ಸೂರ್ಯಗೆ ಕ್ಯಾಪ್ಟನ್ಸಿ ಗ್ರಹಣ ಬಿಡಲ್ವಾ? ಚ್ಯುಯಿಂಗ್ ಗಮ್ ಜಗಿಯೋಕೆ ಲಾಯಕ್
ನಾಯಕತ್ವಕ್ಕೆ ಸೂಟ್ ಆಗಲ್ವಾ SKY?

T-20 ಸ್ಪೆಷಲಿಸ್ಟ್, 360 ಡಿಗ್ರಿ ಬ್ಯಾಟರ್, ಆದರೆ, ಈ ವರ್ಷ ಒಂದೊಂದು ಮ್ಯಾಚ್‌ನಲ್ಲೂ ಕಂಪ್ಲೀಂಟ್ ಫೇಲ್ಯೂರ್.. ಇದು ಟೀಂ ಇಂಡಿಯಾದ ಟಿ-20ಐ ತಂಡ ನಾಯಕ ಸೂರ್ಯಕುಮಾರ್ ಯಾದವ್ ಅವ್ರ ಸದ್ಯದ ಪರಿಸ್ಥಿತಿ. ಮೊದ್ಲೆಲ್ಲಾ 360 ಡಿಗ್ರಿನಲ್ಲಿ ಬ್ಯಾಟ್ ಬೀಸ್ತಿದ್ದ ಸೂರ್ಯನಿಗೆ ಈಗ ಸಂಪೂರ್ಣ ಗ್ರಹಣ ಹಿಡಿದಿದ್ಯಾ? ಅನ್ನೋ ಪ್ರಶ್ನೆ ಎದ್ದಿದೆ.
ಮಾರ್ಡ್ರೆನ್ ಕ್ರಿಕೆಟ್ನ ಫೇವರೆಟ್ ಫಾರ್ಮೆಟ್ ಅಂದ್ರೆ ಅದು ಟಿ-20ಐ. ಈ ಮಾದರಿಯಲ್ಲಿ ಜಗತ್ತಿನಲ್ಲೇ ಭಾರತ ನಂಬರ್ 1 ಟೀಂ. ಒಂದು ಸಲ ಸೋತ್ರೂ ಮತ್ತೊಂದು ಸಲ ಗ್ರೇಟ್ ಕಮ್‌ಬ್ಯಾಕ್ ಮಾಡ್ತಾರೆ ಟೀಮ್ ಇಂಡಿಯಾ ಬಾಯ್ಸ್. ಆದರೆ, ಈಗ ಪ್ರಾಬ್ಲಂ ಇರೋದು ಬೇರೆ ಯಾರದ್ದೂ ಅಲ್ಲ.. ಸೂರ್ಯಕುಮಾರ್ ಯಾದವ್ ಅವರು ಕ್ಯಾಪ್ಟನ್ ಶಿಪ್‌ಗೆ ಅನ್‌ಫಿಟ್ ಆದ್ರಾ ಅನ್ನೋ ವಿಚಾರ. ಸೂರ್ಯಕುಮಾರ್ ಯಾದವ್ ನಾಯಕನ ಪಟ್ಟಕ್ಕೇರಿದ ಮೇಲೆ 360 ಡಿಗ್ರಿ ಌಂಗಲ್ನಲ್ಲಿ ಬ್ಯಾಟ್ ಬೀಸೋದೇ ಮರೆತಿದ್ದಾರೆ. ಪಿಯರ್‌ಲೆಸ್ ಆಗಿ ಅಬ್ಬರಿಸುತ್ತಿದ್ದ ಸೂರ್ಯ ನಾಯಕನಾದ ಮೇಲೆ ಫ್ಲಾಪ್ ಶೋ ನೀಡ್ತಿದ್ದಾರೆ.
ಇನ್ನೊಂದು ವಿಚಾರ ಗೊತ್ತಾ.. ಯಾವೊಬ್ಬ ಆಟಗಾರನ ಫಾರ್ಮ್ ಒಂದೆರೆಡು ಮ್ಯಾಚ್‌ಗಳಿಂದ ಅಳೆಯೋ ಹಾಗಿಲ್ಲ. ಆದರೆ, ವರ್ಷವಿಡೀ ಬರೀ ಚ್ಯುಯಿಂಗ್ ಗಮ್ ಮಾತ್ರ ಬಾಯಲ್ಲಿ ಅಗಿಯುತ್ತಿರೋ ಸಾಧನೆ ಬಿಟ್ರೆ, ಬ್ಯಾಟ್‌ನಲ್ಲಿ ಸ್ಕೋರೇ ಬರ್ತಿಲ್ಲ. ವರ್ಷವಿಡೀ ಆಡಿರೋ ಎಲ್ಲಾ ಮ್ಯಾಚ್ಗಳಲ್ಲೂ ಸೂರ್ಯ ಅಟ್ಟರ್ ಫ್ಲಾಪ್ ಆಗಿದ್ದಾರೆ. ಟಿ-20 ವಿಶ್ವಕಪ್ಗೆ ಕೇವಲ ಎರಡೇ ಎರಡು ತಿಂಗಳು ಮಾತ್ರ ಬಾಕಿ ಉಳಿದಿದೆ. ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಫಾರ್ಮ್ ಮಾತ್ರ ಯೋಚನೇ ಮಾಡಲೇಬೇಕಿದೆ. ಈಗಲೇ ನೋಡಿ, ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯನಿಗಂತೂ ಕಂಪ್ಲೀಂಟ್ ಗ್ರಹಣನೇ ಹಿಡಿದುಕೊಂಡಿದೆ ಎಂಬ ಟೀಕೆ ವ್ಯಕ್ತವಾಗಿದೆ. ಯಾಕೆಂದರೆ, ಸೂರ್ಯನ ಬ್ಯಾಟಿಂಗ್ ಫುಲ್ ಡಲ್ ಆಗ್ಬಿಟ್ಟಿದ್ದಾರೆ. ಬ್ಯಾಡ್ ಫಾರ್ಮ್, ಲೋ ಕಾನ್ಫಿಡೆನ್ಸ್ನಿಂದ ಸೂರ್ಯ, ಬ್ಯಾಟಿಂಗ್ನಲ್ಲಿ ಮಂಕಾಗಿದ್ದಾರೆ. ಕಳೆದ ವರ್ಷವಾದರೂ ಸೂರ್ಯನ ಬ್ಯಾಟಿಂಗ್ ಸರಾಸರಿ ಅಟ್ಲೀಸ್ಟ್ 20 ದಾಟಿತ್ತು. ಈ ವರ್ಷ ಸ್ಕೈ ಬ್ಯಾಟಿಂಗ್ ಌವರೇಜ್ 15ಕ್ಕೆ ಬಂದು ನಿಂತಿದೆ.
ಕಳೆದೆರಡು ವರ್ಷಗಳಲ್ಲಿ ಸೂರ್ಯ ಬ್ಯಾಟಿಂಗ್ ಯಾವ ಮಟ್ಟಕ್ಕೆ ಕುಸಿದಿದೆ ಅಂದ್ರೆ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಈ ವರ್ಷ 15 ಇನ್ನಿಂಗ್ಸ್ಗಳನ್ನ ಆಡಿರುವ ಸ್ಕೈ 15.3ರ ಬ್ಯಾಟಿಂಗ್ ಸರಾಸರಿಯಲ್ಲಿ 184 ರನ್ ಕಲೆಹಾಕಿದ್ದಾರೆ. 3 ಬಾರಿ ಡಕ್ಔಟ್ ಆಗಿರುವ ಸೂರ್ಯ ಬೆಸ್ಟ್ ಸ್ಕೋರ್ 47 ರನ್ ನಾಟೌಟ್. ಇಲ್ಲೊಂದು ವಿಚಾರ ಗಮನಿಸಲೇಬೇಕು. ಸೂರ್ಯ ಈ ವರ್ಷ ಒಂದೇ ಒಂದು ಅರ್ಧಶತಕ ಕೂಡಾ ದಾಖಲಿಸಿಲ್ಲ. ಬ್ಯಾಟರ್ ಆಗಿ ಫೇಲ್ ಆಗಿರೋ ಸೂರ್ಯ ಕ್ಯಾಪ್ಟನ್ ಆಗಿ ಟೀಮ್ ಇಂಡಿಯಾದಲ್ಲಿದ್ದಾರೆ. ಆಟಗಾರನಾಗಿ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದ ಸೂರ್ಯ ಕ್ಯಾಪ್ಟನ್ ಆದ ಮೇಲೆ ಬ್ಯಾಟ್ ಮೂಲಕ ಸೌಂಡ್ ಮಾಡೋದನ್ನೇ ಮರೆತಿದ್ದಾರೆ. ನಾಯಕತ್ವದ ಜವಾಬ್ದಾರಿ ಹೊತ್ತ ಮೇಲೆ ಒತ್ತಡಕ್ಕೆ ಸಿಲುಕಿದ್ದಾರಾ?. ಹೀಗೊಂದು ಕಾಮನ್ ಕ್ವಶ್ಚನ್ ಎಲ್ಲರಲ್ಲೂ ಮೂಡುತ್ತೆ. ಒತ್ತಡದಲ್ಲೇ ಬ್ಯಾಟಿಂಗ್ಗಿಳಿಯೋ ಸೂರ್ಯ, ಕ್ರೀಸ್ಗೆ ಗೆಸ್ಟ್ ಅಪಿಯರೆನ್ಸ್ ಮಾಡಿ ಹೋಗ್ತಾರೆ ಅಂತಾನು ಅನ್ಸುತ್ತೆ. ಕ್ಯಾಪ್ಟನ್ ಅಂದ ಮೇಲೆ ಜವಾಬ್ದಾರಿ ಇರೋದು ನಿಜ. ಹಾಗಂತಾ ಎಲ್ಲದಕ್ಕೂ ಸ್ಟ್ರೆಸ್ ಅಂತಾ ಕೂತ್ಕೂಂಡ್ರೆ ಸ್ಥಾನಕ್ಕೂ ಮರ್ಯಾದೆ ಇರಲ್ಲ, ಆಟಕ್ಕೂ ಅರ್ಥ ಇರಲ್ಲ. ಇದು ಮುಂಬೈಕರ್‌ಗೆ ಅರ್ಥವಾಗ್ತಿಲ್ವಾ. ಹರಿಣಗಳ ಎದುರು ಸೂರ್ಯ ಇಷ್ಟು ಮಂಕಾದ್ರೆ ಮುಂದಿನ ಪಂದ್ಯಗಳ ಗತಿಯೇನು?. ಮುಂದಿನ ಪಂದ್ಯದಲ್ಲಿ ಸೂರ್ಯ ಫಿಯರ್‌ಲೆಸ್ ಬ್ಯಾಟಿಂಗ್ ಮಾಡಿದರೆ ಮಾತ್ರ ನಾಯಕತ್ವಕ್ಕೂ, ಸ್ಥಾನಕ್ಕೂ ಎರಡೂ ಒಳ್ಳೆಯದೇ,. ಇಲ್ಲದಿದ್ದರೆ, ಬರೀ ಚ್ಯುಯಿಂಗ್ ಜಗೀತಾ ಇದ್ರೆ ಮ್ಯಾಚ್ ವಿನ್ ಆಗಲು ಸಾಧ್ಯವಿಲ್ಲ. ಸೂರ್ಯನಿಗೆ ಹಿಡಿದ ಗ್ರಹಣ ಇಂತಿಷ್ಟು ಸಮಯ ಆದ್ಮೇಲೆ ಬಿಡುತ್ತೆ. ಆದ್ರೆ, ಟೀಮ್ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್‌ಗೆ ಹಿಡಿದಿರೋ ಗ್ರಹಣ ಬಿಡದೇ ಇದ್ದರೆ, ಭವಿಷ್ಯದಲ್ಲಿ ನಾಯಕನ ಸ್ಥಾನಕ್ಕೆ ಕುತ್ತು ಬರೋದಂತೂ ಸತ್ಯ.

ನೋಡಿರಿ

