ಅರ್ಜೆಂಟ್ ಆಯ್ತು ಅಂತಾ ತಾಯಿ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ – ಪುಟ್ಟ ಬಾಲಕನನ್ನು ಎಳೆದೊಯ್ದ ಪೊಲೀಸರು!

ಅರ್ಜೆಂಟ್ ಆಯ್ತು ಅಂತಾ ತಾಯಿ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ – ಪುಟ್ಟ ಬಾಲಕನನ್ನು ಎಳೆದೊಯ್ದ ಪೊಲೀಸರು!

ನಮ್ಮ ದೇಶದಲ್ಲಿ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಎಷ್ಟು ಕಠಿಣ ನಿಯಮ ತಂದರೂ ಕೂಡ ಜನರು ನಿಯಮ ಉಲ್ಲಂಘಿಸುತ್ತಾರೆ. ರಸ್ತೆ ಬದಿಗಳಲ್ಲಿ ದಂಡ ವಿಧಿಸಲಾಗುವುದು ಎಂದು ಬೋರ್ಡ್‌ ಹಾಕಿದ್ರೂ ಕೂಡ ಜನರು ಬೋರ್ಡ್‌ ಎದುರೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದರೆ ವಿದೇಶಗಳಲ್ಲಿ ಹೀಗಿಲ್ಲ.. ಯಾವುದಾದರೂ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಕೆಲವೇ ಹೊತ್ತಲ್ಲಿ ಜೈಲು ಪಾಲಾಗುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ನಡೆದಿದೆ.

ಅಮೆರಿಕಾಕ್ಕೆ ಹೋದಾಗ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ದಂಡ ಮಾತ್ರವಲ್ಲ, ನೇರವಾಗಿ ಜೈಲಿಗೆ ಎಳೆದೊಯ್ಯುತ್ತಾರೆ. ಯಾಕೆಂದ್ರೆ ನಿಷೇಧಿತ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ಅಮೆರಿಕಾ ಪೊಲೀಸರು ಕೆಲವೇ ಹೊತ್ತಲ್ಲಿ ಶಿಕ್ಷೆ ನೀಡುತ್ತಾರೆ. ಸಣ್ಣ ಮಕ್ಕಳು.. ಗೊತ್ತಿಲ್ಲದೇ ತಪ್ಪು ಮಾಡಿದ್ದಾರೆ ಅಂತಾನೂ ನೋಡಲ್ಲ. ಹಿಂದೆ ಮುಂದೆ ನೋಡದೇ ನೇರವಾಗಿ ಜೈಲಿಗೆ ಎಳೆದೊಯ್ಯುತ್ತಾರೆ. ಕೆಲ ದಿನಗಳ ಹಿಂದೆ ಅಮೆರಿಕಾದಲ್ಲಿ 10 ವರ್ಷದ ಬಾಲಕನನ್ನು ಇದೇ ವಿಚಾರಕ್ಕೆ ಜೈಲಿಗೆ ಕಳುಹಿಸಲಾಗಿತ್ತು.

ಇದನ್ನೂ ಓದಿ: ಬೇಸಿಗೆ ರಜೆ ಎಂದು ವಿದ್ಯಾರ್ಥಿನಿ ಮನೆಯಲ್ಲಿ ಬಾಡಿಗೆಗೆ ಇದ್ದ ಶಿಕ್ಷಕ – 15 ವರ್ಷದ ಬಾಲಕಿಯನ್ನ ಪುಸಲಾಯಿಸಿ ತಾಳಿ ಕಟ್ಟಿದ ಭೂಪ

ಲಾಟೋನ್ಯಾ ಈಸನ್‌ ಎಂಬಾಕೆ ಒಂದು ದಿನ ವಕೀಲರನ್ನು ಭೇಟಿಯಾಗಲು ಹೋಗಿದ್ದಳು. ಆಕೆಯ ಜೊತೆಗೆ 10 ವರ್ಷದ ಮಗನನ್ನು ಕೂಡ ಕರೆದುಕೊಂಡು ಹೋಗಿದ್ದಳು. ವಕೀಲರನ್ನು ಭೇಟಿಯಾಗುವ ವೇಳೆ ಪುಟ್ಟ ಬಾಲಕನನ್ನು ಕಾರಿನಲ್ಲೇ ಬಿಟ್ಟು ಹೋಗಿದ್ದಳು. ಈ ವೇಳೆ ಬಾಲಕನಿಗೆ ಅರ್ಜೆಂಟ್ ಆಗಿದೆ. ಆದ್ರೆ ಅಲ್ಲಿ ಯಾವುದೇ ಶೌಚಾಲಯವಿರಲಿಲ್ಲ. ಹಾಗಾಗಿ ಬಾಲಕ ತನ್ನ ತಾಯಿಯ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿದ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆಯ ಘಟನೆಯನ್ನು ಪೊಲೀಸರು ಉತ್ಪ್ರೇಕ್ಷೆ ಮಾಡಿದ್ದಾರೆ ಎಂದು ಮಹಿಳೆ ಲಾಟೋನ್ಯಾ ಆರೋಪಿಸಿದ್ದಾಳೆ. ಪೊಲೀಸ್ ಅಧಿಕಾರಿಯೊಬ್ಬರು ಮೊದಲು ಬಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಇದು ಸಲ್ಲದು ಎಂದಿದ್ದಾರೆ. ಆದ್ರೆ ಹತ್ತಿರ ಎಲ್ಲೂ ಬಾತ್ ರೂಮ್ ಇಲ್ಲ ಎಂದು ಬಾಲಕ ಹೇಳಿದ್ದಾನೆ. ಹೀಗಾಗಿ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿದ ಇನ್ನು ಕೆಲ ಪೊಲೀಸರು ಮಗುವನ್ನು ಜೈಲಿಗೆ ಕರೆದೊಯ್ದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಾಟೋನ್ಯಾ, ಮಗು ಪಾರ್ಕಿಂಗ್ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಸರಿಯಲ್ಲ, ಆದರೆ ಪೊಲೀಸರು ಮಗುವನ್ನು ಎಳೆದೊಯ್ದ ರೀತಿಯೂ ಸರಿಯಿಲ್ಲ. 10 ವರ್ಷದ ಮಗುವನ್ನು ಪೊಲೀಸರು ಹೀಗೆ ಬಂಧಿಸಬಾರದಿತ್ತು.  ಇದು ನನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾಳೆ.

ಸದ್ಯ ಬಾಲಕನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಬಾಲಕ ತಾಯಿಯೊಂದಿಗೆ ವಾಪಸ್ ಹೋಗಿದ್ದಾನೆ.  ಸೆಂಟೋಬಿಯಾ ಪೊಲೀಸ್ ಮುಖ್ಯಸ್ಥ ರಿಚರ್ಡ್ ಚಾಂಡ್ಲರ್ ಯೂತ್ ಕೋರ್ಟ್ ಆಕ್ಟ್ ಅನ್ನು ಉಲ್ಲೇಖಿಸಿದ್ದಾರೆ.

suddiyaana