ಬಿಗ್‌ಬಾಸ್ ಕನ್ನಡ ಸೀಸನ್-9ರ ಫಿನಾಲೆಗೆ 10 ದಿನ ಬಾಕಿ – ಹೊಸವರ್ಷಕ್ಕೆ ಯಾರಿಗೆ ಸಿಗಲಿದೆ ಕಿರೀಟ?

ಬಿಗ್‌ಬಾಸ್ ಕನ್ನಡ ಸೀಸನ್-9ರ ಫಿನಾಲೆಗೆ 10 ದಿನ ಬಾಕಿ – ಹೊಸವರ್ಷಕ್ಕೆ ಯಾರಿಗೆ ಸಿಗಲಿದೆ ಕಿರೀಟ?

ಬಿಗ್ ಬಾಸ್ ಕನ್ನಡ ಸೀಸನ್ -9ರ ಫಿನಾಲೆಗೆ ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್ ಫೈನಲ್ ಯಾವಾಗ ಅನ್ನೋ ಕುತೂಹಲ ವೀಕ್ಷಕರಲ್ಲಿತ್ತು. ಇದೀಗ ಬಿಗ್‌ಬಾಸ್ ಕಡೆಯಿಂದಲೇ ಇದಕ್ಕೆ ಅಪ್‌ಡೇಟ್ ಸಿಕ್ಕಿದೆ. ಡಿಸೆಂಬರ್ 31 ಹಾಗೂ ಜನವರಿ 1ರಂದು ಈ ಸೀಸನ್​ನ ಫಿನಾಲೆ ನಡೆಯಲಿದೆ. ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಮಾಹಿತಿ ನೀಡಲಾಗಿದೆ. ನವೆಂಬರ್ 22ರ ಎಪಿಸೋಡ್​ನಲ್ಲಿ ಫಿನಾಲೆಗೆ 10 ದಿನ ಬಾಕಿ ಎಂಬ ಸೂಚನೆ ನೀಡಲಾಗಿದೆ.

ಇದನ್ನೂ ಓದಿ:  ಪುಷ್ಪಾ-2 ಚಿತ್ರತಂಡ ಸೇರಿದ ಸಿಂಪಲ್ ಬ್ಯೂಟಿ ಸಾಯಿಪಲ್ಲವಿ – ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ

ಇದೇ ಮೊದಲ ಬಾರಿಗೆ ಒಟಿಟಿ ಮೂಲಕ ಬಿಗ್ ಬಾಸ್​ ರಿಯಾಲಿಟಿ ಶೋ ಆರಂಭವಾಗಿತ್ತು. 45 ದಿನಗಳ ಕಾಲ ಸ್ಪರ್ಧಿಗಳು ದೊಡ್ಮನೆಯಲ್ಲಿ ಕಳೆದಿದ್ದು, ಜನ ಇದನ್ನ ಒಟಿಟಿ ಮೂಲಕ ವೀಕ್ಷಿಸಿದ್ದರು. ಇಲ್ಲಿಂದ ನಾಲ್ಕು ಸ್ಪರ್ಧಿಗಳು ಬಿಗ್ ಬಾಸ್ ಟಿವಿ ಸೀಸನ್​ಗೆ ಕಾಲಿಟ್ಟರು. ಇದೀಗ ಬಿಗ್‌ಬಾಸ್ ರಿಯಾಲಿಟಿ ಶೋ ಅಂತಿಮ ಹಂತಕ್ಕೆ ಬಂದಿದ್ದು, ಈ ವಾರ ಡಬಲ್ ಎಲಿಮಿನೇಷನ್ ನಡೆಯಬಹುದು ಎನ್ನಲಾಗುತ್ತಿದೆ. ಫಿನಾಲೆಯಲ್ಲಿ ಇರೋದು ಐವರು ಮಾತ್ರ. ಆದರೆ, ಈಗ ಇರೋದು 10 ಮಂದಿ. ಹೀಗಾಗಿ, ಎಂಟು ಮಂದಿಯಲ್ಲಿ ಇಬ್ಬರು ಈ ವಾರ ಹೊರಹೋಗಬಹುದು. ಮತ್ತೋರ್ವ ಸ್ಪರ್ಧಿ ಮುಂದಿನವಾರದ ಮಧ್ಯದಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಈ ಮೂಲಕ ಫಿನಾಲೆಗೆ ಐವರು ಸ್ಪರ್ಧಿಗಳು ತಲುಪಲಿದ್ದಾರೆ. ಅರುಣ್ ಸಾಗರ್, ಅಮೂಲ್ಯ ಗೌಡ, ಆರ್ಯವರ್ಧನ್​ ಗುರೂಜಿ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಮತ್ತು ದಿವ್ಯಾ ಉರುಡುಗ ಮನೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

suddiyaana