ತೈವಾನ್ ಬಳಿ 10 ಚೀನಾ ಯುದ್ಧ ವಿಮಾನಗಳು – ಯುದ್ಧಕ್ಕೆ ಸನ್ನದ್ಧವಾಯ್ತಾ ಡ್ರ್ಯಾಗನ್ ರಾಷ್ಟ್ರ?
ತೈವಾನ್ ಮೇಲೆ ಯುದ್ಧ ಸಾರೋಕೆ ಚೀನಾ ಅಕ್ಷರಶ: ಬಕಪಕ್ಷಿಯಂತೆ ಕಾದು ಕುಳಿತಿದೆ. ತೈವಾನ್ ಬಳಿ ಪದೇ ಪದೇ ಚೀನಾ ಫೈಟರ್ ಜೆಟ್ಗಳು ಹಾರಾಡುತ್ತಿವೆ. ಇದೀಗ ಮತ್ತೆ 10 ಚೀನಾ ಯುದ್ಧ ವಿಮಾನಗಳು ಏಕಕಾಲಕ್ಕೆ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಚೀನಾದ ಎರಡು ಯುದ್ಧ ಹಡಗುಗಳು ಕೂಡ ದ್ವೀಪ ರಾಷ್ಟ್ರದ ಸುತ್ತಲೂ ಸಂಚರಿಸುತ್ತಿವೆ ಅಂತಾ ತೈವಾನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ: ಬಿಜೆಪಿಯಿಂದ ನಿಲ್ಲದ ಪಕ್ಷಾಂತರ ಪರ್ವ – ಮರಳಿ ‘ಕೈ’ ಹಿಡಿಯುತ್ತಾರಾ ಮಾಲಕರೆಡ್ಡಿ..?
ಇತ್ತ ತೈವಾನ್ ಏನು ನೋಡುತ್ತಾ ಕುಳಿತಿಲ್ಲ. ಮಿಸೈಲ್ಗಳನ್ನ ಹೊತ್ತ ತನ್ನ ಫೈಟರ್ ಜೆಟ್ಗಳನ್ನ ಮತ್ತು ಯುದ್ಧ ಹಡಗನ್ನ ಕೂಡ ಆ್ಯಕ್ಷನ್ ಮೋಡ್ನಲ್ಲಿ ಸಿದ್ಧಪಡಿಸಿಕೊಂಡಿದೆ. ತೈವಾನ್ ಯುದ್ಧ ವಿಮಾನಗಳು ದೇಶದ ಸುತ್ತಲೂ ಗಸ್ತು ತಿರುಗುತ್ತಿವೆ. ಇನ್ನು ಕಳೆದ ಬುಧವಾರ ಚೀನಾದ 28 ಫೈಟರ್ ಜೆಟ್ಗಳು ಮತ್ತು ನಾಲ್ಕು ಯುದ್ಧ ಹಡಗುಗಳು ತೈವಾನ್ ಸಮುದ್ರ ತೀರದ ಬಳಿ ಸಂಚರಿಸಿದ್ದವು. ಅಷ್ಟೇ ಅಲ್ಲ, ಒಂದು ತಿಂಗಳ ಅಂತರದಲ್ಲಿ ಚೀನಾದ ಬರೋಬ್ಬರಿ 292 ಯುದ್ಧ ವಿಮಾನಗಳು ಮತ್ತು 76 ನೌಕೆಗಳು ತೈವಾನ್ ಬಳಿ ಹಾದು ಹೋಗಿದ್ದು, ದಿನಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಲೇ ಇದೆ.