ವೈಭವ್ನ DROP ಮಾಡುತ್ತಾ BCCI? – ರಾಜಸ್ಥಾನ್ಗೆ ಪಾಂಡ್ಯ, ಮುಂಬೈಗೆ ಜೈಸ್ವಾಲ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಭಾರತೀಯ ಕ್ರಿಕೆಟ್ನಲ್ಲಿ ಮಹತ್ವದ ಬದಲಾವಣೆ ನಡೆದಿದೆ. ಮಾಜಿ ಸ್ಪಿನ್ನರ್ ಪ್ರಜ್ಞಾನ್ ಓಜಾ ಅವರನ್ನು ಬಿಸಿಸಿಐ ಪುರುಷರ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ. ಅಜಿತ್ ಅಗರ್ಕರ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಈ ಬದಲಾವಣೆ ನಡೆದಿದೆ. ಜೊತೆಗೆ ಮಾಜಿ ಕ್ರಿಕೆಟಿಗ ರಮೇಶ್ ಪೊವಾರ್ ಕೂಡ ಆಯ್ಕೆ ಸಮಿತಿಗೆ ಸೇರ್ಪಡೆಯಾಗಿದ್ದಾರೆ. ಮುಂಬರುವ ಸರಣಿಗಳು ಮತ್ತು 2027ರ ಏಕದಿನ ವಿಶ್ವಕಪ್ಗೆ ತಂಡ ಕಟ್ಟುವಲ್ಲಿ ಹೊಸ ಸಮಿತಿಯ ನಿರ್ಧಾರಗಳು ಮಹತ್ವ ಪಡೆಯಲಿವೆ.
ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಸರ್ಫರಾಜ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹಿಮಾಚಲ ಪ್ರದೇಶ ವಿರುದ್ಧ ಅಜೇಯ 139 ರನ್ ಗಳಿಸಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹಿಂದಿನ ಪಂದ್ಯದಲ್ಲಿ ಕೇವಲ ಒಂದು ರನ್ಗೆ ಔಟಾಗಿದ್ದ ಸರ್ಫರಾಜ್, ಈ ಬಾರಿ ಶತಕದ ಮೂಲಕ ತಿರುಗೇಟು ನೀಡಿದ್ದಾರೆ. ಇದು ಅವರ ಪ್ರಥಮ ದರ್ಜೆ ಕ್ರಿಕೆಟ್ನ 18ನೇ ಶತಕವಾಗಿದೆ. ಭಾರತ ತಂಡಕ್ಕೆ ಮರಳುವ ಕನಸು ಕಾಣುತ್ತಿರುವ ಸರ್ಫರಾಜ್ಗೆ ಈ ಇನ್ನಿಂಗ್ಸ್ ದೊಡ್ಡ ಆತ್ಮವಿಶ್ವಾಸ ನೀಡಿದೆ.
ಮಿಜೋರಾಂ ಬ್ಯಾಟರ್ ಚಿನ್ಮಯ ಸುತಾರ್ ರಣಜಿ ಟ್ರೋಫಿ ಪಂದ್ಯದಲ್ಲಿ ನಾಗಾಲ್ಯಾಂಡ್ ವಿರುದ್ಧ ಅಜೇಯ 400 ರನ್ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 517 ಎಸೆತಗಳಲ್ಲಿ 46 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿರುವ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ವಿಶ್ವದ 10ನೇ ಆಟಗಾರ ಎನಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕ ಆಯುಷ್ ಬದೋನಿ ಗುಜರಾತ್ ವಿರುದ್ಧ 217 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಐಪಿಎಲ್ನಲ್ಲಿ ಗುರುತಿಸಿಕೊಂಡಿರುವ ಬದೋನಿ ಕೆಂಪು ಚೆಂಡಿನ ಕ್ರಿಕೆಟ್ನಲ್ಲೂ ತಮ್ಮ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರದರ್ಶನ ಮುಂದುವರಿದರೆ ಭವಿಷ್ಯದಲ್ಲಿ ಭಾರತ ತಂಡದ ಆಯ್ಕೆಯ ಚರ್ಚೆಯಲ್ಲೂ ಅವರ ಹೆಸರು ಕೇಳಿಬರಬಹುದು.
ರಣಜಿ ಟ್ರೋಫಿಯಲ್ಲಿ ಉತ್ತರ ಪ್ರದೇಶ ತಂಡದ ಪರ ರಿಂಕು ಸಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 118 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಫಿನಿಷರ್ ಆಗಿ ಗುರುತಿಸಿಕೊಂಡಿರುವ ರಿಂಕು, ದೀರ್ಘ ಸ್ವರೂಪದ ಆಟದಲ್ಲೂ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ. ಈ ಶತಕ ಅವರ ಆತ್ಮವಿಶ್ವಾಸ ಹೆಚ್ಚಿಸುವುದರ ಜೊತೆಗೆ ದೇಶೀಯ ಕ್ರಿಕೆಟ್ನಲ್ಲಿ ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ.
ವೈಭವ್ರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡು, ಪಂದ್ಯದ ಸಮಯದಲ್ಲಿ ಸುಮ್ಮನೆ ಬೆಂಚ್ನಲ್ಲಿ ಕೂರಿಸುವ ಬದಲು ರಣಜಿ ಟ್ರೋಫಿಯಲ್ಲಿ ಆಡಲು ಅವಕಾಶ ನೀಡುವುದು ಉತ್ತಮ. ಪಂದ್ಯಗಳನ್ನು ಆಡಿಸದೆ ಕೇವಲ ಬೆಂಚ್ಗೆ ಸೀಮಿತಗೊಳಿಸುವುದರಿಂದ ಆಟಗಾರನಿಗೆ ಯಾವುದೇ ಪ್ರಯೋಜನವಿಲ್ಲ. ವೈಭವ್ಗೆ ತಂಡದಲ್ಲಿ ಸ್ಥಾನ ಕೊಡುವುದಕ್ಕಿಂತ ಆಡಿಸಬೇಕು. ನಿಮ್ಮಿಂದ ಆಡಿಸಲು ಸಾದ್ಯವಿಲ್ಲ ಎಂದಾದರೆ, ಸೂರ್ಯವಂಶಿಯನ್ನು ತಂಡದಿಂದ ಕೈಬಿಡಿ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.
ಸಿಎಸ್ಕೆ ಹಾಗೂ ಕೆಕೆಆರ್ ತಂಡಗಳ ಟ್ರೇಡ್ ಪ್ರಕ್ರಿಯೆಗಳು ಮಂಕಾಗುತ್ತಿದ್ದಂತೆ, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇದಕ್ಕಾಗಿ ಆರ್ಆರ್ ಮ್ಯಾನೇಜ್ಮೆಂಟ್ ಈಗಾಗಲೇ ಮುಂಬೈ ಇಂಡಿಯನ್ಸ್ ಜೊತೆ ಮೊದಲ ಸುತ್ತಿನ ಮಾತುಕತೆಯನ್ನೂ ಮುಗಿಸಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ಬಿಟ್ಟುಕೊಡಲು ಮುಂಬೈ ತಂಡವು ರಾಜಸ್ಥಾನ್ನ ಸ್ಪೋಟಕ ಓಪನರ್ ಯಶಸ್ವಿ ಜೈಸ್ವಾಲ್ ಅವರನ್ನು ಕೇಳಿದೆ ಎನ್ನಲಾಗಿದೆ.
ನ್ಯೂಝಿಲೆಂಡ್ ಪ್ರವಾಸಕ್ಕೆ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟಿರುವುದಕ್ಕೆ ರವಿಚಂದ್ರನ್ ಅಶ್ವಿನ್ ಆಕ್ರೋಶ ಹೊರಹಾಕಿದ್ದಾರೆ. ಬಿಸಿಸಿಐನ ಈ ನಿರ್ಧಾರವು ಯುವ ಆಟಗಾರನ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಎಚ್ಚರಿಸಿದ್ದಾರೆ. ಗಿಲ್ ಕೊನೆಯ ಎರಡು ಪಂದ್ಯಗಳಿಗೆ ಲಭ್ಯವಿಲ್ಲದಿರುವಾಗ, ಯಶಸ್ವಿ ಜೈಸ್ವಾಲ್ ಅವರನ್ನು ಆರಂಭಿಕ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಬೇಕಿತ್ತು. ಆ ಸ್ಥಾನವನ್ನು ತುಂಬಲು ಅವರಿಗೆ ಏಕೆ ಅವಕಾಶ ನೀಡಲಿಲ್ಲ? ಎಂದು ಅಶ್ವಿನ್ ನೇರವಾಗಿ ಪ್ರಶ್ನಿಸಿದ್ದಾರೆ.
ಜಾಮ್ನಗರದ ನವರಾತ್ರಿ ಸಂಭ್ರಮದಲ್ಲಿ ಎಂ.ಎಸ್. ಧೋನಿ ಪತ್ನಿ ಸಾಕ್ಷಿಗೆ ಐಸ್ಕ್ರೀಮ್ ತಿನ್ನಿಸುವಂತೆ ಮಾಡಿ, ಕೊನೆಯ ಕ್ಷಣದಲ್ಲಿ ತಾವೇ ತಿಂದು ತುಂಟಾಟ ಮಾಡಿದ್ದಾರೆ. ಎರಡು ಸಲ ಕೂಡ ತಾವೇ ತಿಂದು ಸಾಕ್ಷಿಯನ್ನು ರೇಗಿಸಿದ್ದಾರೆ. ಇದರಿಂದ ಕಿರಿಕಿರಿಗೊಂಡಂತೆ ನಟಿಸಿದ ಸಾಕ್ಷಿ, ಧೋನಿಯ ತೋಳಿಗೆ ತಮಾಷೆಯಾಗಿ ಹೊಡೆದಿದ್ದಾರೆ. ಕೊನೆಗೆ ಇಬ್ಬರೂ ನಗುತ್ತಾ ಆ ಕ್ಷಣವನ್ನು ಆನಂದಿಸಿದ್ದಾರೆ. ಧೋನಿ ಸಾಕ್ಷಿಯ ಈ ತುಂಟಾಟದ ವಿಡಿಯೋ ವೈರಲ್ ಆಗಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ 2027ರ ಸೀಸನ್ಗಾಗಿ ಮಹಿಳಾ ಕ್ರಿಕೆಟಿಗರ ಹರಾಜು ಪ್ರಕ್ರಿಯೆಗೆ ಅಧಿಕೃತ ಮುಹೂರ್ತ ನಿಗದಿಯಾಗಿದೆ. ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿ ಈ ಮೆಗಾ ಹರಾಜು ಪ್ರಕ್ರಿಯೆ ಜರುಗಲಿದ್ದು, 5 ತಂಡಗಳಿಂದ ಲಭ್ಯವಿರುವ 27 ಸ್ಥಾನಗಳು ಮಾತ್ರ ಒಟ್ಟು 146 ಆಟಗಾರ್ತಿಯರ ಅದೃಷ್ಟ ನಿರ್ಧಾರವಾಗಲಿದೆ.

ನೋಡಿರಿ

