ಶತ್ರು ದೇಶದ ಹುಡುಗಿ ಜೊತೆ ಲವ್ ಮಗು ಮುಂದೆ ಕ್ರಿಕೆಟರ್ ಮದುವೆ!
ಪ್ಯಾಟ್ ಕಮ್ಮಿನ್ಸ್ ಕಂಪ್ಲೀಟ್ ಕಹಾನಿ

ಪ್ಯಾಟ್ ಕಮ್ಮಿನ್ಸ್.. ಆಸೀಸ್‌ನ ಬಲಗೈ ಸ್ಪೀಡ್ ಬೌಲರ್ ಹಾಗೂ ಬಲಗೈ ಬ್ಯಾಟ್ಸ್‌ಮನ್. ಕಮ್ಮಿನ್ಸ್ ಮೇ 8, 1993ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹುಟ್ಟುತ್ತಾರೆ. ಸೇಂಟ್ ಪೌಲ್ಸ್ ಗ್ರಾಮಾರ್ ಶಾಲೆಯಲ್ಲಿ ಇವರ ವಿದ್ಯಾಭ್ಯಾಸ ಮುಗಿಸಿ, ಯೂನಿವರ್ಸಿಟಿ ಆಫ್ ಸಿಡ್ನಿಯಲ್ಲಿ ಇವರು ಬ್ಯುಸಿನೆಸ್ ನಲ್ಲಿ ಪದವಿ ಪಡೆದಿದ್ದಾರೆ. ಬಾಲ್ಯದಲ್ಲಿ ಇವರು ಬ್ರೆಟ್ ಲೀ ರವರನ್ನ ತಮ್ಮ ಆದರ್ಶವನ್ನಾಗಿಸಿದ್ದರು. ನಂತರ ಅವರ ಜೊತೆಯಲ್ಲೇ ಕೆಲ ದೇಶೀ ಹಾಗೂ ಅಂತರರಾಷ್ಟ್ರೀಯ ಪಂದ್ಯಗಳ್ಳನ್ನು ಆಡಿದರು..
ಅಕ್ಟೋಬರ್ 2011 ರಲ್ಲಿ ದಕ್ಷಿಣ ಆಫ್ರಿಕಾ ವಿರುಧ್ಧ ನಡೆದ ಮೊದಲ ಟಿ-20 ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಆ ಸಮಯದಲ್ಲೇ ಸೆಂಚೂರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುಧ್ಧ ನಡೆದ ಮೊದಲ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ನವೆಂಬರ್ 2011 ರಲ್ಲಿ ದಕ್ಷಿಣ ಆಫ್ರಿಕಾ ವಿರುಧ್ಧ ನಡೆದ ಎರಡನೇ ಟೆಸ್ಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು..
ಶತ್ರು ದೇಶದ ಹುಡಿಗೆ ಜೊತೆ ಲವ್
ಇನ್ನು ಪ್ಯಾಟ್ ಕಮ್ಮಿನ್ಸ್, ಪರಮ ಶತ್ರು ದೇಶದ ಹುಡುಗಿಯನ್ನು ಪ್ರೀತಿಸಿ ಮದುವೆಯಾಗದೆ ತಂದೆಯಾದ ಪ್ರೇಮಕಥೆಯೇ ಇಂಟ್ರೆಸ್ಟಿಂಗ್. ಪ್ಯಾಟ್ ಕಮಿನ್ಸ್ ಆಸ್ಟ್ರೇಲಿಯಾದ ಪರಮ ಶತ್ರು ಇಂಗ್ಲೆಂಡ್ ದೇಶದ ಹುಡುಗಿಗೆ ಹೃದಯ ನೀಡಿದರು. ಪ್ಯಾಟ್ ಕಮಿನ್ಸ್ ಅವರ ಗರ್ಲ್‌ಫ್ರೆಂಡ್ ಬೆಕಿ ಬಾಸ್ಟನ್ ಇಂಗ್ಲೆಂಡ್‌ನ ಯಾರ್ಕ್‌ಷೈರ್ ಮೂಲದವರು. ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನವಿದ್ದಂತೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕೂಡ ಪರಮ ವೈರಿಗಳು .2014ರಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿಯೇ ಕಮಿನ್ಸ್ ಬೆಕಿ ಬಾಸ್ಟನ್‌ಗೆ ತನ್ನ ಮನಸ್ಸು ನೀಡಿದ್ದರು.. ಆಮೇಲೆ ಅವರಿಬ್ಬರ ನಡುವೆ ಲವ್ ಜೋರಾಗಿ ನಡೆಯುತ್ತೆ.
ಬೆಕಿ ಮತ್ತು ಕಮಿನ್ಸ್ ನಡುವೆ ಕೇವಲ ಗಡಿಗಳ ವ್ಯತ್ಯಾಸವಲ್ಲ, ವಯಸ್ಸನಲ್ಲಿ ಕೂಡ ವ್ಯತ್ಯಾಸವಿದೆ. ಕಮ್ಮಿನ್ಸ್ ಗೆಳತಿ ಅವರಿಗಿಂತ 3 ವರ್ಷ ದೊಡ್ಡವರು. ಪ್ಯಾಟ್ ಕಮ್ಮಿನ್ಸ್ 8 ಮೇ 1993 ರಂದು ಜನಿಸಿದರೆ, ಅವರ ಹೆಂಡತಿ 17 ನವೆಂಬರ್ 1990 ರಂದು ಜನಿಸಿದರು. ವಾಸ್ತವವಾಗಿ, ಕಮಿನ್ಸ್ ಬೆಕಿ ಅವರನ್ನು ಪಿಕ್ನಿಕ್ ಸ್ಪಾಟ್‌ಗೆ ಕರೆದೊಯ್ದು ಶಾಂಪೇನ್ ಬಾಟಲಿಯನ್ನು ಹಿಡಿದು ಬಾಲಿವುಡ್ ಶೈಲಿಯಲ್ಲಿ ಮೊಣಕಾಲುಗಳ ಮೇಲೆ ಕುಳಿತು ಪ್ರಪೋಸ್ ಮಾಡಿದರು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಕೊರೊನಾ ವೈರಸ್‌ನಿಂದಾಗಿ, ಇಬ್ಬರೂ ಮದುವೆಯಾಗಲು ಸಾಧ್ಯವಾಗಲಿಲ್ಲ.. ಆದ್ರೆ ಮದುವೆಗೂ ಮುಂಚೆಯೇ ಮಗು ಆಗಿತ್ತು..
2023ರ ವಿಶ್ವಕಪ್ ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ವಿಶ್ವ ವಿಜಯಿಯನ್ನಾಗಿಸಿದ ನಾಯಕ ಪ್ಯಾಟ್ ಕಮಿನ್ಸ್ , ಈ ಬಾರಿಯ ಚಾಂಪಿಯನ್ಸ್ ಟ್ರೋಪಿಯಿಂದ ಹೊರಗುಳಿದ್ರು. ಪಾದದ ಗಾಯಕ್ಕೆ ತುತ್ತಾಗಿದ್ರಿಂದ ಆಸೀಸ್ ತಂಡದಲ್ಲಿ ಆಡಿಲ್ಲ.. ಇವರ ಬದಲು ಸ್ವೀವ್ ಸ್ಮೀತ್ ತಂಡವನ್ನ ಮುನ್ನೆಡೆಸಿದ್ದು, ಆಸೀಸ್ ಸೆಮಿ ಫೈನಲ್‌ನಲ್ಲಿ ಭಾರತದ ವಿರುದ್ಧ ಸೋತು ಹೋಯ್ತು. ಇನ್ನೂ ಕಮ್ಮಿನ್ಸ್ ಅವರ ದಾಖಲೆಗಳನ್ನ ನೋಡೋದಾದ್ರೆ..
67 ಟೆಸ್ಟ್ ಪಂದ್ಯಗಳನ್ನ ಆಡಿರೋ ಪ್ಯಾಟ್ ಕಮ್ಮಿನ್ಸ್ 13616 ಎಸೆತಗಳನ್ನ ಎಸೆದಿದ್ದು, 294 ವಿಕೆಟ್‌ಗಳನ್ನ ಪಡೆದಿದ್ದಾರೆ. 90 ಏಕದಿನ ಪಂದ್ಯದಲ್ಲಿ 143 ವಿಕೆಟ್‌ಗಳನ್ನ ಪೆಡಿದಿದ್ದಾರೆ. ಹಾಗೇ 57 ಟಿ20 ಪಂದ್ಯಗಳಲ್ಲಿ ಆಡಿದ್ದು, 66 ವಿಕೆಟ್ ಪಡೆದಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ 18 ಕೋಟಿಗೆ ಸನ್ ರೈಜರ್ಸ್ ಹೈದ್ರಾಬಾದ್ ತಂಡದಲ್ಲೇ ಉಳಿದುಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ಹೈದ್ರಾಬಾದ್ ತಂಡ ಕಳೆದ ಬಾರಿ ಫೈನಲ್ ತಲುಪಿತ್ತು. ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಸ್‌ಆರ್‌ಹೆಚ್ ಸೋಲನ್ನು ಅನುಭವಿಸಬೇಕಾಯಿತು ಪಾದದ ನೋವಿನಿಂದ ಬಳಲುತ್ತಿರೋ ಕಮ್ಮಿನ್ಸ್ ಐಪಿಎಲ್‌ನಲ್ಲಿ ಆಡುವುದಾಗಿ ಭರವಸೆ ನೀಡಿದ್ದಾರೆ.