ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಸಿದ್ದವಾಯ್ತು ವಿಶೇಷ ಬೀಗ – 400 ಕೆಜಿ ತೂಕ, 10 ಅಡಿ ಎತ್ತರದ ಬೀಗ ತಯಾರಿಸಿದ ದಂಪತಿ!

ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಸಿದ್ದವಾಯ್ತು ವಿಶೇಷ ಬೀಗ – 400 ಕೆಜಿ ತೂಕ, 10 ಅಡಿ ಎತ್ತರದ ಬೀಗ ತಯಾರಿಸಿದ ದಂಪತಿ!

ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಮಾಡಲಾಗ್ತಿದ್ದು, ಶ್ರೀರಾಮ ಮಂದಿರಕ್ಕೆ ಕುಶಲಕರ್ಮಿಯೊಬ್ಬರು ದೊಡ್ಡ ಕಾಣಿಕೆಯನ್ನೇ ನೀಡಲು ಮುಂದಾಗಿದ್ದಾರೆ. ಬರೋಬ್ಬರಿ 10 ಅಡಿ ಎತ್ತರದ 400 ಕೆಜಿ ತೂಕದ ಬೀಗ ಉಡುಗೊರೆಯಾಗಿ ನೀಡಲು ತಯಾರಿ ಮಾಡಿದ್ದಾರೆ.

ವಿಶ್ವದ ಅತಿದೊಡ್ಡ ಬೀಗವನ್ನು ತಯಾರಿಸಿಲು ಕುಶಲಕರ್ಮಿ ಸತ್ಯ ಪ್ರಕಾಶ್ ಶರ್ಮಾ ತಮ್ಮ ಪತ್ನಿ ಜೊತೆ ತಿಂಗಳುಗಳ ಕಾಲ ಕಷ್ಟಪಟ್ಟಿದ್ದಾರೆ. ಉತ್ತರ ಪ್ರದೇಶದ ಅಲಿಗಡ ನಿವಾಸಿಯಾಗಿರುವ ಸತ್ಯ ಪ್ರಕಾಶ್ ಕುಟುಂಬ ಸಾಕಷ್ಟು ವರ್ಷಗಳಿಂದ ಕೈಗಳಿಂದಲೇ ಬೀಗ ತಯಾರಿಸುವಲ್ಲಿ ಪ್ರಸಿದ್ಧವಾಗಿದೆ. ಈಗ ರಾಮ ಮಂದಿರವನ್ನು ಗಮನದಲ್ಲಿಟ್ಟುಕೊಂಡು 10 ಅಡಿ ಎತ್ತರ ಹಾಗೂ 4.5 ಅಡಿ ಅಗಲ ಹಾಗೂ 9.5 ಇಂಚು ದಪ್ಪವಿರುವ ಬೀಗವನ್ನು ತಯಾರಿಸಿದ್ದಾರೆ.

ಇದನ್ನೂ ಓದಿ: ಭೂಮಿಯಿಂದ ದೂರ ಹೋಗುತ್ತಿದ್ದಾನೆ ಚಂದ್ರ – ಸಂಶೋಧನೆಯಲ್ಲಿ ಬಯಲಾಯ್ತು ಅಂತರದ ಸತ್ಯ

ಈ ಬೀಗಕ್ಕೆ ನಾಲ್ಕು ಅಡಿಯಷ್ಟು ದೊಡ್ಡ ಕೀಲಿ ಕೈಯನ್ನು ಕೂಡ ನಿರ್ಮಿಸಿದ್ದಾರೆ. ಕಳೆದ 6 ತಿಂಗಳಿಂದ ಬೀಗ ತಯಾರಿಕೆ ಮಾಡಿದ್ದು ಬರೋಬ್ಬರಿ 3 ಲಕ್ಷ ರೂಪಾಯಿ ಖರ್ಚಾಗಿದೆ. ಆದರೆ 400 ಕೆಜಿ ತೂಕ ಇರುವ ಇಷ್ಟು ದೊಡ್ಡ ಕೀಯನ್ನ ಹಾಕೋದೇಗೆ, ತೆಗೆಯೋದೇಗೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಈ ಬಗ್ಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧಿಕಾರಿಗಳು ಮಾತನಾಡಿದ್ದು,  “ನಾವು ಹಲವಾರು ಭಕ್ತರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿದ್ದು, ಬೃಹತ್‌ ಗಾತ್ರದ ಬೀಗವೊಂದನ್ನು  ಶಲಕರ್ಮಿಯೊಬ್ಬರು ಕಾಣಿಕೆಯಾಗಿ ನೀಡಿದ್ದಾರೆ. ಈ ಬೀಗವನ್ನು ಎಲ್ಲಿ ಬಳಸಬಹುದು ಎಂಬುದನ್ನು ನೋಡಬೇಕಾಗಿದೆ” ಎಂದು ಹೇಳಿದ್ದಾರೆ.

suddiyaana