1.2.3 ಸಮಾಧಿ ಖಾಲಿ ಖಾಲಿ.. ನಾಲ್ಕರಲ್ಲಿ ಇರೋದ್ ಏನು?
ಜಾಗ 1 ರಲ್ಲಿದ್ದ ID ಕಾರ್ಡ್ ಯಾರದ್ದು?

1.2.3 ಸಮಾಧಿ ಖಾಲಿ ಖಾಲಿ.. ನಾಲ್ಕರಲ್ಲಿ ಇರೋದ್ ಏನು?ಜಾಗ 1 ರಲ್ಲಿದ್ದ ID  ಕಾರ್ಡ್ ಯಾರದ್ದು?

ಎಷ್ಟೇ ಅಗೆದ್ರೂ ಏನೂ ಸಿಗುತ್ತಿಲ್ಲ.. ಎಷ್ಟೇ ಹುಡುಕಿದ್ರೂ ಅಸ್ತಿಪಂಜರದ ಚೂರು ಕೂಡ ಕಣ್ಣಿಗೆ ಕಾಣುತ್ತಿಲ್ಲ..  ಮಳೆಯ ನಡುವೆ 15 -20 ಜನ ಸೇರಿ ಅಗೆದ್ರೂ ಸಮಾಧಿ ಜಾಗದಲ್ಲಿ ಮಣ್ಣು ಬಿಟ್ಟು ಬೇರೆನೂ ಸಿಗುತ್ತಿಲ್ಲ.. ಸ್ಥಳ ಮಹಜರು ಸಂದರ್ಭದಲ್ಲಿ ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟದ ಸನಿಹದಲ್ಲೇ ಇರುವ ದಟ್ಟ ಕಾಡಿನಲ್ಲಿ 13 ಕಡೆ ಶವಗಳನ್ನು ಹೂತಿದ್ದಾಗಿ ದೂರುದಾರ ಹೇಳಿದ್ದ.. ಅವನು ಹೇಳಿದ್ದಂತೆ ಪೊಲೀಸರು ಆ ಜಾಗವನ್ನು ಮಾರ್ಕ್ ಮಾಡಿದ್ದರು. ಅಲ್ಲದೆ, ಆ ಜಾಗಕ್ಕೆ ANF   ಪಡೆಯ ಶಸ್ತ್ರಸಜ್ಜಿತ ಪೊಲೀಸರನ್ನು ಕಾವಲಿಗೆ ನಿಯೋಜಿಸಲಾಗಿತ್ತು. ಇದರ ಬೆನ್ನಲ್ಲೇ ಜುಲೈ 28ರ ಮಂಗಳವಾರದಿಂದ ಸಮಾಧಿ ಅಗೆಯುವ ಕೆಲಸ ಆರಂಭಿಸಲಾಗಿದೆ. ಮೊದಲ ದಿನ ಎಂಟು ಅಡಿ ಆಳ, 15 ಅಡಿ ಉದ್ದಕ್ಕೆ ಅಗೆಯಲಾಗಿದ್ದು ಅಸ್ಥಿಪಂಜರವಾಗಲೀ, ಇನ್ನಿತರ ಎಲುಬು ಆಗಲೀ ಸ್ಥಳದಲ್ಲಿ ಸಿಕ್ಕಿರಲಿಲ್ಲ.  ಹೀಗಾಗಿ ಎರಡನೇ ದಿನ ಅಂದ್ರೆ ಇವತ್ತು ಧರ್ಮಸ್ಥಳ ಪಂಚಾಯತ್ ವತಿಯಿಂದ 20ರಷ್ಟು ಪೌರ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಲಾಗಿದ್ದು, ಹಿಟಾಚಿ ಹೋಗದ ಕಾಡಿನ ಪ್ರದೇಶದಲ್ಲಿ ಅಗೆದ್ರು. ಎರಡು ಮತ್ತು 3ನೇ ಮಾರ್ಕ್ ಹಾಕಿರುವ ಜಾಗದಲ್ಲೂ ಶವ ಹೂತಿರುವ ಬಗ್ಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಸ್ಥಳದಲ್ಲಿ 6 ಅಡಿ ಆಳ ಮತ್ತು 6 ಅಗಲದಲ್ಲಿ ಸಮಾಧಿಯನ್ನು ಅಗೆಯಲಾಗಿದೆ. ಆದ್ರೆ ಇಲ್ಲಿ ಏನೂ ಸಿಕ್ಕಿಲ್ಲ. ಆನಂತರ ಪೊಲೀಸ್ ಶ್ವಾನವನ್ನೂ ಸ್ಥಳಕ್ಕೆ ಕರೆಸಲಾಗಿತ್ತು. ಈಗಾಗಲೇ 3 ಜಾಗದಲ್ಲಿ ಸಮಾಧಿ ಅಗೆದಿದ್ದು, ಯಾವುದೇ ಅಸ್ತಿ ಪಂಜರದ ಚೂರು ಕೂಡ ಸಿಕ್ಕಿಲ್ಲ. ಇನ್ನುಳಿದ ಸಮಾಧಿಗಳ ಅಗೆಯೋ ಆಪರೇಷನ್ ಮುಂದುವರೆದಿದೆ. 13 ಜಾಗದಲ್ಲೂ ಅಗೆದ ನಂತ್ರ ಮತ್ತೆ ಮಾಸ್ಕ್ ಮ್ಯಾನ್ ಹೇಳಿದ ಜಾಗದಲ್ಲಿ ಅಗೆಯಲಾಗುತ್ತೆ..

ಮೊದಲ ಜಾಗದಲ್ಲಿ ಐಡಿ ಕಾರ್ಡ್ ಪತ್ತೆ?

ಇನ್ನು ನಿನ್ನೆ  ಮೊದಲ ಜಾಗದಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.. ಆದ್ರೆ ಇವತ್ತು ಪಾಟಿಂಟ್ ನಂ1 ನಲ್ಲಿ ಎರಡು ಐಡಿ ಕಾರ್ಡ್ ಸಿಕ್ಕಿದೆ ಅನ್ನೋ ಮಾಹಿತಿ ಬಂದಿದೆ. ಮೊದಲ ಜಾಗದಲ್ಲಿ ಎರಡೂವರೆ ಅಡಿ ಜಾಗದಲ್ಲಿ 1 ಪಾನ್ ಕಾರ್ಡ್ ಮತ್ತು 1 ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ಅನನ್ಯ ಭಟ್ ಪರ ವಕೀಲ ಮಂಜುನಾಥ್ ಪ್ರೆಸ್ ನೋಟ್ ರಿಲೀಸ್ ಮಾಡಿದ್ದಾರೆ.. ಹಾಗೇ ಮಹಿಳೆಯ ರೌಕೆ ಇತ್ತು ಅಂತ ಕೂಡ ಈ ಮಂಜುನಾಥ್ ಉಲ್ಲೇಖೆ ಮಾಡಿದ್ದಾರೆ.   ಬಟ್ ಐಸ್‌ಐಟಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ..   ಬಟ್ ಇದು  ಅಲ್ಲಿ ಶವ ಹುಳಿರೋ ವ್ಯಕ್ತಿಯದ್ದೇ ಅಂತ ಹೇಳೋಕೆ ಆಗಲ್ಲ.. ಸಮಾಧಿ ಅಗೆದ ಜಾಗ ನೇತ್ರಾವತಿ ನದಿ ತೀರದಲ್ಲಿ ಇರೋದ್ರಿಂದ ಯಾರದ್ದಾದ್ರೂ ತೇಲಿಕೊಂಡು ಬಂದಿರಬಹುದು. ಹೀಗಾಗಿ ಎಲ್ಲಾ ಆಯಾಮದಲ್ಲೂ ಐಡಿ ಕಾರ್ಡ್ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತೆ..

ಧರ್ಮಸ್ಥಳ ಪೊಲೀಸರ ಲಿಸ್ಟ್ ಕೇಳಿದ SIT

ಧರ್ಮಸ್ಥಳ ಪೊಲೀಸರ ಲಿಸ್ಟ್ ಕೇಳಿದ ಎಸ್‌ಐಟಿ ಇದೇ ವೇಳೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 1995ರಿಂದ 2014ರ ವರೆಗೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಸಿಬಂದಿಯ ಲಿಸ್ಟ್ ನೀಡುವಂತೆ ಎಸ್‌ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಎಸ್ಪಿ ಕಚೇರಿಗೆ ಕೇಳಿಕೊಂಡಿದ್ದಾರಂತೆ.. ಶವ ಹೂತಿಟ್ಟ ವಿಚಾರದ ಬಗ್ಗೆ ದೂರುದಾರ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸರ ಬಗ್ಗೆ ಆರೋಪ ಮಾಡಿದ್ದಾನೆ ಎನ್ನಲಾಗುತ್ತಿದ್ದು ಕೆಲವು ಅಧಿಕಾರಿಗಳ ಬಗ್ಗೆ ಗುರುತರ ಆರೋಪ ಕೇಳಿಬಂದಿದ್ದರಿಂದ ಅವರನ್ನು ಎಸ್‌ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಪೊಲೀಸರ ಎದೆಯಲ್ಲಿ ಢವ ಢವ ಶುರು ಆಗುವಂತಾಗಿದೆ.

 ಕೇಂದ್ರ ಸೇವೆಗೆ ಹೋಗ್ತಾರ ಪ್ರಣವ್ ಮೊಹಂತಿ?

ಎಸ್ಐಟಿ ಮುಖ್ಯಸ್ಥ ಜವಾಬ್ದಾರಿ ಹೊತ್ತಿರುವ ಪ್ರಣಪ್ ಮೊಹಂತಿ ಇದೀಗ ತಮ್ಮ ಜವಾಬ್ದಾರಿಯಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಕೇಂದ್ರದ ಸೇವೆಗೆ ಕೆಲ ಐಪಿಎಸ್ ಅಧಿಕಾರಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಪ್ರಣವ್ ಮೊಹಂತಿ ಹೆಸರಿದೆ. ಧರ್ಮಸ್ಥಳ ಶವ ಹೂತಿಟ್ಟ ಹೈಪ್ರೋಫೈಲ್ ಕೇಸ್ ತನಿಖೆ ನಡೆಸುತ್ತಿರುವ ಪ್ರಣವ್ ಮೊಹಂತಿ, ಎಸ್ಐಟಿ ತಂಡದ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.   ಆದರೆ ಇದರ ನಡುವೆ ಕೇಂದ್ರ ಸರ್ಕಾರ ಕೇಂದ್ರ ಸೇವೆಗೆ ಐಪಿಎಸ್ ಅಧಿಕಾರಿಗಳನ್ನು ಕರೆಯಿಸಿಕೊಳ್ಳಲು ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ 16ನೇ ಹಸರಾಗಿ ಪ್ರಣವ್ ಮೊಹಂತಿ ಹೆಸರು ಉಲ್ಲೇಖಿಸಲಾಗಿದೆ.

ಸದ್ಯ ಮೊದಲ 3 ಜಾಗದಲ್ಲಿ ಯಾವುದೇ ಅಸ್ತಿಪಂಜರ ಸಿಕ್ಕಿಲ್ಲ.. 3 ರಲ್ಲ ಸಿಕ್ಕಿಲ್ಲ ಅಂತ ಇಲ್ಲೇ ಮುಕ್ತಾಯ ಆಗಲ್ಲ.. ಯಾಕಂದ್ರೆ 13 ಜಾಗವನ್ನ ಮಾಸ್ಕ್ ಮ್ಯಾನ್  ಗುರುತಿಸಿದ್ದಾನೆ..  ಹೀಗಾಗಿ ಇನ್ನೂ ಉಳಿದ ಜಾಗದಲ್ಲಿ ಶೋಧ ಮಾಡಲೇ ಬೇಕು.. ಇದ್ರಲ್ಲಿ ಒಂದು ಜಾಗದಲ್ಲಿ ಏನಾದ್ರೂ ಸಿಕ್ಕಿದ್ರೂ ಈ ಕೇಸ್‌ಗೆ ಮತ್ತಷ್ಟು ತಿರುವು ಪಡೆಯುತ್ತೆ.. ಹೀಗಾಗಿ  ಈಕೇಸ್‌ ಬಗ್ಗೆ ಈಗಲೇ ಏನೂ ಹೇಳುವುದ್ದಕ್ಕೆ ಆಗಲ್ಲ.. ಹೀಗಾಗಿ ಎಸ್‌ಐಟಿ ತನಿಖೆ ಆಗೋ ತನಕ ಕಾಯಲೇ ಬೇಕು..

Kishor KV