್ರೆ ಲಾಟರಿನೇ ಹೊಡೀಬೇಕು. ಹೀಗೆಯೇ ಇಲ್ಲೊಬ್ಬ 100 ಕೋಟಿ ಲಾಟರಿ ಗೆದ್ದು ರಾತ್ರೋರಾತ್ರಿ ಕುಬೇರನಾಗಿದ್ದ. ಆದರೆ ಹತ್ತೇ ವರ್ಷದಲ್ಲಿ ಬೀದಿಗೆ ಬಿದ್ದಿದ್ದಾನೆ.
ಇಂಗ್ಲೆಂಡ್ ನಿವಾಸಿ ಮಿಕ್ಕಿ ಕ್ಯಾರೊಲ್ ಎಂಬಾತ 2002ರಲ್ಲಿ 100 ಕೋಟಿ ಮೌಲ್ಯದ ಲಾಟರಿ ಗೆದ್ದಿದ್ದ. ಆಗ ಆತನಿಗೆ ಜಸ್ಟ್ 19 ವರ್ಷ. ಬೇರೆ ಯಾರಾದ್ರೂ ಆಗಿದ್ರೆ 100 ಕೋಟಿ ಸಿಕ್ಕಿದೆ ಅಂತಾ ಲೈಫ್ ಸೆಟಲ್ ಮಾಡ್ಕೊಳ್ತಿದ್ರು. ಆದ್ರೆ ಮಿಕ್ಕಿಗೆ ಹಣದ ಅಮಲು ನೆತ್ತಿಗೇರಿತ್ತು. ದುಶ್ಚಟಗಳ ದಾಸನಾಗಿದ್ದ. ಡ್ರಗ್ಸ್ ಗೀಳು ಬೆಳೆಸಿಕೊಂಡು ಬೇರೆ ಬೇರೆ ದೇಶಗಳಲ್ಲಿ ಪಾರ್ಟಿ ಮಾಡ್ತಿದ್ದ. ಆಭರಣಗಳು, ಕಾರುಗಳು ಮತ್ತು ಬಟ್ಟೆಗಳನ್ನು ಖರೀದಿಸಿದ್ದ. ಸಾಲ್ದು ಅಂತಾ ಫುಟ್ಬಾಲ್ ಕ್ಲಬ್ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಕಳೆದುಕೊಂಡ. 10 ವರ್ಷಗಳ ಅಂತರದಲ್ಲೇ 4 ಸಾವಿರಕ್ಕೂ ಹೆಚ್ಚು ಮಹಿಳೆಯರ ಸಂಗ ಮಾಡಿ ಹಣವನ್ನ ನೀರಿನಂತೆ ಖರ್ಚು ಮಾಡಿದ. ಇಷ್ಟೆಲ್ಲಾ ಕೆಟ್ಟ ಚಟ ಬೆಳೆಸಿಕೊಂಡವನು ಹಣ ಹೇಗೆ ಉಳಿಸ್ತಾನೆ ಹೇಳಿ. ಕೊನೆಗೆ ದಿವಾಳಿಯಾಗಿ ಈಗ ಕಲ್ಲಿದ್ದಲು ಫ್ಯಾಕ್ಟರಿಯಲ್ಲಿ ಕೆಲ್ಸ ಮಾಡ್ತಿದ್ದಾನೆ.