₹110.5 ಕೋಟಿ ಬ್ಯಾಲೆನ್ಸ್.. ಪಂಜಾಬ್ KING – RCB ಲಕ್ ಬದಲಿಸುತ್ತಾ ₹83 ಕೋಟಿ?
ಸ್ಟಾರ್ಸ್ ಮೇಲೆ ಕಣ್ಣಿಟ್ರಾ ಪ್ರೀತಿ? 

₹110.5 ಕೋಟಿ ಬ್ಯಾಲೆನ್ಸ್.. ಪಂಜಾಬ್ KING – RCB ಲಕ್ ಬದಲಿಸುತ್ತಾ ₹83 ಕೋಟಿ?ಸ್ಟಾರ್ಸ್ ಮೇಲೆ ಕಣ್ಣಿಟ್ರಾ ಪ್ರೀತಿ? 

ಪಂಜಾಬ್ ಕಿಂಗ್ಸ್. ಐಪಿಎಲ್​ನಲ್ಲಿ ಡೆಲ್ಲಿ, ಬೆಂಗಳೂರು ಹೊರತುಪಡಿಸಿದ್ರೆ ಟ್ರೋಫಿ ಗೆಲ್ಲದೇ ಇರುವಂಥ ಮತ್ತೊಂದು ತಂಡ. ಬಟ್ ಈ ಸಲ ಮಾತ್ರ ಐಪಿಎಲ್ ಹರಾಜಿಗೂ ಮುನ್ನ ಪಂಜಾಬ್​ ಕಿಂಗ್ಸ್​ನದ್ದೇ ಸದ್ದು. ಹರಾಜಿನಲ್ಲಿ ಭಾಗಿಯಾಗೋ 10 ತಂಡಗಳ ಪೈಕಿ ಪಂಜಾಬೇ ಕಿಂಗ್. ಪರ್ಸ್​ ತುಂಬಾ ಝಣ ಝಣ ಕಾಂಚಾಣ ತುಂಬಿಕೊಂಡಿರೋ ಪ್ರಾಂಚೈಸಿ ಸ್ಟಾರ್ ಆಟಗಾರರನ್ನೇ ಟಾರ್ಗೆಟ್ ಮಾಡಿದೆ. ಇಡೀ ತಂಡವೇ ಕಂಪ್ಲೀಟ್ ಬದಲಾಗೋದು ಪಕ್ಕಾ ಆಗಿದೆ. ಅಷ್ಟಕ್ಕೂ ಪಂಜಾಬ್ ಸ್ಟ್ರಾಟಜಿ ಏನು?  ಯಾರ್ಯಾರ ಮೇಲೆ ಕಣ್ಣಿಟ್ಟಿದೆ..? ಹರಾಜಿನಲ್ಲೇ ಇವ್ರೇ ಕಿಂಗ್ ಆಗೋದಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್‌ ಸ್ಟೋರಿ

ಐಪಿಎಲ್ ಆರಂಭ ಆದಾಗಿಂದ ಬೇರೆಲ್ಲ ಫ್ರಾಂಚೈಸಿಗಳು ಟೇಬಲ್ ಟಾಪರ್ ರೇಸ್​ಗೆ ಹೊಡೆದಾಡಿದ್ರೆ ಪಂಜಾಬ್ ಕಿಂಗ್ಸ್ ಮಾತ್ರ ಬಾಟಮ್​ನಲ್ಲೇ ಹೊರ ಬಿದ್ದಿದ್ದೇ ಹೆಚ್ಚು. ಬಟ್ ಈ ಸಲ ಮಾತ್ರ ಹರಾಜಿನಲ್ಲೇ ಸದ್ದು ಮಾಡೋಕೆ ಎಲ್ಲಾ ಸಿದ್ಧತೆ ಮಾಡ್ಕೊಂಡಿದೆ. ಐದೈದು ಸಲ ಚಾಂಪಿಯನ್ ಪಟ್ಟಕ್ಕೇರಿರೋ ತಂಡಗಳನ್ನೇ ಬೀಟ್ ಮಾಡೋದು ಪಕ್ಕಾ. ಯಾಕಂದ್ರೆ ಪಂಜಾಬ್ ಕಿಂಗ್ಸ್ ಪರ್ಸ್ ತುಂಬಾ ಕೋಟಿ ಕೋಟಿ ಹಣ ಇದೆ. ಸ್ಟಾರ್ ಆಟಗಾರರನ್ನೇ ಕೈ ಬಿಟ್ಟು ಜಸ್ಟ್ ಇಬ್ಬರನ್ನಷ್ಟೇ ರಿಟೇನ್ ಮಾಡಿಕೊಂಡಿರೋ ಫ್ರಾಂಚೈಸಿ ಜಾಣನಡೆ ಇಟ್ಟಿದೆ.

ಬಲಿಷ್ಠ ಆಟಗಾರರನ್ನೇ ಹರಾಜಿಗೆ ಬಿಟ್ಟ ಪಂಜಾಬ್ ಕಿಂಗ್ಸ್!

10 ಐಪಿಎಲ್ ಫ್ರಾಂಚೈಸಿಗಳ ಪೈಕಿ ಇಬ್ಬರೇ ಇಬ್ಬರು ಆಟಗಾರರನ್ನ ಉಳಿಸಿಕೊಂಡಿದ್ದು ಪಂಜಾಬ್ ಕಿಂಗ್ಸ್ ಮಾತ್ರ. ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಇಂಗ್ಲೆಂಡ್ ಆಲ್‌ರೌಂಡರ್‌ಗಳಾದ ಸ್ಯಾಮ್ ಕರನ್ ಮತ್ ಲಿವಿಂಗ್‌ಸ್ಟನ್‌, ಭಾರತದ ವೇಗಿ ಅರ್ಷದೀಪ್ ಸಿಂಗ್ ಅವರಂತಹ ಬಲಿಷ್ಠ ಆಟಗಾರರನ್ನೇ ರಿಲೀಸ್ ಮಾಡಿ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ ಪಂಜಾಬ್. ಪ್ರಭ್‌ಸಿಮ್ರನ್ ಸಿಂಗ್ ಮತ್ತು ಶಶಾಂಕ್ ಸಿಂಗ್ ಅವರನ್ನು ಮಾತ್ರ ಉಳಿಸಿಕೊಂಡು ಅಚ್ಚರಿ ಮೂಡಿಸಿದೆ. ತಂಡದ ಕೋಚ್‌ ಆಗಿ ರಿಕಿ ಪಾಂಟಿಂಗ್‌ ನೇಮಕವಾದ ಬಳಿಕ, ರಿಟೆನ್ಷನ್‌ ನಲ್ಲೇ ಟ್ವಿಸ್ಟ್ ಕೊಟ್ಟಿತ್ತು. ಬಟ್ ಫ್ರಾಂಚೈಸಿ ಪ್ಲಾನೇ ಬೇರೆ ಇದೆ. ಪಂಜಾಬ್‌ ತಂಡವನ್ನು ಕಂಪ್ಲೀಟ್ ಚೇಂಜ್ ಮಾಡಿ ಹೊಸ ತಂಡವಾಗಿ ಕಟ್ಟೋಕೆ ಸರ್ವಸಿದ್ಧತೆಗಳಮನ್ನ ಮಾಡಿಕೊಂಡಿದೆ.

ಪಂಜಾಬ್ ಪರ್ಸ್ ನಲ್ಲಿದೆ ಬರೋಬ್ಬರಿ 110.5 ಕೋಟಿ ರೂಪಾಯಿ!

ಯೆಸ್. ಈ ಸಲ ಹರಾಜಿಗೂ ಮುನ್ನ ಬಿಸಿಸಿಐ ಎಲ್ಲಾ ಪ್ರಾಂಚೈಸಿಗಳಿಗೆ 120 ಕೋಟಿ ರೂಪಾಯಿ ಮಿತಿಯನ್ನ ಹೆಚ್ಚಿಸಿತ್ತು. ಆದ್ರೂ ಕೂಡ ಇಬ್ಬರ ಮೇಲಷ್ಟೇ ಇನ್ವೆಸ್ಟ್ ಮಾಡಿದ್ದ ಪಂಜಾಬ್ ಶಶಾಂಕ್ ಸಿಂಗ್​ಗೆ 5.5 ಕೋಟಿ ರೂಪಾಯಿ ಹಾಗೇ ಪ್ರಭ್‌ಸಿಮ್ರಾನ್ ಸಿಂಗ್ ಗೆ 4 ಕೋಟಿ ರೂಪಾಯಿ ನೀಡಿ ರಿಟೇನ್ ಮಾಡಿಕೊಂಡಿದೆ. ಇಬ್ಬರೂ ಆಟಗಾರರು ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿದ್ದಾರೆ. ಈ ಮೂಲಕ 110.5 ಕೋಟಿ ರೂಪಾಯಿ ಇನ್ನೂ ಬಾಕಿ ಇದೆ. ಇದೇ ಕಾರಣಕ್ಕೆ ಸ್ಟಾರ್ ಆಟಗಾರರನ್ನ ಖರೀದಿ ಮಾಡೋಕೆ ಬೇರೆಲ್ಲಾ ತಂಡಗಳಿಗಿಂತ ಪಂಜಾಬ್ ಹೆಚ್ಚಿನ ಅವಕಾಶವನ್ನ ಹೊಂದಿದೆ.

ಪಂಜಾಬ್ ಕ್ಯಾಪ್ಟನ್ ರೇಸ್ ನಲ್ಲಿ ಮೂವರು ಪ್ಲೇಯರ್ಸ್!

ಪಂಜಾಬ್‌ ತಂಡದ ಕೋಚ್‌ ಆಗಿ ರಿಕಿ ಪಾಂಟಿಂಗ್ ನೇಮಕವಾದ ಬಳಿಕ ಸಾಕಷ್ಟು ಬದಲಾವಣೆಗಳನ್ನ ಮಾಡ್ಲಾಗಿದೆ. ಅಲ್ದೇ ಪಂಜಾಬ್‌ ತಂಡದ ನಾಯಕರಾಗಿದ್ದ ಶಿಖರ್‌ ಧವನ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರಿಂದ ಹೊಸ ನಾಯಕನ ನೇಮಕ ಮಾಡಬೇಕಿದೆ.  ಅದ್ರಲ್ಲೂ ಮೂವರು ಪ್ಲೇಯರ್ಸ್ ಮೇಲೆಯೇ ಕಣ್ಣಿಟ್ಟಿದೆ. ಅದ್ರಲ್ಲಿ ನಂಬರ್ 1 ರಿಷಭ್ ಪಂತ್. ಪಂಜಾಬ್‌ ಕಿಂಗ್ಸ್‌ ತಂಡದ ನಾಯಕ ಯಾರಾಗಬಹುದು ಅನ್ನೋ ಚರ್ಚೆ ನಡುವೆ ಕೇಳಿ ಬರ್ತಿರೋ ಹೆಸರೇ  ರಿಷಭ್ ಪಂತ್. 2016 ರಿಂದ 2024 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್‌ನ ಭಾಗವಾಗಿದ್ದ ರಿಷಬ್ ಪಂತ್ ಮೇಲೆ ಪಂಜಾಬ್ ಕಣ್ಣಿಟ್ಟಿದೆ. ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುವಲ್ಲಿ ಪಂತ್​ಗೆ ಪಂತ್​ರೇ ಸರಿಸಾಟಿ. ವಿಕೆಟ್‌ ಹಿಂದೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸಬಲ್ಲ ಕೆಪಾಸಿಟಿ ಇದೆ. ಅಲ್ಲದೆ ಪಂತ್‌ ಹಾಗೂ ಪಾಂಟಿಂಗ್‌ ನಡುವೆ ಒಳ್ಳೆಯ ಬಾಂಧವ್ಯ ಇದೆ. ಹಾಗೇ ಮತ್ತೊಂದು ಹೆಸ್ರು ಶ್ರೇಯಸ್ ಅಯ್ಯರ್. ಕಳೆದ ಸೀಸನ್​ನಲ್ಲಿ ಶ್ರೇಯಸ್ ನಾಯಕತ್ವದಲ್ಲಿ ಕೆಕೆಆರ್ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತ್ತು. ಈ ಪ್ಲೇಯರ್‌ಗೆ ಕೆಕೆಆರ್‌ ಗೇಟ್ ಪಾಸ್‌ ನೀಡಿದೆ. ಪಂಜಾಬ್ ಕಿಂಗ್ಸ್ ಅಯ್ಯರ್ ಮೇಲೆ ಹಣದ ಹೊಳೆ ಹರಿಸೋ ಎಲ್ಲಾ ಸಾಧ್ಯತೆ ಇದೆ. ಇನ್ನು ಮೂರನೇ ಹೆಸ್ರೇ ಡೇವಿಡ್ ವಾರ್ನರ್. ವಾರ್ನರ್​ಗೆ ಪಂಜಾಬ್ ಮಣೆ ಹಾಕಲು ಸಿದ್ಧತೆ ನಡೆಸಿದೆ. ವಾರ್ನರ್ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಈ ಸಲ ತಂಡಕ್ಕೆ ಕರೆತರೋಕೆ ಪಂಜಾಬ್ ಪ್ಲ್ಯಾನ್ ಮಾಡಿಕೊಳ್ತಿದೆ.

2021ರವರೆಗೆ ಕಿಂಗ್ಸ್ ಇಲೆವೆಲ್ ಪಂಜಾಬ್ ಅಂತಾ ಇದ್ದ ಹೆಸರನ್ನ ಕಳೆದ ಮೂರು ವರ್ಷಗಳಿಂದ ಪಂಜಾಬ್ ಕಿಂಗ್ಸ್ ಅಂತಾ ಮರುನಾಮಕರಣ ಮಾಡ್ಕೊಂಡ್ರೂ ನೋ ಯೂಸ್. ಹೆಸರು ಬದಲಿಸಿದ್ರೂ ಲಕ್ ಮಾತ್ರ ಬದ್ಲಾಗಿಲ್ಲ. ಪ್ರೀತಿ ಜಿಂಟಾ ಒಡೆತತನ ಫ್ರಾಂಚೈಸಿ ಮೊದ್ಲಿಂದಲೂ ಡಲ್ ಆಗೇ ಇದೆ. ಸ್ಟಾರ್ ಆಟಗಾರರೂ ಇಲ್ಲ. ಫ್ಯಾನ್ ಬೇಸ್ ಮೊದ್ಲೇ ಇಲ್ಲ. ಬಟ್ ಈ ಸಲ ಮಾತ್ರ ಪಂಜಾಬ್ ಕಿಂಗ್ಸ್ ಎಲ್ಲಾ ಫ್ರಾಂಚೈಸಿಗಳ ಪೈಕಿ ಅತೀ ಹೆಚ್ಚು ಹಣವನ್ನ ಹೊಂದಿದ್ದು ಹೆಚ್ಚೆಚ್ಚು ಬಿಡ್ ಮಾಡೋಕೆ ಕಾಯ್ತಿದೆ. ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 83 ಕೋಟಿ ಹೊಂದಿದ್ದು ಎರಡನೇ ಪ್ಲೇಸ್​ನಲ್ಲಿದೆ. ಸೋ ಹರಾಜಿನಲ್ಲಿ ಈ ಎರಡೂ ತಂಡಗಳ ಮೇಲೆಯೇ ಎಲ್ಲರ ಕಣ್ಣು ನೆಟ್ಟಿದೆ.

Shwetha M