ಸಂಸತ್‌ನಲ್ಲಿ ವಕ್ಫ್ ಟಾಕ್‌ ವಾರ್- ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿದ್ಯಾ?
ಕೇಂದ್ರ ಸರ್ಕಾರದ ಪಾತ್ರವೇನು?

ಸಂಸತ್‌ನಲ್ಲಿ ವಕ್ಫ್ ಟಾಕ್‌ ವಾರ್-  ಬಿಜೆಪಿ ಸುಳ್ಳು ಸುದ್ದಿ ಹಬ್ಬಿಸಿದ್ಯಾ?ಕೇಂದ್ರ ಸರ್ಕಾರದ ಪಾತ್ರವೇನು?

ಪ್ರತಿಪಕ್ಷಗಳ ಭಾರೀ ಗದ್ದಲ, ಆಕ್ಷೇಪದ ನಡುವೆಯೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಸ್ ತಿದ್ದುಪಡಿ ಮಸೂದೆ ಮಂಡಿಸಿದ್ರು.  ಲೋಕಸಭೆ ಕಲಾಪದ ಪ್ರಶೋತ್ತರ ವೇಳೆಯಲ್ಲಿ ಸಚಿವ ರಿಜಿಜು ಅವರು ವಕ್ಸ್ ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಜಗತ್ತಿನ ಅತೀ ಹೆಚ್ಚು ವಕ್ಸ್ ಆಸ್ತಿ ಭಾರತದಲ್ಲಿದೆ. ಅದರೂ ಭಾರತದ ಮುಸ್ಲಿಮರು ಬಡವರಾಗಿದ್ದಾರೆ. ಆ ನಿಟ್ಟಿನಲ್ಲಿ ಆರ್ಥಿಕವಾಗಿ ಶ್ರೀಮಂತವಾಗಿರುವ ವಕ್ಸ್ ಮಂಡಳಿಯನ್ನು ಬಡ ಮುಸ್ಲಿಮರ ಏಳಿಗೆಗಾಗಿ ಬಳಸಲಾಗುವುದು ಎಂದು ತಿಳಿಸಿದ್ದಾರೆ. ವಕ್ಸ್ ಕಾಯ್ದೆ ಸ್ವಾತಂತ್ರ್ಯಕ್ಕಿಂತಲೂ ಪೂರ್ವದಲ್ಲೇ ಚಾಲ್ತಿಯಲ್ಲಿತ್ತು ಎಂದ್ರು. ಹಾಗೇ ಕೇಂದ್ರ ಸಮತಿಯಲ್ಲಿ  ಯಾರೆಲ್ಲಾ ಇರ್ತಾರೆ ಎಂದು ರಿಜಿಜು ಹೇಳಿದ್ರು..

 

ಲೋಕಸಭೆಯಲ್ಲಿ ಮತನಾಡಿದ ಅಮಿತ್ ಶಾ ನಾವು ಕಾಂಗ್ರೆಸ್‌ನಂಥ ಸಮಿತಿಯನ್ನು ಹೊಂದಿಲ್ಲ. ನಮ್ಮ ಬಳಿ ಬುದ್ದಿ ಉಪಯೋಗಿಸುವ ಪ್ರಜಾಸತ್ತಾತ್ಮಕ ಸಮಿತಿ ಇದೆ ಎಂದು ಅವರು ಕಾಂಗ್ರೆಸ್‌ನ ಕಾಲೆಳೆದರು. ನಮ್ಮಸಮಿತಿಗಳು ಚರ್ಚೆಗಳನ್ನು ನಡೆಸುತ್ತವೆ. ಆ ಚರ್ಚೆಗಳ ಆಧಾರದಲ್ಲಿ ಕೆಲಸ ಮಾಡುತ್ತವೆ ಹಾಗೂ ಬದಲಾವಣೆಗಳನ್ನು ತರುತ್ತವೆ. ಸಮಿತಿ ಶಿಫಾರಸು ಮಾಡಿರುವ ಬದಲಾವಣೆಗಳನ್ನು ಒಪ್ಪುವುದಿಲ್ಲವೆಂದರೆ, ಆ ಸಮಿತಿಗೆ ಅರ್ಥವೇನಿದೆ?” ಎಂದು ಅಮಿತ್ ಶಾ ಪ್ರಶ್ನಿಸಿದರು.

 

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಕಾಂಗ್ರೆಸ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನ ಉಪನಾಯಕ ಗೌರವ್ ಗೊಗೋಯ್ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮಾತನಾಡಿದ್ದು, ನೀವು ಯಾವ ಸಂದೇಶವನ್ನು ನೀಡಲು ಬಯಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಮುದಾಯ, 1857 ರಲ್ಲಿ ಮಂಗಲ್ ಪಾಂಡೆ ಅವರೊಂದಿಗೆ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಸಮುದಾಯದ ಗೌರವ ಘನತೆಗಳಿಗೆ ಸರ್ಕಾರ ಮಸಿ ಬಳಿಯಬೇಕೆಂದಿದ್ದೀರಾ? ಎಂದು ಗೊಗೋಯ್ ಪ್ರಶ್ನಿಸಿದ್ದಾರೆ.  2013 ರ ತಿದ್ದುಪಡಿಯ ನಂತ್ರ ವಕ್ಫ್‌ ಮೇಲೆ ಹೈಕೋರ್ಟ್‌ಗೆ  ಕಂಟ್ರೋಲ್ ಇಲ್ಲ ಅನ್ನೋ ಸುಳ್ಳನ್ನ ಹಬ್ಬಿಸುತ್ತಿದ್ದೀರೆ.. 1997 ಪ್ರಕಾರ ವಕ್ಫ್‌ ಚುಟುವಟಿ ಮೇಲೆ ನಿಯಂತ್ರಣ ಹೊಂದಲು ಕೇಂದ್ರಕ್ಕೆ ಅವಕಾಶ ಇರುತ್ತೆ. ರಾಜ್ಯ ಸರ್ಕಾರ ತನಗೆ ಸರಿ ಕಡಂತೆ ೆಆದೇಶ ನೀಡಬಹುದು. ಆದ್ರೆ ವಕ್ಪ್ ಆದೇಶ ದುರ್ಬಲ ಇದೆ ಅಂತ ಬಿಜೆಪಿ ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ರು.

Full Gfx: ರಾತ್ರೋರಾತ್ರಿ ಇನ್ನು ವಕ್ಫ್‌ ಆಸ್ತಿ ಘೋಷಣೆ ಸಾಧ್ಯವಿಲ್ಲ!

2024 ರ ವಕ್ಫ್   ಮಸೂದೆಯೊಂದಿಗೆ ತರಲಾಗುತ್ತಿರುವ ಅತಿದೊಡ್ಡ ಬದಲಾವಣೆಯೆಂದರೆ, ವಕ್ಫ್ ಮಂಡಳಿಯು ಯಾವುದೇ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸಲು ಅವಕಾಶ ನೀಡಿದ ಸೆಕ್ಷನ್ 40 ಅನ್ನು ರದ್ದುಗೊಳಿಸುವುದು. ಬುಧವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಇದನ್ನು ವಕ್ಫ್ ಕಾಯ್ದೆಯ ಅತ್ಯಂತ ಕ್ರೂರ ಸೆಕ್ಷನ್‌ ಎಂದು ಕರೆದಿದ್ದಾರೆ. “ಕಾಯ್ದೆಯಲ್ಲಿನ ಅತ್ಯಂತ ಕ್ರೂರ ನಿಯಮವೇನೆಂದರೆ ಸೆಕ್ಷನ್ 40, ಅದರ ಅಡಿಯಲ್ಲಿ ವಕ್ಫ್ ಮಂಡಳಿಯು ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಎಂದು ರಾತ್ರೋರಾತ್ರಿ ಘೋಷಿಸಬಹುದು. ಆದರೆ ನಾವು ಆ ನಿಬಂಧನೆಯನ್ನು ತೆಗೆದುಹಾಕಿದ್ದೇವೆ” ಎಂದು ರಿಜಿಜು ಹೇಳಿದರು.

ವಕ್ಫ್ ಮಸೂದೆ 2024 ರ ಉದ್ದೇಶ

 ವಕ್ಫ್  ತಿದ್ದುಪಡಿ  ಮಸೂದೆ 2024 ರ ಉದ್ದೇಶವು ವಕ್ಫ್ ಕಾಯ್ದೆ, 1995 ರಲ್ಲಿ ಬದಲಾವಣೆಗಳನ್ನು ತಂದು, ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದು. ಈ ಮಸೂದೆಯ ಮೂಲಕ ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಆಡಳಿತವನ್ನು ಸುಧಾರಿಸಲು ಕೇಂದ್ರ ಸರ್ಕಾರ ತಿರ್ಮಾನಿಸಿದೆ.

 ಮಸೂದೆ ಮಂಡನೆಗೆ ಎನ್‌ಡಿಎಗೆ ಸ್ಪಷ್ಟ ಬಹುಮತ

ಲೋಕಸಭೆಯಲ್ಲಿ ಎನ್‌ಡಿಎ ಸ್ಪಷ್ಟ ಬಹುಮತ ಹೊಂದಿದ್ದರಿಂದ ವಿಧೇಯಕ ಅಂಗೀಕಾರವಾಗಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಬಿಜೆಪಿ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಟಿಡಿಪಿ, ಜೆಡಿಯು, ಶಿವಸೇನೆಯ ಏಕನಾಥ್ ಶಿಂಧೆ ಬಣ , ಎಲ್‌ ಜೆಪಿ, ಪವನ್ ಕಲ್ಯಾಣ ನೇತೃತ್ವದ ಜನಸೇನ, ಜೆಡಿಎಸ್, ಎನ್ ಸಿಪಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಸೂಚಿಸಿವೆ. ಇನ್ನು ಇದು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಕಿಚ್ಚನ್ನು ಕೂಡ ಹಚ್ಚ ಬಹುದು. ಈ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮೂಲಕ ತಿಳಿಸಿ. ನಮಸ್ಕಾರ..

 

 

 

Kishor KV