ಸತ್ತ ವ್ಯಕ್ತಿಗೆ ಮತ್ತೆ ಜೀವ ನೀಡಿದ ರೋಡ್ ಹಂಪ್! – ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ನಡೆದಿದ್ದೇನು?

ಎಲ್ಲಾ ಕಡೆಗಳಲ್ಲೂ ರಸ್ತೆ ಸರಿಯಿಲ್ಲ.. ಒಂದ್ಕಡೆ ಗುಂಡಿ ಬಿದ್ದ ರಸ್ತೆ, ಮತ್ತೊಂದ್ಕಡೆ ರೋಡ್ ಹಂಪ್ಗಳಿಂದಾಗಿ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಲೇ ಇದೆ. ಆದ್ರೀಗ ಇಲ್ಲೊಂದು ರೋಡ್ ಹಂಪ್ನಿಂದಾಗಿ ಸತ್ತ ವ್ಯಕ್ತಿಗೆ ಮತ್ತೆ ಜೀವ ಬಂದಿದೆ.
ಇದನ್ನೂ ಓದಿ: ತಾರಕಕ್ಕೇರಿದ ಡಾಗ್ ಸತೀಶ್ – ರಜತ್ ಜಗಳ! – ಬಿಗ್ ಬಾಸ್ ಬುಜ್ಜಿ ವಿರುದ್ಧ FIR ದಾಖಲು!
ಅಚ್ಚರಿಯಾದ್ರೂ ಸತ್ಯ. ಈ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ. ಮೊಮಿನ್ ಗಲ್ಲಿಯ ನಿವಾಸಿ 65 ವರ್ಷದ ಮುಬಾರಕ್ ಅವಟಿ ಅನಾರೋಗ್ಯದ ಹಿನ್ನೆಲೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಬಳಿಕ ಆ ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಅಂತಿಮ ಸಂಸ್ಕಾರಕ್ಕಾಗಿ ಊರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಲೋಕಾಪುರ ಬಳಿ ರೋಡ್ ಹಂಪ್ಸ್ ಬರುತ್ತಿದ್ದತೆ ವಾಹನ ಅಲುಗಾಡಿದೆ. ಆಗ ಮುಬಾರಕ್ ಹಠಾತ್ ಉಸಿರಾಡಲು ಆರಂಭಿಸಿದ್ದಾರೆ. ಅಲ್ಲದೇ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಸದ್ಯ ಮುಬಾರಕ್ಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಬಾರಕ್ ಅವಟಿ ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದ ಕುಟುಂಬಸ್ಥರು ಹಠಾತ್ ಮಾತನಾಡಿದ್ದನ್ನ ಕಂಡು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ಘಟನೆ ಜಮಖಂಡಿ ಭಾಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಾವನ್ನೇ ಗೆದ್ದು ಬಂದ ಈ ವೃದ್ಧನ ಕಥೆ ಕೇಳಿ ಜನರು ಬೆರಗಾಗಿದ್ದಾರೆ.

ನೋಡಿರಿ

