ಸ್ಟಾರ್ ಸ್ಟೇಟಸ್ ಇಲ್ಲ, ಲಕ್ಸುರಿ ಲೈಫ್ ಇಲ್ಲ- ನೆಮ್ಮದಿ ಇಲ್ಲದ ದಾಸನ ಕತ್ತಲ ಬದುಕು

ಸ್ಟಾರ್ ಸ್ಟೇಟಸ್ ಇಲ್ಲ, ಲಕ್ಸುರಿ ಲೈಫ್ ಇಲ್ಲ-  ನೆಮ್ಮದಿ ಇಲ್ಲದ ದಾಸನ ಕತ್ತಲ ಬದುಕು

ಇದ್ರೆ ನೆಮ್ಮದಿಯಾಗಿರಬೇಕು.. ದರ್ಶನ್ ತನ್ನ ಹೆಂಡತಿ ವಿಜಯಲಕ್ಷ್ಮೀಗೆ ಬೈತಾ ಹೇಳಿದ ಮಾತಿದು.. ಕೆಟ್ಟಕೊಳಕ ಬೈಗುಳ ಜೊತೆ ಇದ್ರೆ ನೆಮ್ಮದಿಯಾಗಿರಬೇಕು ನಿನ್ನೆ ಕಾಟನೇ ಬೇಡ ಅಂತಾ ಬೈದಿದ್ರು.. ಆದ್ರೆ ಈ ಮಾತ್ ವೈರಲ್ ಆಗಿತ್ತು.. ಫ್ಯಾನ್ಸ್‌ ಈ ಹೆಸರಲ್ಲಿ ಟ್ರೋಲ್ ಮಾಡುತ್ತಿದ್ದರು, ಹೋಟೆಲ್‌ಗಳಿಗೆ ತಮ್ಮ ಅಂಗಡಿಗಳಿಗೆ ಇದೆ ಹೆಸರನ್ನ ಇಡುತ್ತಿದ್ದರು. ಅಷ್ಟೇ ಯಾಕೆ ಡೆವಿಲ್ ಸಿನಿಮಾದಲ್ಲಿ ಇದೇ ಮಾತನ್ನ ಇಟ್ಕೊಂಡು ಒಂದು ಹಾಡು ಕೂಡ ರಚಿಸಲಾಗಿದೆ. ಆದ್ರೆಈ ಮಾತ್ ಯಾವಾಗ ಹೇಳಿದ್ರೂ ದರ್ಶನ್ ನೆಮ್ಮದಿಯನ್ನ ಕಳೆದುಕೊಂಡಿದ್ದು,   ಜೈಲಿನಲ್ಲಿ ದಾಸ ಮುದ್ದೆ ಮುರಿಯುವಂತಾಗಿದೆ.

ನೆಮ್ಮದಿ ಇಲ್ಲದೆ ಜೈಲಲ್ಲಿ ದರ್ಶನ್ ಇದ್ದರೆ ಇದೇ ವಾರ ಡೆವಿಲ್ ಸಿನಿಮಾದ ಇದ್ರೆ ನೆಮ್ಮದಿಯಾಗಿರರ್ಬೇಕು ಸಾಂಗ್ ರಿಲೀಸ್ ಆಗುತ್ತಿದೆ. ಆಗಸ್ಟ್ 15 ರಿಲೀಸ್ ಆಗಬೇಕಿದ್ದ ಸಾಂಗ್ ದರ್ಶನ್ ಜೈಲಿಗೆ ಹೋಗಿದ್ದಕ್ಕೆ ಮುಂದೂಡಲಾಗುತ್ತು.  ಈಗ ಆಗಸ್ಟ್ 24 ರಂದು ಬೆಳಗ್ಗೆ 10:05ಕ್ಕೆ ಡೆವಿಲ್ ಸಿನಿಮಾದ ಹಾಡು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಗಣೇಶ್ ಹಬ್ಬದಲ್ಲಿ  ಈ ಸಾಂಗ್ ಡಿಜೆಯಲ್ಲಿ ಸದ್ದು ಮಾಡೋದು ಪಕ್ಕಾ, ಹೀಗಾಗಿ ಗಣೇಶ ಹಬ್ಬದ ಮುಂಚೆಯೇ ಈ ಸಾಂಗ್ ರಿಲೀಸ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಇದ್ರೆ ನೆಮ್ಮದಿಯಾಗಿರಬೇಕು ಅನ್ನೋದು ಸ್ವತಃ ದರ್ಶನ್ ಅವರ ಮಾತು.. ಹೆಂಡತಿಗೆ ಬೈಯವ ವೇಳೆ ಹುಟ್ಟಿಕೊಂಡಿರೋ ಶಬ್ದ. ಹೆಂಡತಿಗೆ ಬೈಯೋ ಆಡಿಯೋದಿಂದ  ದರ್ಶನ್ ಇಮೇಜ್ ಗೆ ಸಾಕಷ್ಟು ಹೊಡೆತ ಕೊಟ್ಟಿತ್ತು.. ಅದೇ ಪದ ಸಾಕಷ್ಟು ಟ್ರೋಲ್ ಆಗಿತ್ತು.  ನೆಗೆಟಿವ್‌ ಅನ್ನೇ  ಪಾಸಿಟಿವ್ ಆಗಿ ಬಳಸಿಕೊಂಡ ಡೆವಿಲ್ ಚಿತ್ರತಂಡ ಇದೇ ಹೆಸರಲ್ಲಿ ಹಾಡು ರಚಿದ್ದು, ರಿಲೀಸ್ ಮಾಡೋಕೆ  ಹೊರಟಿದೆ ಚಿತ್ರತಂಡ.

2023ರ ಕೊನೆಯಲ್ಲಿ ದರ್ಶನ್ ಕಾಟೇರನಾಗಿ ಬಂದು ಸ್ಯಾಂಡಲ್‌ವುಡ್‌ಗೆ ಬೂಸ್ಟ್ ನೀಡಿದ್ರು. ಡೆವಿಲ್‌ಗಾಗಿ ಫ್ಯಾನ್ಸ್‌ ಕಾಯುತ್ತಿರುವಾಗ ದರ್ಶನ್ ನೆಮ್ಮದಿ ಕಳೆದುಕೊಂಡು ಜೈಲಿನಲ್ಲಿ ಕುರುವಂತೆ ಆಗಿದೆ. ಈಗ ಡೆವಿಲ್ ಸಿನಿಮಾ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಎಲ್ಲಾ ಸಾಧ್ಯತೆ ಇದೆ. ಕಾಟೇರ ಬಂದ 1 ವರ್ಷ 10 ತಿಂಗಳ ನಂತರ ದರ್ಶನ್ ನಟನೆಯ ಡೆವಿಲ್ ಸಿನಿಮಾವೊಂದು ತೆರೆಗೆ ಬರ್ತಿದ್ದು, ಈ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಬಾಕ್ಸಾಫೀಸ್ ನ ಚಿಂದಿ ಉಡಾಯಿಸೋ ಎಲ್ಲಾ ಲಕ್ಷಣಗಳಿವೆ. ಅದರಲ್ಲೂ ಅವರ ಫ್ಯಾನ್ಸ್‌ ಮೊದಲೇ ರೊಚ್ಚಿಗೆದ್ದು ಒಂದೇ ಸಿನಿಮಾ ಹಲವು ಬಾರಿ ದರ್ಶನ್ ಕ್ರೇಜ್ ಹೆಚ್ಚಿಸೋಕೆ ಪ್ಲ್ಯಾನ್ ಮಾಡುತ್ತಿದ್ದಾರೆ.

ಡೆವಿಲ್ ನಂತರ ದರ್ಶನ್ ಕತೆಯೇನು?

ಇನ್ನು ಡೆವಿಲ್ ನಂತರ ದರ್ಶನ್ ಏನು ಮಾಡ್ತಾರೆ? ಯಾವ ಸಿನಿಮಾ ಮಾಡ್ತಾರೆ ಎಂಬುದಕ್ಕೆ ಸದ್ಯಕ್ಕಂತೂ ಉತ್ತರ ಇಲ್ಲ. ಯಾಕೆಂದ್ರೆ ದಾಸ ದರ್ಶನ್ ಮತ್ತೊಮ್ಮೆ ಬೇಲ್ ಗೆ ಅಪ್ಲೈ ಮಾಡಲು ಆರು ತಿಂಗಳು ಬೇಕು.. ಆರು ತಿಂಗಳ ನಂತರ ಬೇಲ್ ಗೆ ಅಪ್ಲೈ ಮಾಡಿದ ತಕ್ಷಣ ಬೇಲ್ ಸಿಕ್ಕೇ ಸಿಗುತ್ತೆ ಅಂತ ಹೇಳಲು ಆಗೋದಿಲ್ಲ. ಒಂದು ವೇಳೆ ಶಿಕ್ಷೆ ಪ್ರಕಟ ಆದ್ರೆ ಏನಿಲ್ಲಾ ಅಂದ್ರೂ 7 ರಿಂದ 10 ವರ್ಷವಾದ್ರೂ ಜೈಲಿನಲ್ಲಿ ಇರಬೇಕಾಗುತ್ತೆ.  ಆಮೇಲೆ ಸಿನಿಮಾ ಮಾಡ್ತಾರಾ? ಆಗ  ಸಿನಿಮಾ ಮಾಡಿದ್ರೂ ಫ್ಯಾನ್ಸ್ ಕ್ರೇಜ್ ಹೀಗೆ ಇರುತ್ತಾ? ಅಥವಾ ಡೆವಿಲ್ ಸಿನಿಮಾವೇ ದರ್ಶನ್ ಪಾಲಿಗೆ ಕೊನೆ ಸಿನಿಮಾ ಆಗುತ್ತಾ ಪ್ರಶ್ನೆಗಳು ಅವರ ಫ್ಯಾನ್ಸ್‌ ತೆಲೆಯಲ್ಲಿವೆ.

ದಾಸನಿಗೆ ಬೇಕೇ ಬೇಕಿತ್ತು 3 ಹೊತ್ತು ಚಿಕನ್

ಹೌದು ದರ್ಶನ್ ಜೈಲಿನಲ್ಲಿ ಚಿಕನ್ ಇಲ್ಲದೇ ನರಕ ಅನುಭವಿಸುತ್ತಿದ್ದಾರಂತೆ. ಡಿ-ಬಾಸ್ ದರ್ಶನ್   ಪ್ರತಿದಿನ ಕೂಡ ಚಿಕನ್ ತಿನ್ನುತ್ತಿದ್ದರಂತೆ… ಅಲ್ಲದೆ 3 ಹೊತ್ತು ಅದು ಅಂದ್ರೆ ಚಿಕನ್ ಇಲ್ಲದೇ ಇರುತ್ತಿರಲಿಲ್ಲವಂತೆ, ಚಿಕನ್ ತಿಂದು ತಮ್ಮ ಪ್ರೊಟೀನ್ ಪೂರೈಕೆಗೆ ಸಹಾಯ ಮಾಡಿಕೊಳ್ಳುತ್ತಿದ್ದರು ಅಂತ ಅಪ್ತ ನಾಗರಾಜ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ಸಂದರ್ಶನ ಹಳೆಯದ್ದು ಎನ್ನಲಾಗಿದ್ದು, ಕಾಟೇರ ಸಿನಿಮಾ ಸಕ್ಸಸ್ ಕಂಡ ಸಮಯದಲ್ಲಿ ತೆಗೆದ ವಿಡಿಯೋ ಅಂತಾ ಹೇಳಲಾಗುತ್ತಿದೆ. ಆದ್ರೆ ಈಗ ಮತ್ತೆ ವೈರಲ್ ಆಗುತ್ತಿದ್ದು, ದರ್ಶನ್ ಈಗ ಏನು ತಿನ್ನುತ್ತಿದ್ದಾರೆೆ ಅನ್ನೋ ಪ್ರಶ್ನೆಯನ್ನ ಕೆಲವರು ಮಾಡುತ್ತಿದ್ದಾರೆ.

Kishor KV