ಹೊರಗಡೆ ಬಾ.. ನಿನಗೆ ನಾನು ಒಬ್ಬನೇ ಸಾಕು! – ಧ್ರುವಂತ್‌ಗೆ ವಾರ್ನ್‌ ಮಾಡಿದ ರಘು!

ಹೊರಗಡೆ ಬಾ.. ನಿನಗೆ ನಾನು ಒಬ್ಬನೇ ಸಾಕು! – ಧ್ರುವಂತ್‌ಗೆ ವಾರ್ನ್‌ ಮಾಡಿದ ರಘು!

ಫಿನಾಲೆ ವೀಕ್‌ ಹತ್ತಿರವಾಗ್ತಿದ್ದಂತೆ ದೊಡ್ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ಏರ್ಪಟ್ಟಿದೆ. ಇದೀಗ ನಾಮಿನೇಷನ್‌ ಪ್ರಕ್ರಿಯೆ ವೇಳೆ ರಘು ಹಾಗೂ ಧ್ರುವಂತ್‌ ಕಿತ್ತಾಟ ಬೇರೆ ಲೆವೆಲ್‌ಗೆ ಹೋಗಿದೆ. ಇದೀಗ ಅಡುಗೆ ಸರಿಯಿಲ್ಲ ಎಂದ ಧ್ರುವಂತ್‌ಗೆ ರಘು ಮನೆಯಿಂದ ಹೊರಗೆ ಒಬ್ಬನೇ ಬಾ ಎಂದು ಧ್ರುವಂತ್‌ಗೆ ನೇರ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಪಾಕ್‌ ರೀತಿಯಲ್ಲೇ ಕ್ಯಾತೆ ತೆಗೆದ ಬಾಂಗ್ಲಾ – ಬಾಂಗ್ಲಾದಲ್ಲಿ IPL ಪ್ರಸಾರ ಬ್ಯಾನ್

ಭಾನುವಾರದ ಸಂಚಿಕೆಯಲ್ಲಿಯೂ ರಘು ವಿರುದ್ಧ ಕೆಲವೊಂದು ಕಾರಣಗಳನ್ನು ನೀಡಿದ ಪಂಚಿಂಗ್ ಬ್ಯಾಗ್‌ಗೆ ಗುದ್ದು ನೀಡಿದ್ದರು. ಇದೀಗ ನಾಮಿನೇಷನ್ ಪ್ರಕ್ರಿಯೆ ವೇಳೆ ರಘು ಮತ್ತು ಧ್ರುವಂತ್ ಇದೇ ವಿಚಾರಕ್ಕೆ ಜಗಳ ನಡೆದಿದೆ. ಬಿಗ್‌ಬಾಸ್‌ ನೀಡಿದ್ದ ಚೆಂಡಿಗೆ ರಘು ಫೋಟೋ ಅಂಟಿಸಿ ಧ್ರುವಂತ್ ನಾಮಿನೇಟ್ ಮಾಡಿದ್ದಾರೆ. ಧ್ರುವಂತ್ ನೀಡಿದ ಕಾರಣಗಳು ತಪ್ಪು ಎಂದು ರಘು ಹೇಳಿದ್ದಾರೆ.

ರಘು ಹೇಳಿದಂತೆ ತಮ್ಮನ್ನು ತೋರಿಸಿಕೊಳ್ಳಲ್ಲ. ಜಿಮ್ ಟ್ರೈನರ್, ಜಡ್ಜ್ ಎಂದು ಹೇಳಿಕೊಂಡು ಲೀಟರ್‌ಗಟ್ಟಲೇ ಎಣ್ಣೆ ಬಳಸಿ ಅಡುಗೆ ಮಾಡ್ತಾರೆ ಎಂದು ಧ್ರುವಂತ್ ಹೇಳುತ್ತಾರೆ. ಭಾನುವಾರವೂ ಇದೇ ಕಾರಣಗಳನ್ನು ನೀಡಿದ್ದರು. ಈ ಕಾರಣಕ್ಕೆ ಕೆಂಡಾಮಂಡಲರಾದ ರಘು, ನಿನಗೆ ನಾಚಿಕೆ ಆಗಬೇಕು. ನಾನು ತಯಾರಿಸಿ ಅಡುಗೆ ಊಟ ಮಾಡಲು ನಾಚಿಕೆ ಆಗಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಹೊರಗಡೆ ನೀನು ಎಲ್ಲಿಗೆ ಕರೀತಿಯಾ ಅಲ್ಲಿಗೆ ನಾನು ಒಬ್ಬನೇ ಬರುತ್ತೇನೆ. ನಾನು ಒಬ್ಬನೇ ನಿನಗೆ ಸಾಕು. ಬೇರೆ ಯಾರು ಬೇಡ. ಇವತ್ತು ನಾನು ನಿನಗೆ ಚಾಲೆಂಜ್ ಹಾಕ್ತಿದ್ದೀನಿ ಎಂದು ರಘು ಸವಾಲೆಸೆಯುತ್ತಾರೆ. ಈ ಸವಾಲನ್ನು ಧ್ರುವಂತ್ ಸ್ಭೀಕರಿಸ್ತಾರಾ ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

Shwetha M