ಕೈದಿಗಳ ಸಂಖ್ಯೆಯಲ್ಲೂ ಅಮೆರಿಕ ನಂ.1.. ಭಾರತಕ್ಕೆ ಎಷ್ಟನೇ ಸ್ಥಾನ? – ಟಾಪ್ 10 ದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ

ಶಾಂತಿ ಸುವ್ಯವಸ್ಥೆ ಕಾಪಾಡಲು ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನು ಸುವ್ಯವಸ್ಥೆಗಳನ್ನ ಅಳವಡಿಸಿಕೊಂಡಿರುತ್ತದೆ. ತನ್ನ ಗಡಿಯೊಳಗೆ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ. ಅಪರಾಧ ಪ್ರಮಾಣಗಳನ್ನ ತಗ್ಗಿಸಲು ಹಾಗೂ ಶಿಕ್ಷಿಸಲು ಕೆಲ ನಿಯಮಗಳನ್ನ ಮಾಡಿಕೊಂಡಿರುತ್ತದೆ. ಕೆಲ ದೇಶಗಳಲ್ಲಂತೂ ಅಪರಾಧ ಪ್ರಕರಣಗಳು ಹೆಚ್ಚಾಗಿರುತ್ತವೆ. ನಾವಿಂದು ಜಗತ್ತಿನಲ್ಲಿ ಅತಿಹೆಚ್ಚು ಮಂದಿ ಜೈಲಿನಲ್ಲಿರುವ ಟಾಪ್ 10 ದೇಶಗಳಾವುವು ಹಾಗೂ ಕೈದಿಯೇ ಇಲ್ಲದ ದೇಶ ಯಾವುದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ಅಮೆರಿಕ ಸಂಯುಕ್ತ ಸಂಸ್ಥಾನ
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ(ಯುಎಸ್‌ಎ)ನಲ್ಲಿ ಜೈಲಿನಲ್ಲಿ ಬಂದಿಯಾಗಿರುವ ಕೈದಿಯಲ್ಲೂ ನಂ.1 ಎನಿಸಿದೆ. ಅಮೆರಿಕದಲ್ಲಿ ಬರೋಬ್ಬರಿ 20,68,800 ಮಂದಿ ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಚೀನಾ
ಇನ್ನು ಚೀನಾ ದೇಶ ಎರಡನೇ ಅತಿಹೆಚ್ಚು ಕೈದಿಗಳನ್ನು ಹೊಂದಿರುವ ದೇಶವಾಗಿದೆ. ಚೀನಾದಲ್ಲಿ ಬರೋಬ್ಬರಿ 16,90,000 ಮಂದಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಬ್ರೆಜಿಲ್
ವಿಸ್ತೀರ್ಣದ ಆಧಾರದಲ್ಲಿ 5ನೇ ಅತಿದೊಡ್ಡ ದೇಶ ಎನಿಸಿಕೊಂಡಿರುವ ಬ್ರೆಜಿಲ್‌ನಲ್ಲಿ ಅಪರಾಧಿಗಳ ಸಂಖ್ಯೆ ಕೂಡಾ ಹೆಚ್ಚೇ ಇದೆ. ಬ್ರೆಜಿಲ್‌ನಲ್ಲಿ ಒಟ್ಟು 8,11,707 ಮಂದಿ ಜೈಲುವಾಸಿಗಳಾಗಿದ್ದಾರೆ.
ಭಾರತ
ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿರುವ ಭಾರತದಲ್ಲಿ, ಕೈದಿಗಳ ಸಂಖ್ಯೆ ತುಸು ಹೆಚ್ಚೇ ಇದೆ. ಭಾರತದಲ್ಲಿ ಇಲ್ಲಿಯವರೆಗೆ 5,54,034 ಮಂದಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ರಷ್ಯಾ
ವಿಸ್ತೀರ್ಣದ ಆಧಾರದಲ್ಲಿ ಜಗತ್ತಿನ ಅತಿ ವಿಶಾಲ ದೇಶ ಎನಿಸಿಕೊಂಡಿರುವ ರಷ್ಯಾದಲ್ಲಿ ಕಾನೂನು ಸುವ್ಯವಸ್ಥೆ ಭದ್ರವಾಗಿದೆ. ಈ ಕಾರಣಕ್ಕಾಗಿಯೇ 4,71,490 ರಷ್ಯಾದಲ್ಲಿ ಜೈಲಿನಲ್ಲಿ ಬಂಧಿಗಳಾಗಿದ್ದಾರೆ.
ಥಾಯ್ಲೆಂಡ್
ಸುಂದರ ಬೀಚ್‌ಗಳು ಹಾಗೂ ಪ್ರವಾಸಿ ತಾಣಗಳಿಗೆ ಹೆಸರಾಗಿರುವ ಥಾಯ್ಲೆಂಡ್‌ನಲ್ಲಿ ಅಪರಾಧ ಕೃತ್ಯಗಳು ನಡೆಯುವುದು ಸರ್ವೇ ಸಾಮಾನ್ಯ ಎನಿಸಿದೆ. ಹೀಗಾಗಿಯೇ ಥಾಯ್ಲೆಂಡ್‌ನಲ್ಲಿ 309,282 ಮಂದಿ ಕಂಬಿ ಎಣಿಸುತ್ತಿದ್ದಾರೆ.
ಟರ್ಕಿ:
ಮುಸ್ಲಿಂ ಬಾಹುಳ್ಯ ಹೊಂದಿರುವ ಟರ್ಕಿ ಕೂಡಾ ಹೆಚ್ಚು ಅಪರಾಧ ಚಟುವಟಿಕೆಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಸದ್ಯ ಟರ್ಕಿಯಲ್ಲಿ 2,91,198 ಮಂದಿ ಕೈದಿಗಳು ಜೈಲಿನಲ್ಲಿ ಬಂಧಿಯಾಗಿದ್ದಾರೆ.
ಇಂಡೋನೇಷ್ಯಾ:
ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಂರನ್ನು ಹೊಂದಿರುವ ದೇಶ ಎನಿಸಿಕೊಂಡಿರುವ ಸುಂದರ ಬೀಚ್‌ಗಳು, ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿವೆ. ಇಲ್ಲಿ ತಪ್ಪು ಮಾಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವವರ ಸಂಖ್ಯೆ ಬರೋಬ್ಬರಿ 2,66,259..!
ಮೆಕ್ಸಿಕೊ
ದಕ್ಷಿಣ ಅಮೆರಿಕಾದ ತುದಿಯಲ್ಲಿರುವ ಮೆಕ್ಸಿಕೊ ದೇಶವು, ಜಗತ್ತಿನ ಅಪಾಯಕಾರಿ ದೇಶಗಳಲ್ಲಿ ಒಂದು ಎನಿಸಿದೆ. ಮೆಕ್ಸಿಕೊದಲ್ಲಿ 2,20,866 ಮಂದಿ ಕೈದಿಗಳು ಜೈಲಿನೊಳಗೆ ಜೀವನ ನಡೆಸುತ್ತಿದ್ದಾರೆ.
ಇರಾನ್
ಡ್ರಗ್ಸ್, ಮಾನವ ಕಳ್ಳಸಾಗಾಣಿಕೆ, ಭ್ರಷ್ಟಾಚಾರ ಸೇರಿದಂತೆ ಹಲವು ಕುಕೃತ್ಯಗಳಿಗೆ ಹೆಸರುವಾಸಿಯಾಗಿರುವ ಇರಾನ್‌ನಲ್ಲಿ 1,89,000 ಮಂದಿ ವಿವಿಧ ಅಪರಾಧ ಕೃತ್ಯಗಳಿಗಾಗಿ ಕಂಬಿ ಎಣಿಸುತ್ತಿದ್ದಾರೆ.