ಹಸೆಮಣೆ ಏರಲು ಸಜ್ಜಾದ ಅಗ್ನಿಸಾಕ್ಷಿ ಸನ್ನಿಧಿ – ವೈಷ್ಣವಿಗೌಡ ಎಂಗೇಜ್‌ಮೆಂಟ್ ಫೋಟೋ ವೈರಲ್
ಸಿಂಪಲ್ ಆಗಿ ವಿದ್ಯಾಭರಣ್ ಜೊತೆ ವೈಷ್ಣವಿಗೌಡ ನಿಶ್ಚಿತಾರ್ಥ

ಹಸೆಮಣೆ ಏರಲು ಸಜ್ಜಾದ ಅಗ್ನಿಸಾಕ್ಷಿ ಸನ್ನಿಧಿ – ವೈಷ್ಣವಿಗೌಡ ಎಂಗೇಜ್‌ಮೆಂಟ್  ಫೋಟೋ ವೈರಲ್ಸಿಂಪಲ್ ಆಗಿ ವಿದ್ಯಾಭರಣ್ ಜೊತೆ ವೈಷ್ಣವಿಗೌಡ ನಿಶ್ಚಿತಾರ್ಥ

ಕನ್ನಡ ಕಿರುತೆರೆಯ ಖ್ಯಾತ ನಟಿ, ಅಗ್ನಿಸಾಕ್ಷಿಯ ಸನ್ನಿಧಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಅಭಿಮಾನಿಗಳ ಮನಸೆಳೆದ ಡಿಂಪಲ್ ಬ್ಯೂಟಿ ವೈಷ್ಣವಿಗೌಡ, ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರ ಎಂಗೇಜ್‌ಮೆಂಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಹುಡುಗ ವಿದ್ಯಾಭರಣ್ ಅವರ ಜೊತೆ ವೈಷ್ಣವಿ ಹಸೆಮಣೆ ಏರುತ್ತಿದ್ದಾರೆ.

ಇದನ್ನೂ ಓದಿ :  ರಶ್ಮಿಕಾ ಮಂದಣ್ಣ ‘ಕೈ’ ಸನ್ನೆಗೆ ರಿಷಬ್ ಶೆಟ್ಟಿ ‘ಕೈ’ ಸನ್ನೆಯಿಂದಲೇ ಟಾಂಗ್..!   

ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೈಷ್ಣವಿಗೌಡ ಕನ್ನಡ ಕಿರುತೆರೆ ವೀಕ್ಷಕರಿಗೆ ತುಂಬಾ ಹತ್ತಿರವಾಗಿದ್ದರು. ನಂತರ ವೈಷ್ಣವಿ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ದೊಡ್ಮನೆಯಲ್ಲೂ ಅದ್ಭುತ ಆಟವಾಡುವ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು. ಇದಾದ ನಂತರ ವೈಷ್ಣವಿ ಗೌಡ ಬಿಗ್ ಸ್ಕ್ರೀನ್‌ನಲ್ಲಿ ಬರ್ತಾರೆ ಅಂತಾ ಅಭಿಮಾನಿಗಳು ಕೂಡಾ ಕಾಯ್ತಿದ್ರು. ಇದೀಗ ವೈಷ್ಣವಿ ಗೌಡ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ನೀಡಿದ್ದಾರೆ. ವಿದ್ಯಾಭರಣ್ ಎಂಬವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವಿದ್ಯಾಭರಣ್ ಮತ್ತು ವೈಷ್ಣವಿ ಗೌಡ ಇಬ್ಬರೂ ಮಾಲೆ ಹಾಕಿಕೊಂಡು ಸಿಂಪಲ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡಿರೋ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ಸದ್ಯ ವೈರಲ್ ಆಗಿರುವ ವೈಷ್ಣವಿ ಎಂಗೇಜ್ಮೆಂಟ್ ಫೋಟೋದಲ್ಲಿ ಶಂಕರ್ ಬಿದರಿ ಕೂಡ ಇದ್ದಾರೆ.

ವೈಷ್ಣವಿ ಗೌಡ ಎಂಗೇಜ್ ಮೆಂಟ್ ಮಾಡಿಕೊಂಡಿರುವ ವಿದ್ಯಾಭರಣ್ ಈಗಾಗಲೇ ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆಗಿದ್ದ ವಿರಾಜ್ ಎನ್ನುವ ಸಿನಿಮಾದಲ್ಲಿ ವಿದ್ಯಾಭರಣ್ ನಟಿಸಿದ್ದರು. ಬೆಂಗಳೂರಿನವರಾದ ವಿದ್ಯಾ ಭರಣ್ ಬಿಎಮ್‌ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಈಗ ವೈಷ್ಣವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗಷ್ಟೇ ವೈಷ್ಣವಿಗೌಡ ಹೊಸ ಮನೆಯ ಗೃಹಪ್ರವೇಶದ ವಿಡೀಯೋ ಹಂಚಿಕೊಂಡಿದ್ದರು. ಸಧ್ಯ ಅಭಿಮಾನಿಗಳಿಂದ ಅಗ್ನಿಸಾಕ್ಷಿ ಸನ್ನಿಧಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

suddiyaana