ಸಂಜು ಸ್ಯಾಮ್ಸನ್ ಕೆರಿಯರ್ ಮುಗಿಸಿದ ಶುಭ್ ಮನ್ ಗಿಲ್ – ಓಪನರ್ ಸ್ಲಾಟ್ ಬಿಟ್ಟಿದ್ದೇ ತಪ್ಪಾಯ್ತಾ?
T-20I ವಿಕೆಟ್ ಕೀಪರ್ ಜಿತೇಶ್ ಫಿಕ್ಸ್?

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿರೋ ಟೀಂ ಇಂಡಿಯಾ ಮೂರನೇ ಟಿ-20ಐ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಮೂರು ಬದಲಾವಣೆಗಳನ್ನ ಮಾಡಿತ್ತು. ಅದ್ರಲ್ಲಿ ನಂಬರ್ 1 ಹರ್ಷಿತ್ ರಾಣಾ ಬದಲಿಗೆ ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್ ಬದಲಿಗೆ ವಾಷಿಂಗ್ಟನ್ ಸುಂದರ್ ಌಂಡ್ ಸಂಜು ಸ್ಯಾಮ್ಸನ್ ಬದಲಿಗೆ ಜಿತೇಶ್ ಶರ್ಮಾ. ಇಲ್ಲಿ ರಾಣಾ ಮತ್ತು ಸುಂದರ್ ಡ್ರಾಪ್ ಮಾಡಿದ್ರೂ ಅವ್ರು ನೆಕ್ಸ್ಟ್ ಯಾವ ಫಾರ್ಮೆಟ್ನಲ್ಲಾದ್ರೂ ಅವಕಾಶ ಪಡ್ಕೊಳ್ತಾರೆ. ಏಕದಿನ ಮತ್ತು ಟೆಸ್ಟ್ನಲ್ಲೂ ಅವ್ರಿಗೆ ಚಾನ್ಸ್ ಇದೆ. ಬಟ್ ಇಲ್ಲಿ ಪ್ರಶ್ನೆ ಇರೋದು ಸಂಜು ಸ್ಯಾಮ್ಸನ್ ವಿಚಾರದಲ್ಲಿ. ಮೂರನೇ ಪಂದ್ಯದಲ್ಲಿ ಜಿತೇಶ್ ಶರ್ಮಾ 13 ಬಾಲ್ಗಳಲ್ಲಿ ಅಜೇಯ 22 ರನ್ ಸಿಡಿಸಿ ಸೈ ಎನಿಸಿಕೊಂಡ್ರು. ಹೀಗಾಗಿ ಮುಂದಿನ ಪಂದ್ಯಗಳಿಗೂ ಜಿತೇಶ್ರನ್ನೇ ಕಂಟಿನ್ಯೂ ಮಾಡೋ ಪ್ಲ್ಯಾನ್ನಲ್ಲಿದೆ ಬಿಸಿಸಿಐ. ಒಂದ್ವೇಳೆ ಜಿತೇಶ್ ಈ ಸ್ಲಾಟ್ನಲ್ಲಿ ಸಕ್ಸಸ್ ಆದ್ರು ಅಂದ್ರೆ ಸಂಜು ಸ್ಯಾಮ್ಸನ್ ಕರಿಯರ್ ಕ್ಲೋಸ್ ಆದಂತೆಯೇ ಲೆಕ್ಕ. ಯಾಕಂದ್ರೆ ಸಂಜು ಟಿ-20ಐನಲ್ಲಿ ಮಾತ್ರ ಆಡ್ತಿರೋದು. ಶುಭ್ಮನ್ ಗಿಲ್ ಬಂದ್ಮೇಲೆ ಸಂಜು ಕಂಪ್ಲೀಟ್ ಸೈಡ್ಲೈನ್ ಆಗಿದ್ದಾರೆ. ಸಂಜು ಕೆರಿಯರ್ಗೆ ಗಿಲ್ ಮುಳ್ಳಾದಂತಿದೆ.
ಇದನ್ನೂ ಓದಿ : ಟಾಟಾ ಬೈ ಬೈ ಹೆಡ್ & ಜೋಶ್ – AUSನಿಂದ ಡೇಂಜರಸ್ ಸ್ಟಾರ್ಸ್ ಔಟ್
ಗಿಲ್ ಬಂದ್ಮೇಲೆ ಸಂಜು ಸೈಡ್ ಲೈನ್!
ಌಕ್ಚುಲಿ ಏಷ್ಯಾಕಪ್ ಟೂರ್ನಿ ಮೂಲಕ ಶುಭ್ಮನ್ ಗಿಲ್ ಮತ್ತು ಜಿತೇಶ್ ಶರ್ಮಾ ಟಿ-20ಐ ಫಾರ್ಮೆಟ್ಗೆ ಎಂಟ್ರಿ ಕೊಟ್ಟಿದ್ರು. ಆದ್ರೆ ಅದಕ್ಕೂ ಮುಂಚೆ ಅಂದ್ರೆ 2024ರ ವಿಶ್ವಕಪ್ ಬಳಿಕ ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅಭಿಷೇಕ್ ಶರ್ಮಾ ಜೊತೆ ಓಪನರ್ ಆಗಿ ಟಿ-20ಐನಲ್ಲಿ ಒಂದೇ ವರ್ಷದಲ್ಲಿ ಮೂರು ಶತಕಗಳನ್ನ ಸಿಡಿಸಿದ್ರು. ಆದ್ರೆ ಗಿಲ್ ಬಂದ್ಮೇಲೆ ಎಲ್ಲಾ ಉಲ್ಟಾ ಪಲ್ಟಾ ಆಗಿದೆ.
ಗಿಲ್ ಮೇಲೆ ಕುರುಡು ಪ್ರೀತಿ.. ಸಂಜುಗೆ ಮೋಸ!
ಅದ್ಯಾಕೋ ಏನೋ ವೈಟ್ ಬಾಲ್ ಫಾರ್ಮೆಟ್ನಲ್ಲಿ ಶುಭ್ಮನ್ ಗಿಲ್ ಪದೇಪದೆ ಫೇಲ್ಯೂರ್ ಆಗ್ತಿದ್ರೂ ಧೃತರಾಷ್ಟ್ರ ಪ್ರೇಮದಂತೆ ಬಿಸಿಸಿಐ ಕಂಪ್ಲೀಟ್ ಆಗಿ ಕುರುಡಾಗಿದೆ. ಅಭಿಷೇಕ್ ಶರ್ಮಾ ಜೊತೆ ಶುಭ್ಮನ್ ಗಿಲ್ ಅವರನ್ನು ಓಪನಿಂಗ್ ಕಳಿಸೋ ಬಗ್ಗೆ ಮ್ಯಾನೇಜ್ಮೆಂಟ್ ಹಠಮಾರಿಯಾಗಿದೆ. ಇದ್ರಿಂದ ಸಂಜು ಸ್ಯಾಮ್ಸನ್ ತಂಡದಿಂದ ಹೊರಗುಳಿಬೇಕಾಗಿದೆ. ಗಿಲ್ ಏಷ್ಯಾಕಪ್ ಟೂರ್ನಿ ವೇಳೆ ಟಿ-20ಐ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದೇ ಮಾಡಿದ್ದು. ಅಂದಿನಿಂದ ಸಂಜು ಯಾವುದೇ ಸ್ಥಿರ ಬ್ಯಾಟಿಂಗ್ ಸ್ಥಾನವಿಲ್ಲದೆ, ಫ್ಲೋಟರ್ ಆಗಿ ಹೆಚ್ಚು ಆಡಿದ್ದಾರೆ. ಈಗ ಸ್ಯಾಮ್ಸನ್ ಫ್ಲೋಟರ್ ಆಗಿ ಆಡೋದ್ರಿಂದ ಉಳಿದ ಆರ್ಡರ್ಗಳೂ ಕೂಡ ಬ್ಯಾಲೆನ್ಸ್ ತಪ್ಪಿದೆ. ಈಗ ನೋಡಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ T20I ನಲ್ಲಿ ಸಂಜು ಸ್ಯಾಮ್ಸನ್ ಅವ್ರನ್ನ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಳಿಸಲಾಯ್ತು. ಇದು ಸೂರ್ಯಕುಮಾರ್ ಯಾದವ್ ಅವರನ್ನು 4 ನೇ ಕ್ರಮಾಂಕಕ್ಕೆ ಮತ್ತು ತಿಲಕ್ ವರ್ಮಾ ಅವರನ್ನು 5 ನೇ ಕ್ರಮಾಂಕಕ್ಕೆ ತಳ್ಳಿತು. ಇನ್ನು ಗಿಲ್ ಟಿ20ಐ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ಮೇಲೆ ಸಂಜು ಸ್ಯಾಮ್ಸನ್ 5 ಪಂದ್ಯಗಳನ್ನು ಆಡಿದ್ದಾರೆ. ನಂ.5, ನಂ.3ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅದ್ರಲ್ಲೂ ಒಂದು ಮ್ಯಾಚಲ್ಲಿ ಅಕ್ಷರ್ ಪಟೇಲ್ಗೆ ಬಡ್ತಿ ನೀಡಿದ್ದರಿಂದ ಬ್ಯಾಟಿಂಗ್ ಮಾಡುವ ಅವಕಾಶವೂ ಸಿಗಲಿಲ್ಲ ಅನ್ನೋದನ್ನ ಇಲ್ಲಿ ಗಮನಿಸಲೇಬೇಕು. ಅಲ್ದೇ ಸಂಜು ಟಿ-20ಐನಲ್ಲಿ ಸಕ್ಸಸ್ ಕಂಡಿರೋದೇ ಓಪನರ್ ಆಗಿ. ಬಟ್ ಈಗ ಗಿಲ್ ಕಾರಣಕ್ಕೆ ಯಾವ್ಯಾವ್ದೋ ಸ್ಲಾಟ್ನಲ್ಲಿ ಕಳಿಸ್ತಿದ್ದಾರೆ.
ಸಂಜು ಓಪನರ್ ಬೆಸ್ಟ್!
ಮಾನದಂಡ ಓಪನರ್ ನಾನ್-ಓಪನರ್
ಇನ್ನಿಂಗ್ಸ್ 17 26
ಓಡುತ್ತದೆ 522 483
ಸರಾಸರಿ 38.7 18.76
ಸ್ಟ್ರೈಕ್-ರೇಟ್ 178.8 111.2
100/50 3/1 0/2
ಇದೇ ಅಂಕಿಅಂಶಗಳೇ ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಹೇಗೆ ಸ್ಟ್ರಗಲ್ ಮಾಡ್ತಿದ್ದಾರೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆಯಾಗುದೆ. ಸಂಜು ಪ್ರಿಯಾರಿಟಿ ಏನಿದ್ರು ಓಪನರ್ ಸ್ಲಾಟ್. ಅಲ್ಲಿ ಎಫೆಕ್ಟಿವ್ ಆಗಿದ್ದಾರೆ. ಆದ್ರೆ ಶುಭಮನ್ ಗಿಲ್ ಅವರ ಉಪಸ್ಥಿತಿಯಿಂದಾಗಿ ಸಂಜು ವಂಚಿತರಾಗುತ್ತಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಇದೀಗ ಜಿತೇಶ್ ಶೈನ್ ಆಗ್ತಿರೋದು ಸಂಜುಗೆ ದೊಡ್ಡ ಹೊಡೆತ ಕೊಡುತ್ತೆ. ಇಲ್ಲಿ ಇನ್ನೊಂದು ವಿಚಾರ ಏನಂದ್ರೆ ಶುಭ್ಮನ್ ಗಿಲ್ರನ್ನ ಬೇಕಿದ್ರೆ ಪ್ಲೇಯಿಂಗ್ 11ನಿಂದ ಕೈಬಿಡಬಹುದು. ಓಪನರ್ ಆಗಿ ಕಣಕ್ಕಿಳಿತಿರೋ ಗಿಲ್ರನ್ನ ಡ್ರಾಪ್ ಮಾಡಿ ಸಂಜು ಸ್ಯಾಮ್ಸನ್ರನ್ನ ಓಪನಿಂಗ್ಗೆ ಕಳಿಸ್ಬೋದು. ಌಂಡ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ಜಿತೇಶ್ರನ್ನ ಆಡಿಸ್ಬೋದು. ಟೆಸ್ಟ್ ಟೀಂ ನಲ್ಲಿ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಇಬ್ರೂ ವಿಕೆಟ್ ಕೀಪರ್ ಗಳಿದ್ರೂ ಕೆಎಲ್ ರಾಹುಲ್ ಓಪನರ್ ಆಗಿ ಆಡ್ತಾರೆ. ಌಂಡ್ ರಿಷಬ್ ಮಿಡಲ್ ಆರ್ಡರ್ ನಲ್ಲಿ ಆಡ್ತಾರೆ. ಇಲ್ಲಿ ಗಿಲ್ ಡ್ರಾಪ್ ಮಾಡೋಕೆ ಮುಖ್ಯ ಕಾರಣನೂ ಇದೆ. ರೆಡ್ ಬಾಲ್ನಲ್ಲಿ ಎಫೆಕ್ಟಿವ್ ಇರೋವಷ್ಟು ವೈಟ್ಬಾಲ್ನಲ್ಲಿ ಇಲ್ಲ. ಕಳೆದ ಏಕದಿನ ಸರಣಿಯಲ್ಲೂ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಗಿಲ್ ಫಸ್ಟ್ ಮ್ಯಾಚಲ್ಲಿ 10 ರನ್, ಸೆಕೆಂಡ್ ಮ್ಯಾಚಲ್ಲಿ 9 ಹಾಗೇ ಮೂರನೇ ಪಂದ್ಯದಲ್ಲಿ 24 ರನ್ ಸ್ಕೋರ್ ಮಾಡಿದ್ರು. ಇನ್ನು ಟಿ-20ಐ ಸರಣಿಯ ಮೊದಲ ಮ್ಯಾಚಲ್ಲಿ 20 ಬಾಲಲ್ಲಿ 37 ಹೊಡೆದು ಆಡ್ತಿದ್ರು ಅಷ್ಟ್ರಲ್ಲಿ ಮಳೆ ಬಂದು ಮ್ಯಾಚ್ ವಾಶ್ ಔಟ್ ಆಗಿತ್ತು. ಎರಡನೇ ಪಂದ್ಯದಲ್ಲಿ 10 ಬಾಲ್ಗೆ ಐದು ರನ್ಸ್ ಬಂದಿತ್ತು. ಇನ್ನು ಮೂರನೇ ಪಂದ್ಯದಲ್ಲೂ 12 ಬಾಲ್ಗೆ 15 ರನ್ಸ್ ಅಷ್ಟೇ ಹೊಡ್ದಿದ್ದು. ಹೀಗಾಗಿ ಗಿಲ್ಗೆ ಬೆಂಚ್ ಕಾಯಿಸೋದು ಬೆಟರ್ ಅನ್ಸುತ್ತೆ.
ಮಿಡಲ್ ಆರ್ಡರ್ ನಲ್ಲಿ ಜಿತೇಶ್ ಬ್ಯಾಟಿಂಗ್ ಇಂಪಾರ್ಟೆಂಟ್!
ಇಲ್ಲಿ ಮಿಡಲ್ ಆರ್ಡರ್ ನಲ್ಲಿ ಸಂಜುಗಿಂತ ಜಿತೇಶ್ ಶರ್ಮಾ ತಂಡಕ್ಕೆ ಮುಖ್ಯ ಆಗ್ತಾರೆ. ಬಹಳ ಸಮಯದಿಂದ ಭಾರತ ಕೆಳ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ನ ಕೊರತೆ ಅನುಭವಿಸುತ್ತಿತ್ತು. ಹಾರ್ದಿಕ್ ಪಾಂಡ್ಯ ಪ್ರಸ್ತುತ ತಂಡದ ಭಾಗವಾಗಿಲ್ಲದ ಕಾರಣ, ಭಾರತಕ್ಕೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಪವರ್-ಹಿಟ್ಟರ್ ಅಗತ್ಯವಿದೆ. ಟಾಪ್ ಆರ್ಡರ್ ಕೈಕೊಟ್ಟಾಗ ಅಥವಾ ಫಿನಿಶಿಂಗ್ ರೋಲ್ ಅಂತಾ ಬಂದಾಗ ಬಿಗ್ ಹಿಟ್ ಬಾರಿಸೋ ಪ್ಲೇಯರ್ ಬೇಕು. ಮತ್ತು ಜಿತೇಶ್ ಶರ್ಮಾ ಅದಕ್ಕೆ ಸೂಕ್ತ ಪರಿಹಾರ. ಆರ್ಸಿಬಿ ಸ್ಟಾರ್ ಆಟಗಾರನ ಸೇರ್ಪಡೆಯೊಂದಿಗೆ, ಭಾರತ ತಂಡ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ನ ಪಡೆಯುವುದರಿಂದ ಹಲವು ಉಪಯೋಗಗಳಿವೆ. ಜಿತೇಶ್ ಸ್ಟ್ರೈಕ್ ರೇಟ್ ಜೊತೆ ಮಿಡಲ್ ಆರ್ಡರ್ ನಲ್ಲಿ ಸಂಜುಗಿಂತ ಬೆಟರ್ ಪರ್ಫಾಮೆನ್ಸ್ ನೀಡಿದ್ದಾರೆ. ಹೀಗಾಗಿ ಬಿಸಿಸಿಐ ಈಗ ಸಂಜು ಬದಲು ಜಿತೇಶ್ ರತ್ತ ನೋಡ್ತಿದೆ. ಒಂದು ವೇಳೆ ನಾಲ್ಕನೇ ಪಂದ್ಯದಲ್ಲೂ ಜಿತೇಶ್ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆದು ಬಿಗ್ ಇನ್ನಿಂಗ್ಸ್ ಬಂತಂದ್ರೆ 5ನೇ ಪಂದ್ಯಕ್ಕೂ ಕಂಟಿನ್ಯೂ ಮಾಡ್ಬೋದು. ಹೀಗೇನಾದ್ರೂ ಆಯ್ತು ಅಂದ್ರೆ ಸಂಜು ಕರಿಯರ್ ಪ್ರಶ್ನಾರ್ಥಕವಾಗಿದೆ.

ನೋಡಿರಿ

