ಸ್ಪಿನ್ ಬೌಲರ್‌ಗಳ ಮುಂದೆ ಮತ್ತೆ ಎಡವಿದ ಟೀಮ್ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು – ಗಿಲ್‌ಗೆ ಪಾಠ ಮಾಡಿದ ಗಂಭೀರ್

ಸ್ಪಿನ್ ಬೌಲರ್‌ಗಳ ಮುಂದೆ ಮತ್ತೆ ಎಡವಿದ ಟೀಮ್ ಇಂಡಿಯಾ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು – ಗಿಲ್‌ಗೆ ಪಾಠ ಮಾಡಿದ ಗಂಭೀರ್

ಟೀಮ್ ಇಂಡಿಯಾ ದಾಂಡಿಗರು ಸ್ಪಿನ್ ಬೌಲರ್‌ಗಳನ್ನು ಎದುರಿಸುವಲ್ಲಿ ಎಡವುತ್ತಿದ್ದಾರಾ. ಹೀಗೊಂದು ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ಯಾಕೆಂದರೆ, ಶ್ರೀಲಂಕಾ ಸ್ಪಿನ್ನರ್‌ಗಳ ಮುಂದೆ ಟೀಮ್ ಇಂಡಿಯಾ ಪ್ರಮುಖ ಬ್ಯಾಟರ್ ಗಳು ಶರಣಾಗಿದ್ದರು. ಇನ್ನು ಅಗ್ರ ಕ್ರಮಾಂಕದ ಬ್ಯಾಟರ್ ಗಳು ಕೂಡಾ ಎಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಕೂಡಾ ಮಾತನಾಡಿದ್ದಾರೆ.

ಇದನ್ನೂ ಓದಿ:  ಕ್ರಿಕೆಟ್ ದೇವರ ವಿಶ್ವ ದಾಖಲೆ ಮುರಿದ ರೋಹಿತ್ ಶರ್ಮಾ – ಸಚಿನ್ ತೆಂಡೂಲ್ಕರ್ ರೆಕಾರ್ಡ್ ಬ್ರೇಕ್ ಮಾಡಿದ ಹಿಟ್‌ಮ್ಯಾನ್

ಶ್ರೀಲಂಕಾ ಸ್ಪಿನ್ನರ್‌ಗಳು ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್‌ಗಳ ಆಟಕ್ಕೆ ಬ್ರೇಕ್ ಹಾಕಿರುವುದು ನೋಡಿ, ಮತ್ತೊಮ್ಮೆ ಟೀಮ್ ಇಂಡಿಯಾ ಬ್ಯಾಟರ್ ಗಳು ಸ್ಪಿನ್ ಬೌಲರ್‌ಗಳಿಗೆ ಬೇಗ ಶರಣಾಗುತ್ತಿದ್ದಾರೆ ಎಂಬುದು ಸಾಬೀತಾಗಿದೆ. ಅದರಲ್ಲೂ 20 ವರ್ಷದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ  ದಾಳಿಗೆ ನಲುಗಿದ ಟೀಂ ಇಂಡಿಯಾದ ಅಗ್ರ ಮತ್ತು ಮಧ್ಯಮ ಕ್ರಮಾಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡಿತು. ಇದು ಸಾಲದೆಂಬಂತೆ ಲಂಕಾ ತಂಡದ ಪಾರ್ಟ್ ಟೈಮ್ ಬೌಲರ್ ಚರಿತ ಅಸಲಂಕಾಗೆ ಟೀಂ ಇಂಡಿಯಾದ 4 ಆಟಗಾರರು ಬಲಿಯಾಗಿದ್ದು, ಸ್ಪಿನ್ ಬೌಲರ್‌ಗಳನ್ನು ಎದುರಿಸುವಲ್ಲಿ ಭಾರತ ಎಡವುತ್ತಿದೆ ಎನ್ನಲಾಗುತ್ತಿದೆ.

ಇದೇ ವಿಚಾರ ಮುಂದಿಟ್ಟುಕೊಂಡು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಕೂಡಾ ಮಾತನಾಡಿದ್ದಾರೆ. ಈ ವರ್ಷದ ಆರಂಭದಲ್ಲಿ ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡಮ್ ಝಂಪಾ ಮತ್ತು ಆಶ್ಟನ್ ಅಗರ್ ಅವರಂತಹ ಆಟಗಾರರ ವಿರುದ್ಧ ಭಾರತೀಯ ಬ್ಯಾಟರ್‌ಗಳು ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದ್ದರು ಎಂಬುದನ್ನು ನೆನಪಿಸಿಕೊಂಡರು. ಆ ಪಂದ್ಯದಲ್ಲಿ ಭಾರತ 270 ರನ್‌ಗಳ ಬೆನ್ನಟ್ಟುತ್ತಿತ್ತು. ಆದರೆ ಆಡಮ್ ಝಂಪಾ ಮತ್ತು ಆಶ್ಟನ್ ಅಗರ್ ದಾಳಿಗೆ ನಲುಗಿದ ಭಾರತ ಬ್ಯಾಟಿಂಗ್ ವಿಭಾಗ ಕೇವಲ 21 ರನ್‌ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಿತು. ಅದರಲ್ಲಿ ಮೂವರು ಬ್ಯಾಟರ್‌ಗಳು ಫ್ರಂಟ್ ಫೂಟ್ನಲ್ಲಿ ಚೆಂಡನ್ನು ಆಡಲು ಹೋಗಿ ವಿಕಟ್ ಒಪ್ಪಿಸಿದ್ದರು. ಅಂತಿಮವಾಗಿ ನಾವು ಆ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ. ಇನ್ನು ಈ ಪಂದ್ಯದ ವಿಚಾರಕ್ಕೆ ಬಂದರೆ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದು ಸಾಫ್ಟ್ ಡಿಸ್ಮಿಸಲ್ ಆಗಿತ್ತು. ಆದರೆ ರೋಹಿತ್ ಹಾಗೂ ಗಿಲ್ ಫ್ರಂಟ್ ಫೂಟ್ನಲ್ಲಿ ಆಡಲು ಹೋಗಿ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡ ಅದೇ ಹಳೆಯ ತಪ್ಪನ್ನು ಮಾಡುತ್ತಿದೆ. ಫ್ರಂಟ್ ಫೂಟ್ ಸಮಸ್ಯೆ ಬ್ಯಾಟ್ಸ್ಮನ್ ಆಗಿ ನಾವು ಆಗಾಗ್ಗೆ ಆ್ಯಂಗಲ್ ಬದಲಿಸಿ ಆಡಲು ಪ್ರಯತ್ನಿಸುತ್ತೇವೆ. ಆದರೆ ಚೆಂಡು ಒಮ್ಮೊಮ್ಮೆ ಹೆಚ್ಚು ಟರ್ನ್ ತೆಗೆದುಕೊಂಡರೆ ನಮಗೆ ಆ ಎಸೆತವನ್ನು ಆಡಲು ಕಷ್ಟವಾಗುತ್ತದೆ. ಆ ಸಮಯದಲ್ಲಿ ನಾವು ಡೀಪ್ ಇನ್ ದ ಕ್ರೀಸ್ನಲ್ಲಿ ನಿಂತು ಆಡಿದರೆ ಅಂತಹ ಎಸೆತಗಳನ್ನು ಎದುರಿಸುವುದು ಸುಲಭವಾಗುತ್ತದೆ. ಆದರೆ ನೀವು ಆ ಎಸೆತವನ್ನು ವೈಡ್ ಇನ್ ದ ಕ್ರೀಸ್ನಲ್ಲಿ ನಿಂತು ಆಡಲು ಮುಂದಾದರೆ ಆಗ ಕಷ್ಟಕರವಾಗುತ್ತದೆ. ಹೀಗಾಗಿ ಬ್ಯಾಟರ್‌ಗಳು ಅಂತಹ ಎಸೆತವನ್ನು ಫ್ರಂಟ್ ಫೂಟ್ನಲ್ಲಿ ಎದುರಿಸುವ ಬದಲು ಬ್ಯಾಕ್ ಫೂಟ್‌ನಿಂದ ಆಡುವ ಅವಶ್ಯಕತೆಯಿದೆ ಎಂದಿದ್ದಾರೆ. ಜೊತೆಗೆ ಗಿಲ್ ಸುಲಭವಾಗಿ ವಿಕೆಟ್ ಒಪ್ಪಿಸಿದ ಬಗ್ಗೆ ಗಂಭೀರ್ ಟೀಕಿಸಿದ್ದಾರೆ. ಚೆಂಡು ಕನಸಿನ ಎಸೆತದಂತೆ ತೋರುತ್ತಿದ್ದರೂ, ಗಿಲ್ ಅದನ್ನು ಮಿಡ್-ಆಫ್ ಕಡೆಗೆ ಅಥವಾ ಬೌಲರ್ ಕಡೆಗೆ ಆಡಬೇಕಾಗಿತ್ತು. ಆದರೆ ಗಿಲ್ ಹಾಗೆ ಮಾಡಲಿಲ್ಲ. ಗಿಲ್ ಆ ಚೆಂಡನ್ನು ಡಿಫೆಂಡ್ ಮಾಡಬಹುದಿತ್ತು. ಇದು ಆಡಲಾಗದ ಎಸೆತ ಎಂದು ನೀವು ಹೇಳಲು ಸಾಧ್ಯವಿಲ್ಲ. ಗಿಲ್ ಆ ಎಸೆತವನ್ನು ಹೇಗೆ ಎದುರಿಸಿದರು ಎಂಬುದನ್ನು ಒಮ್ಮೆ ನೋಡಿ. ಆ ಚೆಂಡನ್ನು ಎದುರಿಸುವಾಗ ಗಿಲ್ ಅವರ ಬ್ಯಾಟ್ ಮುಖ ಲೆಗ್ ಸೈಡ್ ಕಡೆಗೆ ಇತ್ತು. ಆದರೆ ಅಂತಹ ಎಸೆತಗಳ ವಿರುದ್ಧ, ನೀವು ಯಾವಾಗಲೂ ಮಿಡ್-ಆನ್ ಕಡೆಗೆ ಆಡಬೇಕು ಅಥವಾ ಬೌಲರ್ ಕಡೆಗೆ ಆಡಬೇಕು. ನೀವು ಮಿಡ್-ಆನ್ ಕಡೆಗೆ ಆ ಚೆಂಡನ್ನು ಆಡಲು ಯತ್ನಸಿದರೆ, ಆ ಚೆಂಡು ಬ್ಯಾಟ್ನ ಅಂಚಿಗೆ ತಾಗಿ ಕ್ಯಾಚ್ ಆಗುವ ಸಂಭವ ಹೆಚ್ಚಿರುತ್ತದೆ ಎಂದಿದ್ದಾರೆ.

Sulekha