ಕ್ರಿಕೆಟ್ ಲೋಕದ ಅತಿ ಸುಂದರಿಯರು ಇವರು! – ಬ್ಯೂಟಿಯಿಂದಲೇ ಬೋಲ್ಡ್ ಮಾಡ್ತಾರೆ

ಕ್ರಿಕೆಟ್ ಲೋಕದ ಅತಿ ಸುಂದರಿಯರು ಇವರು! – ಬ್ಯೂಟಿಯಿಂದಲೇ ಬೋಲ್ಡ್ ಮಾಡ್ತಾರೆ

ವುಮೆನ್ಸ್ ಪ್ರೀಮಿಯರ್ ಲೀಗ್ ಮುಗಿದರೂ, ಕ್ರಿಕೆಟ್ ಅಂಗಳದಲ್ಲಿ ಮಿಂಚು ಹರಿಸಿದ ತಾರೆಗಳ ಗುಂಗು ಹಾಗೇ ಇದೆ. ಸ್ಟಾರ್ ಕ್ರಿಕೆಟರ್ಸ್ ಆಟದ ಮೋಡಿ, ಜೊತೆಗೆ ಆಟಗಾರ್ತಿಯರ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಹಿಳೆಯರ ಕ್ರಿಕೆಟ್ ಅಂದಾಗಲೇ ಆಟಗಾರರ ಗ್ಲಾಮರ್ ಕೂಡಾ ಅಭಿಮಾನಿಗಳಿಗೆ ಲೆಕ್ಕಕ್ಕೆ ಬರುತ್ತದೆ. ಸೆಲೆಬ್ರಿಟಿಗಳು ಅಂದಾಗ ಸೌಂದರ್ಯವೇ ಪ್ಲಸ್ ಪಾಯಿಂಟ್. ಅದರಲ್ಲೂ ಮಹಿಳಾ ಕ್ರಿಕೆಟರ್ಸ್ ವಿಥೌಟ್ ಮೇಕಪ್ ಇಲ್ಲದೇ ಗ್ರೌಂಡ್‌ಗೆ ಬಂದಾಗ ಫ್ಯಾನ್ಸ್ ಜೋಶ್ ಮತ್ತಷ್ಟೂ ಜಾಸ್ತೀನೇ ಇರುತ್ತೆ.

ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಅನಾಹುತ – ರೈಲು ಬರುತ್ತಿದ್ದಾಗ  ಹಳಿಗೆ ಹಾರಿ ಯುವಕ ಆತ್ಮಹತ್ಯೆ

ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟಿಗರು ಸೆಲೆಬ್ರಿಟಿಗಳಿಗೆ ಸರಿಸಮವಾಗ್ತಿದ್ದಾರೆ. ಮಹಿಳಾ ಕ್ರಿಕೆಟಿಗರು ಅಂತರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸೌಂದರ್ಯದಲ್ಲೇ ಫೇಮಸ್ ಆಗ್ತಿದ್ದಾರೆ. ಇದೀಗ ಜಗತ್ತಿನ ಮಹಿಳಾ ಕ್ರಿಕೆಟಿಗರ ಪೈಕಿ ಟಾಪ್ 10 ಸುಂದರ ಕ್ರೀಡಾಪಟುಗಳ ಬಗ್ಗೆ ಟಾಕ್ ಶುರುವಾಗಿದೆ. ಇದರಲ್ಲಿ ಭಾರತದ ಸ್ಮೃತಿ ಮಂದಾನ, ಪ್ರಿಯಾ ಪೂನಿಯಾ, ಹರ್ಲೀನ್ ಡಿಯೋಲ್ ಕೂಡ ಸ್ಥಾನ ಪಡೆದಿದ್ದಾರೆ. ಜೊತೆಗೆ ಆರ್ಸಿಬಿಯ ಲಕ್ಕಿ ಚಾರ್ಮ್ ಎಲ್ಲಿಸ್ ಪೆರ್ರಿ ಕೂಡಾ ಸೇರಿದ್ದಾರೆ.

ಪಾಕಿಸ್ತಾನದ ಸನಾ ಮಿರ್

ಪಾಕಿಸ್ತಾನದ ಕ್ರಿಕೆಟ್ ಆಟಗಾರ್ತಿ ಸನಾ ಮಿರ್ ಕ್ರಿಕೆಟ್ ಜಗತ್ತಿನ ಟಾಪ್ 10 ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಇವರಿಗೆ ಪಾಕಿಸ್ತಾನ, ದುಬೈ, ಕುವೈತ್, ಅಫ್ಘಾನಿಸ್ತಾನ, ಭಾರತ ಸೇರಿ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಸನಾ ಮಿರ್ 15 ವರ್ಷಗಳ ಕಾಲ ಕ್ರಿಕೆಟ್‌ ಆಡಿದ್ದರು. ಕ್ರಿಕೆಟೇ ಇವರ ಬದುಕಾಗಿತ್ತು. ಏಕದಿನ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಪಾಕಿಸ್ತಾನದ ಮೊದಲ ಮಹಿಳಾ ಬೌಲರ್ ಎಂಬ ದಾಖಲೆ ಇವರ ಹೆಸರಿನಲ್ಲಿದೆ.

ಆಸ್ಟ್ರೇಲಿಯಾದ ಹಾಲಿ ಫೆರ್ಲಿಂಗ್

ಆಸ್ಟ್ರೇಲಿಯಾದ ಭಯಾನಕ ಬೌಲರ್ ಎಂದೇ ಫೇಮಸ್ ಆದವರು ಹಾಲಿ ಫೆರ್ಲಿಂಗ್.  ಬಲಗೈ ವೇಗದ-ಮಧ್ಯಮ ಬೌಲರ್ ಇವರು. ಇವರು ಕ್ರಿಕೆಟ್ ವುಮೆನ್ಸ್ ಬ್ಯೂಟಿಗಳ ಪೈಕಿ 9ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಪಾಕಿಸ್ತಾನದ ಕೈನತ್ ಇಮ್ತಿಯಾಜ್

ಪಾಕಿಸ್ತಾನ ತಂಡದ ಕೈನತ್ ಇಮ್ತಿಯಾಜ್. ತನ್ನ ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದಾರೆ. ಇವರು ಟಾಪ್ ಟೆನ್ ಬ್ಯೂಟೀಸ್ ನ 8ನೇ ಸ್ಥಾನದಲ್ಲಿದ್ದಾರೆ. ಕೈನಾತ್ ಇಮ್ತಿಯಾಜ್ ಪಾಕಿಸ್ತಾನದ ಪರ ಏಕದಿನ ಪಂದ್ಯ, ಏಕದಿನ ಅಂತಾರಾಷ್ಟ್ರೀಯ ಪಂದ್ಯ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ್ತಿ ಅಮೆಲಿಯಾ ಕೆರ್

ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರ್ತಿಯಾಗಿರುವ ಅಮೆಲಿಯಾ ಕೆರ್ ಕೂಡಾ ಯಾವ ಬ್ಯೂಟಿಕ್ವೀನ್‌ಗೂ ಕಮ್ಮಿಯಿಲ್ಲದಂತಾ ಸೌಂದರ್ಯವತಿ. ಸುಂದರ ಮಹಿಳಾ ಕ್ರಿಕೆಟ್ ಆಟಗಾರ್ತಿಯರಲ್ಲಿ ಇವರೂ ಕೂಡಾ ಒಬ್ಬರು. ಇವರು ಕೂಡಾ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ತಂಡದಲ್ಲಿ ಆಡಿದ್ದಾರೆ. ಕೆರ್ ಅವರ ತಂದೆ ತಾಯಿ ಇಬ್ಬರೂ ಕ್ರಿಕೆಟರ್ಸ್. ಹೀಗಾಗಿ ಕ್ರಿಕೆಟ್ ಇವರ ಬ್ಲಡ್‌ನಲ್ಲೇ ಬಂದಿದೆ. ಜೊತೆಗೆ ಅಮೆಲಿಯಾ ಕೆರ್ ಅಂದರೆ ನ್ಯೂಜಿಲೆಂಡ್ ಕ್ರಿಕೆಟ್ ಅಭಿಮಾನಿಗಳ ಕ್ರಶ್. ಇವರ ಬ್ಯೂಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಭಾರತ ಪ್ರಿಯಾ ಪುನಿಯಾ

ಭಾರತೀಯ ಮಹಿಳಾ ಕ್ರಿಕೆಟ್‌ನ ಭರವಸೆಯ ಬೆಳಕೇ ಪ್ರಿಯಾ ಪುನಿಯಾ. ಕ್ರಿಕೆಟ್ ಅಭಿಮಾನಿಗಳ ಪ್ರೀತಿಯ ಕ್ರಿಕೆಟರ್. ಬ್ಯೂಟಿಫುಲ್ ಪ್ರಿಯಾ ಪುನಿಯಾ ಟಾಪ್ 10 ಸುಂದರ ಆಟಗಾರ್ತಿಯರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾಳೆ. ಇವರಿಗೆ 6ನೇ ಸ್ಥಾನ ನೀಡಲಾಗಿದೆ. ತನ್ನ ಚೆಲುವು, ಆಕರ್ಷಕ ಆಟದ ಶೈಲಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ ಪ್ರಿಯಾ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಬಲಗೈ ಬ್ಯಾಟ್ಸ್ಮನ್ ಆಗಿದ್ದಾರೆ. ಪ್ರಿಯಾ ಪುನಿಯಾ ರಾಜಸ್ಥಾನದವರು.

ಇಂಗ್ಲೆಂಡ್ ತಂಡದ ಸೋಫಿ ಮುನ್ರೋ

ಜಗತ್ತಿನ ಶ್ರೇಷ್ಠ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರು ಇಂಗ್ಲೆಂಡ್ ಟೀಮ್‌ನ ಸೋಫಿ ಮುನ್ರೋ. ಸೋಫಿ ಮುನ್ರೋ ಕ್ರಿಕೆಟ್ ಅಂಗಳದಲ್ಲಿ ತನ್ನ ಸೂಪರ್ ಸ್ಮೈಲ್‌ನಿಂದಲೇ ಫೇಮಸ್ ಆಗಿದ್ದಾರೆ. ಸೋಫಿಯವರ ಸುಂದರ ನಗುವಿಗೆ ಮನಸೋಲದವರೇ ಇಲ್ಲ. ಮೈದಾನದಲ್ಲಿ ಇವರ ಅಂದ ಚೆಂದ, ಸುಂದರ ಮುಗಳ್ನಗೆಯನ್ನ ನೋಡಲು ಬಂದಿದ್ದೇವೆ ಎಂದು ಫ್ಯಾನ್ಸ್ ಕೂಡಾ ಹೇಳಿಕೊಂಡಿದ್ರು. ಇಂಗ್ಲೆಂಡ್ ತಂಡದ ಸೋಫಿ ಸುಂದರ ಮಹಿಳಾ ಕ್ರಿಕೆಟಿಗರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾಳೆ.

ಭಾರತದ ಹರ್ಲೀನ್ ಡಿಯೋಲ್

ಅಭಿಮಾನಿಗಳ ಹಾರ್ಟ್ ಥ್ರೋಬ್, ಹಾಟ್ ಲುಕ್, ಮೈದಾನಕ್ಕಿಳಿದರೆ ತನ್ನ ಬ್ಯೂಟಿಯಿಂದಲೇ ಕೆಣಕುವಷ್ಟು ಚೆಂದುಳ್ಳಿ ಚೆಲುವೆಯೇ ಹರ್ಲೀನ್ ಡಿಯೋಲ್. ಭಾರತದ ಮಹಿಳೆಯ ಕ್ರಿಕೆಟ್‌ ತಂಡದ ಭರವಸೆಯ ಆಟಗಾರ್ತಿ ಈ ಹರ್ಲಿನ್ ಡಿಯೋಲ್. ಬಲಗೈ ರಾಪಿಡ್ ಕ್ರಿಕೆಟರ್ ಹರ್ಲೀನ್ ಡಿಯೋಲ್ ತನ್ನ ಬೋಲ್ಡ್ ಲುಕ್‌ನಿಂದಲೇ ಅದೆಷ್ಟೋ ಅಭಿಮಾನಿಗಳ ಮನಗೆದ್ದಿದ್ದಾರೆ. ಹಿಮಾಚಲ ಪ್ರದೇಶದ ಈ ಹುಡುಗಿಯನ್ನು ನೋಡಿಯೇ ಫ್ಯಾನ್ಸ್ ಫಿದಾ ಆಗಿದ್ದಾರೆ. ಹರ್ಲೀನ್ ಡಿಯೋಲ್ ಈ ಬಾರಿ wpl ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಆಡಿದ್ದರು. ಇನ್ನು ಹರ್ಲೀನ್ ಡಿಯೋಲ್ ಸೋಶಿಯಲ್ ಮೀಡಿಯಾದಲ್ಲೂ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ ತಮ್ಮ ಬೋಲ್ಡ್​​ ಫೋಟೋಗಳನ್ನು ಶೇರ್ ಮಾಡಿಕೊಳ್ತಾ ಇರ್ತಾರೆ.

ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ ಎಲ್ಲಿಸ್ ಪೆರ್ರಿ

ಆಸ್ಟ್ರೇಲಿಯಾದ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ. ಈ ಚೆರಿ ಚೆರಿ ಪೆರ್ರಿಯನ್ನು ಲೇಡಿ ಎಬಿಡಿ ಅಂತಾನೇ ಕರೀತಾರೆ. Wpl ನಲ್ಲಿ ಆರ್‌ಸಿಬಿ ಟೀಮ್‌ನ ಈ ಲಕ್ಕಿ ಚಾರ್ಮ್ ಆಸೀಸ್ ಫ್ಯಾನ್ಸ್ ಗೆ ಮಾತ್ರ ಮೋಡಿ ಮಾಡಿಲ್ಲ. ಕರ್ನಾಟಕದ ಫ್ಯಾನ್ಸ್ ಗೂ ಈಕೆಯೇ ಕ್ರಷ್. ಹೊಂಬಣ್ಣದ ಕೂದಲು, ನೀಲಿ ಕಣ್ಣುಗಳು ಮತ್ತು ಹೊಳೆಯುವ ನಗುವೇ ಎಲ್ಲಿಸ್ ಪೆರ್ರಿಯ ಚೆಲುವಿನ ಸೀಕ್ರೆಟ್. ವಿಶ್ವದ ಅತ್ಯಂತ ಸುಂದರ ಕ್ರಿಕೆಟಿಗರಲ್ಲಿ ಎಲ್ಲಿಸ್ ಪೆರ್ರಿ ಕೂಡಾ ಒಬ್ಬರು. ಕರ್ನಾಟಕ ಸೇರಿದಂತೆ ಕ್ರಿಕೆಟ್ ಲೋಕದ ಕೋಟಿ ಕೋಟಿ ಅಭಿಮಾನಿಗಳ ಮನಗೆದ್ದ ಎಲ್ಲಿಸ್ ಸುಂದರಿಯರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ

ಇಂಗ್ಲೆಂಡ್ ಸ್ಟಾರ್ ಆಟಗಾರ್ತಿ ಸಾರಾ ಟೈಲರ್

ಇನ್ನು ಇಂಗ್ಲೆಂಡ್ ಕ್ರಿಕೆಟ್‌ನ ಸ್ಟಾರ್ ಆಟಗಾರ್ತಿ ಸಾರಾ ಟೈಲರ್ ಕೂಡಾ ತನ್ನ ಬ್ಯೂಟಿಯಿಂದಲೇ ಕ್ರಿಕೆಟ್ ಜಗತ್ತಿನ ಸುಂದರಿಯಾಗಿ ಮೆರೆದಿದ್ದಾರೆ. 30ರ ಹರೆಯದ ಸಾರಾ ಟೇಲರ್, 2006ರಲ್ಲಿ ಇಂಗ್ಲೆಂಡ್‌ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆದರೀಗ ಸಾರಾ, ತಾನೇ ಮಾಡಿಕೊಂಡ ಕೆಲ ಎಡವಟ್ಟಿನಿಂದಾಗಿ ಕ್ರಿಕೆಟ್‌ನಿಂದ ಹಿಂದೆ ಸರಿದಿದ್ದಾರೆ. ಈ  ಇಂಗ್ಲಿಷ್ ವಿಕೆಟ್ ಕೀಪರ್ ಕಮ್ ಬ್ಯಾಟರ್ ತನ್ನ ಚೆಲುವಿನಿಂದಲೇ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದರು. ಸಾರಾ ಕ್ರಿಕೆಟ್ ಅಂಗಳದಲ್ಲಿ ಇದ್ದಾಳೆ ಅಂದರೆ ಈಕೆಯನ್ನೇ ನೋಡೋಕೆ ಅಂತಾನೇ ಫ್ಯಾನ್ಸ್ ಸೇರುತ್ತಿದ್ದರು. ಯಾವ ಹಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲದಂತಾ ರೂಪಾ ಈಕೆಯದ್ದು.

ಭಾರತದ ಸ್ಮೃತಿ ಮಂದಾನ

ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ರಶ್ ಖ್ಯಾತಿಯ ಸ್ಮೃತಿ ಮಂದಾನ ಜಗತ್ತಿನ ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರ ಪೈಕಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಮಹಾರಾಷ್ಟ್ರದ ಹುಡುಗಿ, ಆರ್‌ಸಿಬಿ ಬೆಡಗಿ ಸ್ಮೃತಿ ಮಂದಾನಾ ಬ್ಯೂಟಿಕ್ವೀನ್ ಅಂತಾನೇ ಫೇಮಸ್. ಕ್ರಿಕೆಟ್ ಲೋಕದ ಸುಂದರಿ ಸ್ಮೃತಿ ಮಂದಾನಾ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್. ಅಭಿಮಾನಿಗಳ ಕ್ರಷ್ ಸ್ಮೃತಿ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಭಾರತದ ಪ್ರಥಮ ಆಟಗಾರ್ತಿ. ಅತಿ ಚಿಕ್ಕ ವಯಸ್ಸಿನಲ್ಲಿ ಇಂಡಿಯಾ ಟೀಮ್‌ನ ಕ್ಯಾಪ್ಟನ್ ಆಗಿರುವ ಮೊದಲ ಮಹಿಳಾ ಆಟಗಾರ್ತಿ. ಈ ಸ್ಮೈಲ್ ಸುಂದರಿಯೀಗ ಬ್ಯೂಟಿಫುಲ್ ಮಹಿಳಾ ಕ್ರಿಕೆಟಿಗರ ಪೈಕಿ ಟಾಪ್ ಒಂದರ ಸ್ಥಾನದಲ್ಲಿದ್ದಾರೆ.

Shwetha M