ಸುತ್ತೂರು ಮಠಕ್ಕೆ ರೋಬೋ ಆನೆ ‘ಶಿವ’ ಕೊಡುಗೆ ಐಂದ್ರಿತಾ ರೇ, ದಿಗಂತ್‌ ದಂಪತಿ

ಸುತ್ತೂರು ಮಠಕ್ಕೆ ರೋಬೋ ಆನೆ ‘ಶಿವ’ ಕೊಡುಗೆ ಐಂದ್ರಿತಾ ರೇ, ದಿಗಂತ್‌ ದಂಪತಿ

ಸ್ಯಾಂಡಲ್‌ವುಡ್ ನಟ ದಿಂಗತ್‌ ಹಾಗೂ ಐಂದ್ರಿತಾ ರೇ ದಂಪತಿ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಇದೀಗ ಈ ದಂಪತಿ ನಂಜನಗೂಡು ತಾಲೂಕಿನ ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆಯೊಂದನ್ನು ಕೊಡುಗೆಯಾಗಿ ಸಮರ್ಪಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ರಾಯಲ್‌ಗೆ ಮೊದಲ ಸೋಲಿನ ಶಾಕ್! – ಗೆದ್ದು ಬೀಗಿದ ಗುಜರಾತ್​ ಟೈಟನ್ಸ್

ಇತ್ತೀಚೆಗೆ ಕೇರಳದ ದೇವಸ್ಥಾನವೊಂದಕ್ಕೆ ಕನ್ನಡತಿ ಪ್ರಿಯಾಮಣಿ ಎಲೆಕ್ಟ್ರಿಕಲ್ ಆನೆಯೊಂದನ್ನು ಕೊಡುಗೆಯಾಗಿ ನೀಡಿದ್ರು. ಇದೀಗ ಶಿವ ಎಂಬ ಎಲೆಕ್ಟ್ರಿಕಲ್ ಆನೆಯನ್ನು ಸುತ್ತೂರು ಮಠಕ್ಕೆ ಉಡುಗೊರೆಯಾಗಿ ದಿಗಂತ್ ಮತ್ತು ಐಂದ್ರಿತಾ ರೇ  ದಂಪತಿ ನೀಡಿದ್ದಾರೆ. ಸುತ್ತೂರು ಮಠಕ್ಕೆ ಭೇಟಿ ನೀಡಿ ಎಲೆಕ್ಟ್ರಿಕಲ್ ಆನೆಯನ್ನು ದೇಣಿಗೆ ನೀಡಿದ ದಿಗಂತ್ ದಂಪತಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಆನೆಯನ್ನು ಕೊಡುಗೆಯಾಗಿ ನೀಡಿದ ಬಳಿಕ ಮಾತನಾಡಿದ  ದಿಗಂತ್, ಪ್ರಾಣಿಗಳನ್ನು ಸರಪಳಿಯಲ್ಲಿ ಕಟ್ಟಿ ಹಾಕಬಾರದು. ಕಾಡಿನಲ್ಲಿ ಸ್ವತಂತ್ರವಾಗಿ ಓಡಾಡುತ್ತಿರಬೇಕು. ಸ್ವಾಭಾವಿಕವಾಗಿ ಬದುಕಲು ಬಿಡಬೇಕು. ಸುತ್ತೂರು ಶ್ರೀಮಠವು ರೋಬೋ ಆನೆಯನ್ನು ಬಳಸುತ್ತಿರುವಂತೆ ಇತರೆ ಧಾರ್ಮಿಕ ಸಂಸ್ಥೆಗಳಲ್ಲಿ ಸಾಕಿರುವ ಆನೆಗಳನ್ನು ಸಹಜವಾಗಿ ಬದುಕಲು ಬಿಟ್ಟು, ರೋಬೋ ಆನೆಗಳನ್ನು ಬಳಸಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

Shwetha M