ಒಂದು ಕೆಜಿ ಮಾವಿನಹಣ್ಣಿಗೆ ಬರೋಬ್ಬರಿ ₹2.75 ಲಕ್ಷ – ಈ ಹಣ್ಣಿನಲ್ಲಿ ಅಡಗಿದೆ ‘ಆ ಒಂದು’ ವಿಶೇಷತೆ

ಒಂದು ಕೆಜಿ ಮಾವಿನಹಣ್ಣಿಗೆ ಬರೋಬ್ಬರಿ ₹2.75 ಲಕ್ಷ – ಈ ಹಣ್ಣಿನಲ್ಲಿ ಅಡಗಿದೆ ‘ಆ ಒಂದು’ ವಿಶೇಷತೆ

ಮಾವು ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋಲ್ಲ ಹೇಳಿ. ಮಾವಿನಹಣ್ಣಿನ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಈಗಂತು ಎಲ್ಲಿ ನೋಡಿದರು ಮಾವಿನಹಣ್ಣಿನ ರಾಶಿ ಕಾಣುತ್ತದೆ. ಈ ಹಣ್ಣು ಕೇವಲ ನಾಲಿಗೆಗೆ ರುಚಿ, ಸ್ವಾದ ನೀಡುವುದಲ್ಲ. ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಹೀಗಾಗೇ ಈ ಸೀಸನ್ ಬಂದ್ರೆ ಜನ ಹೆಚ್ಚೆಚ್ಚು ಮಾವಿನ ಹಣ್ಣು ಖರೀದಿ ಮಾಡುತ್ತಾರೆ.

ಮಾವಿನಹಣ್ಣು ಪ್ರಿಯರಿಗೆ ಕೆಜಿಗೆ 200 ರೂಪಾಯಿ ಅಂದ್ರೆನೆ ಅಬ್ಬಾ ಎಂದು ಶಾಕ್ ಆಗುತ್ತೆ. ಏನು ಕೆಜಿಗೆ ಇಷ್ಟೊಂದು ಬೆಲೆನಾ ಎಂದು ಉದ್ಘಾರ ತೆಗೆಯುತ್ತಾರೆ. ಆದರೆ ಈ ಹಣ್ಣಿನ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಮಾತ್ರವಲ್ಲ. ಎದೆಬಡಿತ ಕೂಡ ಒಮ್ಮೆ ನಿಂತಂತೆ ಭಾಸವಾಗುತ್ತೆ. ಯಾಕಂದ್ರೆ ಈ ಹಣ್ಣಿನ ಬೆಲೆ ಕೆಜಿಗೆ ಲಕ್ಷದ ಲೆಕ್ಕದಲ್ಲಿ ಮಾರಾಟವಾಗುತ್ತೆ. ಯೆಸ್ ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ ಮಾವು ಎಂದೇ ಖ್ಯಾತಿ ಪಡೆದಿರುವ ಮಿಯಾಝಾಕಿ (Miyazaki) ಮಾವನ್ನು ಪಶ್ಚಿಮಬಂಗಾಳ (WestBengal) ದಲ್ಲಿ ಕೆ.ಜಿಗೆ 2.75 ಲಕ್ಷ ರೂ. ನೀಡಿ ಖರೀದಿಸಲಾಗಿದೆ. ಸಿಲಿಗುರಿ (Siliguri) ಯ ಮಾಡೆಲ್ಲಾ ಕೇರ್ ಟೇಕರ್ ಸೆಂಟರ್ ಹಾಗೂ ಶಾಲೆಯಲ್ಲಿ ಪ್ರವಾಸೋದ್ಯಮ ಸಂಸ್ಥೆ ಸಹಯೋಗದೊಂದಿಗೆ ಮೂರು ದಿನಗಳ ಮಾವು ಉತ್ಸವ ಆಯೋಜಿಸಲಾಗಿತ್ತು. ಈ ಉತ್ಸವದಲ್ಲಿ ಮಿಯಾಝಾಕಿ ಎಂಬ ತಳಿಯ ಮಾವಿನ ಹಣ್ಣು ದಾಖಲೆ ಬೆಲೆಗೆ ಮಾರಾಟವಾಗಿದೆ. ಈ ಮಾವಿನ ಹಣ್ಣನ್ನು ‘ಸೂರ್ಯನ ಮೊಟ್ಟೆ’ ಎಂದೂ ಕರೆಯುತ್ತಾರೆ.

ಇದನ್ನೂ ಓದಿ : ಚಂದ್ರನ ಬಳಿ ಹೋಗಲು ಮಿಷನ್ ರೆಡಿ – ಮೂರನೇ ಚಂದ್ರಯಾನಕ್ಕೆ ಶ್ರೀಹರಿಕೋಟಾದಲ್ಲಿ ಸಿದ್ಧತೆ

ಪಶ್ಚಿಮ ಬಂಗಾಳದಲ್ಲಿ 262 ಬಗೆಯ ಮಾವುಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಇದರಲ್ಲಿ ಮಿಯಾಝಾಕಿಯೇ ಪ್ರಮುಖ ಆಕರ್ಷಣೆಯಾಗಿತ್ತು. ಈ ಮಾವಿನ ತಳಿ ಮಾರಾಟಕ್ಕೆ ಇಟ್ಟಿದ್ದ ಮಾಲೀಕರಿಂದ ಮಾಹಿತಿಗಳನ್ನು ಪಡೆದು ಕೆಲವರು ಖರೀದಿ ಮಾಡಿದ್ದಾರೆ.

ಸ್ಪೆಷಾಲಿಟಿ ಏನು..?

ವಿಭಿನ್ನ ಆಕಾರ ಹಾಗೂ ಬಣ್ಣದಿಂದ ಬೇರೆ ಮಾವಿಗಿಂತ ಈ ಮಾವು ಹೆಚ್ಚು ಆಕರ್ಷಿತವಾಗಿ ಕಾಣುತ್ತದೆ. ನೇರಳೆ ಬಣ್ಣದ ಈ ಹಣ್ಣನ್ನು ಜಪಾನ್‍ನ ಕ್ಯೂಶು ಪ್ರಾಂತ್ಯದ ಮಿಯಾಝಾಕಿ ನಗರದಲ್ಲಿ ಬೆಳೆಯಲಾಗುತ್ತದೆ. ನಂತರ ಈ ಹಣ್ಣನ್ನು ಜಪಾನ್‍ನೆಲ್ಲೆಡೆ ಸರಬರಾಜು ಮಾಡಲಾಗುತ್ತದೆ. ಜಪಾನ್‍ (Japan) ನಲ್ಲಿ ಇದು ಸ್ಥಳೀಯ ಹಣ್ಣಿನ ತಳಿಯಾಗಿದ್ದು, ಏಪ್ರಿಲ್‍ನಿಂದ ಆಗಸ್ಟ್ ನಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣು ಯಾಕಿಷ್ಟು ದುಬಾರಿ ಎಂಬುದರ ಕುರಿತು ಮಾಹಿತಿಯಿಲ್ಲ. ಆದರೆ ಉತ್ಪಾದನೆ ಕಡಿಮೆ ಇರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಇದನ್ನು ಆಗ್ನೇಯ ಏಷ್ಯಾ ದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ.

ಔಷಧೀಯ ಗುಣಗಳು

ರೋಗ ನಿರೋಧಕ ಅಂಶಗಳು (Antioxidant) ಈ ತಳಿಯ ಮಾವಿನಲ್ಲಿ ಅತಿ ಹೆಚ್ಚಾಗಿದೆ. ಬೆಟಾ ಕೆರೋಟಿನ್, ಫೋಲಿಕ್ ಆಸಿಡ್ ಹೆಚ್ಚಿದ್ದು, ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ. ದೃಷ್ಟಿ ಮಂದವಾಗುತ್ತಿರುವವರಿಗೂ ಇದು ಸಹಾಯಕ್ಕೆ ಬರುತ್ತದೆ ಎನ್ನಲಾಗಿದೆ.

suddiyaana