ಸೈಕೋ ಕೈಗೆ ಸಿಕ್ಕಿಬಿದ್ದ ವಿಶ್ವ!- ಜಾನು ಜೊತೆ ಗೂಬೆ ಕತೆ ಫಿನಿಶ್?

ಸೈಕೋ ಗಂಡನಿಂದ ದೂರವಾದ ಜಾನು ಈಗ ಹೊಸ ಜೀವನ ಶುರುಮಾಡಿದ್ದಾಳೆ. ಎಲ್ಲರಿಂದ ದೂರ ಉಳಿದಿರೋ ಜಾಹ್ನವಿ ವಿಶ್ವನ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡು ಇದ್ದಾಳೆ.. ಜಾಹ್ನವಿ ಸತ್ತಿದ್ದಾಳೆ ಅಂತಾ ಊರಿಗೇ ಊರೇ ನಂಬಿದ್ರೂ ಜಯಂತ್ ಮಾತ್ರ ನಂಬ್ತಿಲ್ಲ.. ಚಿನ್ನುಮರಿ ಬದುಕಿದ್ದಾಳೆ. ಆಕೆಯನ್ನ ಪತ್ತೆ ಮಾಡ್ಬೇಕು ಅಂತಾ ಇನ್ನೂ ಹುಡುಕ್ತಾ ಇದ್ದಾನೆ.. ಆದ್ರೀಗ ಸೈಕೋ ಜಯಂತ್ ಮುಂದೆ ಮಹಾ ರಹಸ್ಯವೊಂದು ಬಯಲಾಗಿದೆ. ಇದೀಗ ಗೂಬೆ ಯಾರು ಅನ್ನೋದು ಸೈಕೋಗೆ ಗೊತ್ತಾಗಿದೆ. ಇದೀಗ ವಿಶ್ವನ ಜೊತೆ ಜಾನು ಕತೆ ಕೂಡ ಮುಗಿದಂಗೆ ಲೆಕ್ಕ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟನ ದಾಂಪತ್ಯದಲ್ಲಿ ಬಿರುಗಾಳಿ! – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
ಲಕ್ಷ್ಮೀ ನಿವಾಸ ಸೀರಿಯಲ್ ಸ್ಟೋರಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೀರಿಯಲ್ ಕತೆ ನೋಡಿ ವೀಕ್ಷಕರಿಗೆ ತಲೆ ಕೆಡುವಂತೆ ಆಗಿದೆ.. ಧಾರಾವಾಹಿಯಲ್ಲಿ ಬರೋ ಸನ್ನಿವೇಶಗಳು, ಸಂದರ್ಭಗಳು ಕೆಲವೊಂದು ಬಾರಿ ಚಿತ್ರ, ವಿಚಿತ್ರವಾಗಿರುತ್ತವೆ. ಮಧ್ಯಮ ವರ್ಗದ ಕುಟುಂಬದ ಲಕ್ಷ್ಮೀ ಶ್ರೀನಿವಾಸ್ಗೆ ಒಂದು ಸ್ವಂತ ಮನೆ ಮಾಡೋ ಆಸೆ. ಆದ್ರೆ ಕೂಡು ಕುಟುಂಬದಂತೆ ಬದುಕಬೇಕಿದ್ದ ಈ ಮನೆಯವರ ಮನೆ, ಮನಸ್ಸು ಎಲ್ಲವೂ ಒಡೆದು ಚೂರಾಗಿದೆ. ಇವ್ರ ಗಂಡು ಮಕ್ಕಳಿಗೆ ಅಪ್ಪ ಅಮ್ಮ ಅಂದ್ರೆ ಹೊರೆ. ಹೀಗಾಗಿ ಅವರನ್ನ ನೋಡಿಕೊಳ್ಳೋಕೆ ಅವ್ರು ರೆಡಿಯಿಲ್ಲ. ಹೀಗಾಗಿ ಲಕ್ಷ್ಮೀ ಹಾಗೂ ಶ್ರೀನಿವಾಸ್ ಮನೆ ಬಿಟ್ಟು ಬಂದಿದ್ರು.. ಈ ವಯಸ್ಸಲ್ಲಿ ಕೂಡ ದುಡಿದು ತಿನ್ನುತ್ತಿದ್ದಾರೆ. ಇನ್ನು ಹೆಣ್ಣು ಮಕ್ಕಳ ಜೀವನದಲ್ಲೂ ಬರೀ ಟ್ರ್ಯಾಜಿಡಿ.. ಭಾವನಾಗೂ ಗಂಡನ ಮನೆಯಲ್ಲಿ ನೆಮ್ಮದಿ.. ಇತ್ತ ಜಾಹ್ನವಿ ಕೂಡ ಸೈಕೋ ಜಯಂತ್ ಕಾಟ ತಡೆದುಕೊಳ್ಳಲು ಆಗದೆ ಮನೆ ಬಿಟ್ಟು ಬಂದ್ದಿದ್ದಾಳೆ.. ಶ್ರೀಲಂಕಾದಲ್ಲಿ ಸಮುದ್ರಕ್ಕೆ ಹಾರಿದ ಜಾನು ಹೇಗೋ ಮಾಡಿ ವಿಶ್ವನ ಮನೆಯಲ್ಲಿದ್ದಾಳೆ. ಹೊಸ ಬದುಕು ಕಟ್ಟಿಕೊಂಡಿದ್ದಾಳೆ. ಇದೀಗ ಜಾಹ್ನವಿಗೆ ಮತ್ತೆ ಸೈಕೋ ಕಾಟ ಶುರುವಾಗಿದೆ. ಮತ್ತೊಂದ್ಕಡೆ ಜಯಂತ್ ಗೆ ಮಹಾ ರಹಸ್ಯ ಗೊತ್ತಾಗಿದೆ.
ಹೌದು.. ಜಯಂತ್ ಗೆ ಜಾಹ್ನವಿ ಮೇಲೆ ಅತಿಯಾದ ಪ್ರೀತಿ.. ಎಷ್ಟರ ಮಟ್ಟಿಗೆ ಅಂದ್ರೆ ಆಕೆ ಮನೆಯವರೊಂದಿಗೆ ಕೂಡ ಮಾತನಾಡುವಂತಿಲ್ಲ.. ಜಾಹ್ನವಿ ಜೊತೆ ಕ್ಲೋಸ್ ಆಗಿದ್ದ ಆಕೆಯ ಫ್ರೆಂಡ್ಸ್ಗೂ ಒಂದು ಗತಿ ಕಾಣಿಸಿದ್ದ. ಮನೆಯಲ್ಲಿ ಏನ್ ಮಾಡ್ತಾಳೆ ಅಂತಾ ನೋಡೋದಿಕ್ಕೂ ಮನೆತುಂಬಾ ಸಿಸಿಟಿವಿ ಹಾಕಿಸಿದ್ದ.. ಆದ್ರೆ ಆಕೆಯ ಫೋನ್ ಸೇವ್ ಆಗಿದ್ದ ಗೂಬೆ ಯಾರು ಅನ್ನೋದನ್ನ ಪತ್ತೆ ಮಾಡೋದಿಕ್ಕೆ ಸಾಧ್ಯ ಆಗಿರ್ಲಿಲ್ಲ.. ಆಕೆಯ ಕ್ಲಾಸ್ಮೇಟ್ಸ್ನ ಕರೆಸಿ ಗೂಬೆ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದ.. ಇದೆಲ್ಲಾ ಗೊತ್ತಾದ ಜಾನು ಒಂದೆರಡು ಬಾರಿ ಮನೆ ಬಿಟ್ಟು ಹೋಗಿದ್ಲು. ಆದ್ರೆ ಜಯಂತ್ ಮತ್ತೆ ಆಕೆಯನ್ನ ಮನೆಗೆ ಕರ್ಕೊಂಡು ಬಂದು ಟಾರ್ಚರ್ ಕೊಡೋದಿಕ್ಕೆ ಶುರುಮಾಡಿದ್ದ. ಅದಾದ್ಮೇಲೆ ಶ್ರೀಲಂಕಾಗೆ ಹೋಗಿದ್ದ ಸಂದರ್ಭ ಸಮುದ್ರಕ್ಕೆ ಹಾರಿ ಕಣ್ಮರೆಯಾಗಿದ್ಲು. ಜಯಂತ್ ಎಷ್ಟು ಹುಡುಕಿದ್ರೂ ಆಕೆ ಸಿಕ್ಕಿರ್ಲಿಲ್ಲ. ಆದ್ರೆ ಜಾನು ಚೈನ್ನೈನಲ್ಲಿ ಜೀವಂತವಾಗಿ ಸಿಕ್ಕಿದ್ಲು. ಅಲ್ಲಿಂದ ಬಂದ ಜಾನು ಸದ್ಯ ವಿಶ್ವನ ಮನೆಯಲ್ಲಿದ್ದಾಳೆ. ಇದೀಗ ವಿಶ್ವನ ಮನೆಯಲ್ಲಿ ಜಾನು ಮನೆಕೆಲಸದವಳಾಗಿ ಇದ್ದಾಳೆ. ಆದ್ರೀಗ ಜಯಂತ್ಗೆ ಗೂಬೆ ಯಾರು ಅನ್ನೋದು ಗೊತ್ತಾಗಿದೆ. ಜಾಹ್ನವಿ ಕ್ಲಾಸ್ಮೇಟ್ ಒಬ್ಬ ಜಯಂತ್ನ ಕರ್ಕೊಂಡು ವಿಶ್ವನ ಮನೆ ಹತ್ರ ಬಂದಿದ್ದಾನೆ. ಬಳಿಕ ಆತನನ್ನ ತೋರಿಸಿ, ಇವನೇ ಜಾಹ್ನವಿ ಫ್ರೆಂಡ್.. ಇವನನ್ನೇ ಜಾನು ಗೂಬೆ ಅಂತಾ ಕರಿತಾ ಇದ್ದಿದ್ದು ಅಂತ ಹೇಳಿದ್ದಾನೆ. ಇದ್ರಿಂದಾಗಿ ಜಯಂತ್ ಫುಲ್ ಶಾಕ್ ಆಗಿದ್ದಾನೆ. ಇದೀಗ ಜಯಂತ್ ಗೆ ವಿಶ್ವನೇ ಗೂಬೆ ಅಂತಾ ಗೊತ್ತಾಗ್ತಿದ್ದಂತೆ ವಿಶ್ವನ ಗ್ರಹಚಾರ ಕೆಟ್ಟಿತು ಅಂತಾ ಹೇಳ್ತಿದ್ದಾರೆ ವೀಕ್ಷಕರು.
ಇದೀಗ ಸೀರಿಯಲ್ ಫ್ಯಾನ್ಸ್ ನಾನಾ ಕಾಮೆಂಟ್ ಮಾಡ್ತಿದ್ದಾರೆ. ಇಷ್ಟು ದಿನ ಜಾನು ಜೊತೆ ಮಾತನಾಡಿದವರಿಗೆ ಜಯಂತ್ ಒಂದು ಗತಿ ಕಾಣಿಸಿದ್ದ.. ಇದೀಗ ವಿಶ್ವನ ಮನೆಯಲ್ಲೇ ಜಾನು ಇದ್ದಾಳೆ.. ಅವರಿಬ್ರು ತುಂಬಾ ಕ್ಲೋಸ್ ಅಂತಾನೂ ಗೊತ್ತಿದೆ. ಸೋ ಸೈಕೋಪತಿ ವಿಶ್ವನನ್ನ ಕೊಂದೇ ಬಿಡ್ಬೋದು ಅಂತಾ ಸೀರಿಯಲ್ ಫ್ಯಾನ್ಸ್ ಹೇಳ್ತಿದ್ದಾರೆ.

ನೋಡಿರಿ

