ವಿಶ್ವಕಪ್ ಮಹಾಸಮರಕ್ಕೆ ಕ್ಷಣಗಣನೆ – ಕಾಂಗರೂ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತ ಭಾರತ

ವಿಶ್ವಕಪ್ ಮಹಾಸಮರಕ್ಕೆ ಕ್ಷಣಗಣನೆ – ಕಾಂಗರೂ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತ ಭಾರತ

ಭಾರತ VS ಆಸ್ಟ್ರೇಲಿಯಾ.. ಫೈನಲ್ ಮ್ಯಾಚ್.. ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯೋವಾಗ ಮ್ಯಾಚ್ ಸಿಕ್ಕಾಪಟ್ಟೆ ಥ್ರಿಲ್ಲಿಂಗ್​ ಆಗಿಯೇ ಇರುತ್ತದೆ. ಕಳೆದ ಒಂದೂವರೆ ತಿಂಗಳುಗಳಿಂದ ಈ ಒಂದು ಮ್ಯಾಚ್​ಗಾಗಿ ಎಲ್ಲರೂ ಕಾಯುತ್ತಿದ್ದರು. ಆ ಟೈಮ್ ದಿನ ಬಂದೇ ಬಿಟ್ಟಿದೆ. ಪುಟ್ಟ ಮಕ್ಕಳ ಕೈ ಹಿಡ್ಕೊಂಡು ಪ್ಲೇಯರ್ಸ್​ಗಳು ಗ್ರೌಂಡ್​ಗೆ ಎಂಟ್ರಿ ಕೊಡ್ತಾರೆ.. ಎರಡೂ ದೇಶಗಳ ನ್ಯಾಷನಲ್ ಆಂಥಮ್ ಆಗುತ್ತೆ.. 1 ಲಕ್ಷ 30 ಸಾವಿರ ಮಂದಿಯ ಜಯಘೋಷ ಕಿವಿಗೆ ಅಪ್ಪಳಿಸುತ್ತೆ. ಆರಂಭದಲ್ಲಿ ಜನಗಣಮನ.. ವರ್ಲ್ಡ್​​ಕಪ್​ನ ಕೊನೆಯ ಮ್ಯಾಚ್.. ಕೋಟಿ ಕೋಟಿ ಭಾರತೀಯರ ಎದೆ ಬಡಿತ ಏರಿಳಿಸುವ ಮ್ಯಾಚ್ ಗೆ ಕೌಂಟ್‌ಡೌನ್ ಶುರುವಾಗಿದೆ.

ಇದನ್ನೂ ಓದಿ: ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಮಧ್ಯೆ ಬ್ರೋಮ್ಯಾನ್ಸ್ – ಇವರೇ ಟೀಮ್ ಇಂಡಿಯಾದ ಬಲಾಢ್ಯ ಕಂಬಗಳು

ದೇಶವೇ ಎದುರು ನೋಡುತ್ತಿರುವ ವಿಶ್ವಕಪ್‌ ಮಹಾಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಕೋಟ್ಯಂತರ ಅಭಿಮಾನಿಗಳು ಫೈನಲ್‌ ಪಂದ್ಯ ವೀಕ್ಷಣೆ ಮಾಡಲು ಕಾದು ಕುಳಿತಿದ್ದಾರೆ. ಲೀಗ್‌ ಸುತ್ತಿನಿಂದಲೂ ಒಂದೇ ಒಂದು ಪಂದ್ಯ ಸೋಲದ ಭಾರತ ಸರಿಸಾಟಿಯೇ ಇಲ್ಲದಂತೆ ಮುನ್ನುಗ್ಗುತ್ತಿದೆ. ನವೆಂಬರ್‌ 19 ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಪಂದ್ಯ ಆರಂಭವಾಗಲಿದ್ದು, 20 ವರ್ಷಗಳ ಬಳಿಕ ಭಾರತ ಕಾಂಗರೂ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ.

ಇದುವರೆಗೆ ಏಕದಿನ ಕ್ರಿಕೆಟ್​ನಲ್ಲಿ 12 ವರ್ಲ್ಡ್​​ಕಪ್​ ಫೈನಲ್​​ ಮ್ಯಾಚ್​ಗಳಾಗಿದ್ದು, ಈ ಪೈಕಿ 4 ಬಾರಿ ಮಾತ್ರ ಚೇಸಿಂಗ್​ ಮಾಡಿದ ತಂಡ ಫೈನಲ್​​ ಮ್ಯಾಚ್​​ನ್ನ ಗೆದ್ದಿದೆ. 8 ಬಾರಿ ಫಸ್ಟ್ ಬ್ಯಾಟಿಂಗ್ ಮಾಡಿದವರೇ ವರ್ಲ್ಡ್​ಕಪ್ ಫೈನಲ್​ನ್ನ ಗೆದ್ದಿರೋದು. ಇವೆಲ್ಲದಕ್ಕೂ ಮೇನ್ ರೀಸನ್.. ಪ್ರೆಷರ್..ಪ್ರೆಷರ್.. ಚೇಸಿಂಗ್ ಮಾಡುವಾಗ ಬ್ಯಾಟ್ಸ್​ಮನ್​ಗಳ ಮೇಲೆ ಯಾವಗಲೂ ಹೆಚ್ಚಿನ ಪ್ರೆಷರ್ ಇರುತ್ತೆ ಅನ್ನೋದು ನಿಮಗೆ ಗೊತ್ತಿರೋದೆ. ಆದ್ರೆ, ಟೀಂ ಇಂಡಿಯಾ ಚೇಸಿಂಗ್​ನಲ್ಲಿ ಎಕ್ಸ್​ಪರ್ಟ್​..ನಮ್ಮಲ್ಲೊಬ್ರು ಚೇಸ್​ ಮಾಸ್ಟರ್ ಇದ್ದಾರೆ ಅನ್ನೋದೆ ಧೈರ್ಯದ ವಿಚಾರ. ಹೀಗಾಗಿ ಟಾಸ್ ಗೆದ್ರೆ ರೋಹಿತ್​ ಶರ್ಮಾ ಯಾವ ಡಿಸೀಶನ್ ತೆಗೆದುಕೊಳ್ತಾರೆ ಅನ್ನೋದೆ ಇಂಟ್ರೆಸ್ಟಿಂಗ್ ಆಗಿದೆ. ನಿಮಗೆ ನೆನಪಿರಬಹುದು.. 2003ರ ವರ್ಲ್ಡ್​​ಕಪ್​​ ಫೈನಲ್​​ನಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾದಾಗ ಸೌರವ್ ಗಂಗೂಲಿ ಟಾಸ್ ಗೆದ್ದಿದ್ರು. ಆದ್ರೆ ಫಸ್ಟ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ರು. ಆಸ್ಟ್ರೇಲಿಯಾದವರು ಬರೋಬ್ಬರಿ 357 ರನ್ ಬಾರಿಸಿದ್ರು. ಹೀಗಾಗಿ ಅಷ್ಟೊಂದು ದೊಡ್ಡ ಟಾರ್ಗೆಟ್​ನ್ನ ಚೇಸ್​ ಮಾಡೋಕೆ ಸಾಧ್ಯವಾಗದೆ ಟೀಂ ಇಂಡಿಯಾ ಸೋತಿತ್ತು. ಹೀಗಾಗಿ ಟಾಸ್​ ಗೆದ್ದಾಗ ತೆಗೆದುಕೊಳ್ಳುವ ಡಿಸೀಶನ್​ ಕೂಡ ಇಂಥಾ ಹೈಪ್ರೆಷರ್​ ಗೇಮ್​ನಲ್ಲಿ ತುಂಬಾನೆ ಇಂಪಾರ್ಟೆಂಟ್ ಆಗುತ್ತೆ.

ಇನ್ನು ಫೈನಲ್​​ ಮ್ಯಾಚ್​​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು ಅನ್ನೋ ಪ್ರಶ್ನೆಯೂ ಇಲ್ಲಿದೆ. ಮೋಸ್ಟ್ ಪ್ರೊಬಬಲಿ ಸೆಮಿಫೈನಲ್ ಟೀಂನ್ನೇ ಅಖಾಡಕ್ಕಿಳಿಸೋದು ಗ್ಯಾರಂಟಿ. ಹಾರ್ದಿಕ್ ಪಾಂಡ್ಯಾ ಇಂಜ್ಯೂರಿಯಾದಾಗಿನಿಂದಲೂ ಅದೇ ಟೀಂನ್ನ ಮೇಂಟೇನ್​ ಮಾಡ್ತಾ ಇದ್ದಾರೆ. ಫೈನಲ್​ನಲ್ಲೂ ಐವರು ಬೌಲರ್ಸ್​​ಗಳೊಂದಿಗೆ ಆಡಬಹುದು. ಆ್ಯಕ್ಚುವಲಿ ನಮ್ಮಲ್ಲಿ ಒಬ್ಬ ಬೌಲರ್​ನ ಶಾರ್ಟೇಜ್ ಇದೆ. ಆದ್ರೂ ಈವರೆಗೂ ಘಟಾನುಘಟಿ ಐವರು ಬೌಲರ್ಸ್​​ ಎಲ್ಲಾ ಟೀಂನ ಬ್ಯಾಟ್ಸ್​​ಮನ್​ಗಳನ್ನೂ ಪೆವಿಲಿಯನ್​ಗೆ ಪರೇಡ್ ಮಾಡಿಸಿದ್ದಾರೆ. ಹಾಗಿದ್ರೆ ಟೀಂ ಇಂಡಿಯಾದ ಸಂಭ್ಯಾವ್ಯ ಪ್ಲೇಯಿಂಗ್-11ನಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.

ಫೈನಲ್ PLAYING-11?

ರೋಹಿತ್ ಶರ್ಮಾ

ಶುಬ್ಮನ್ ಗಿಲ್

ವಿರಾಟ್ ಕೊಹ್ಲಿ

ಶ್ರೇಯಸ್ ಅಯ್ಯರ್

ಕೆ.ಎಲ್.ರಾಹುಲ್

ಸೂರ್ಯಕುಮಾರ್ ಯಾದವ್

ರವೀಂದ್ರ ಜಡೇಜ

ಕುಲ್​ ದೀಪ್ ಯಾದವ್

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಜಸ್ಪ್ರಿತ್ ಬುಮ್ರಾ

 

ಇದು ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್​-11.. ಒಂದು ವೇಳೆ ಇದ್ರಲ್ಲಿ ಏನಾದ್ರೂ ಬದಲಾವಣೆಗಳಾಗುವ ಚಾನ್ಸಸ್ ಇದ್ರೆ ಅದು ಸ್ಪಿನ್ನರ್ ಅಶ್ವಿನ್ ವಿಚಾರದಲ್ಲಿ ಮಾತ್ರ. ಈ ಪಿಚ್​​ ಸ್ಪಿನ್ನರ್ಸ್​ಗೆ ಒಂದಷ್ಟು ಅಡ್ವಾಂಟೇಜ್ ಆಗಿರೋದ್ರಿಂದ ಅಶ್ವಿನ್​ರನ್ನ ಆಡಿಸಿದ್ರೂ ಆಶ್ಚರ್ಯ ಇಲ್ಲ. ಲೀಗ್​ ಸ್ಟೇಜ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್​ನಲ್ಲಿ ಅಶ್ವಿನ್ ಆಡಿದ್ರು. ಯಾಕಂದ್ರೆ ಆಸ್ಟ್ರೇಲಿಯನ್ಸ್ ಯಾವಾಗಲೂ ಸ್ಪಿನ್ ಬಾಲ್​​ಗೆ ಪರದಾಡ್ತಾರೆ. ಸ್ಟೀವ್ ಸ್ಮಿತ್ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್​ ಇಬ್ಬರನ್ನ ಬಿಟ್ರೆ ಸ್ಪಿನ್​​ಗೆ ಸಮರ್ಥವಾಗಿ ಆಡೋ ಬ್ಯಾಟ್ಸ್​ಮನ್​ಗಳು ಆಸ್ಟ್ರೇಲಿಯಾ ಟೀಂನಲ್ಲಿ ಇಲ್ವೇ ಇಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್​​ನಲ್ಲೂ ಅಷ್ಟೇ, ಸ್ಪಿನ್ನರ್ಸ್​ಗಳ ದಾಳಿ ಆಸ್ಟ್ರೇಲಿಯನ್ಸ್ ಒದ್ದಾಡಿದ್ರು. ಸೌತ್ ಆಫ್ರಿಕಾ ಟೀಂನಲ್ಲಿ ಇದ್ದಿದ್ದು ಇಬ್ಬರು ಸ್ಪಿನ್ನರ್ಸ್. ಇನ್ನೊಬ್ಬ ಎಕ್ಸ್​ಟ್ರಾ ಸಿನ್ನರ್ ಇರ್ತಿದ್ರೂ ಮ್ಯಾಚ್​ ರಿಸಲ್ಟ್ ಚೇಂಜ್ ಆಗ್ತಿತ್ತೋ ಏನೊ. ಆ ಮ್ಯಾಚ್​ನಲ್ಲಿ ಸೌತ್​ ಆಫ್ರಿಕಾಗೆ ಒಬ್ಬ ಸ್ಪಿನ್ನರ್​ ಶಾರ್ಟೇಜ್ ಆಗಿದ್ದಂತೂ ಸುಳ್ಳಲ್ಲ. ಹೀಗಾಗಿ ಟೀಂ ಇಂಡಿಯಾ ಮೂವರು ಸ್ಪಿನ್ನರ್ಸ್​ಗಳ ಜೊತೆಗೆ ಆಡುತ್ತಾ? ಕುಲ್​ದೀಪ್, ರವೀಂದ್ರ ಜಡೇಜಾ ಜೊತೆ ಅಶ್ವಿನ್​ ಕೂಡ ಆಸ್ಟ್ರೇಲಿಯಾ ವಿರುದ್ಧ ಆಡ್ತಾರಾ ಅನ್ನೋದನ್ನ ನೋಡಬೇಕು.

ಇನ್ನು ಆಸ್ಟ್ರೇಲಿಯಾ ಸೆಮಿಫೈನಲ್​ನಲ್ಲಿ ಆಡಿದ ಟೀಂ ಜೊತೆಗೆ ಅಖಾಡಕ್ಕಿಳಿಯುವ ಚಾನ್ಸ್ ಹೆಚ್ಚಿದೆ. 8ನೇ ಬಾರಿಗೆ ಆಸ್ಟ್ರೇಲಿಯಾ ವರ್ಲ್ಡ್​​ಕಪ್ ಫೈನಲ್ ಆಡ್ತಿದೆ. ಹೀಗಾಗಿ 6ನೇ ಬಾರಿ ವರ್ಲ್ಡ್​ಕಪ್ ಗೆಲ್ಲೋಕೆ ಪ್ಯಾಟ್​ ಕಮಿನ್ಸ್​ ಟೀಂ ಫೈಟ್​ ಮಾಡೋದ್ರಲ್ಲಿ ಯಾವುದೇ ಟೌಟ್ ಇಲ್ಲ. ಡೇವಿಡ್ ವಾರ್ನರ್​, ಸ್ಟೀವ್ ಸ್ಮಿತ್ ಮತ್ತು ಗ್ಲೇನ್ ಮ್ಯಾಕ್ಸ್​ವೆಲ್ ಈ ಮೂವರ ಮೇಲೆ ಆಸ್ಟ್ರೇಲಿಯಾ ಬ್ಯಾಟಿಂಗ್​ ಹೆಚ್ಚು ಡಿಪೆಂಡ್ ಆಗಿದೆ. ಹೀಗಾಗಿ ಮೂವರನ್ನ ಆದಷ್ಟು ಬೇಗ ಪೆವಿಲಿಯನ್​ ಕಳುಹಿಸುವ ಟಾಸ್ಕ್ ನಮ್ಮ ಬೌಲರ್ಸ್ ಮುಂದಿದೆ.

Sulekha