ರೋ & ಗಿಲ್ ಔಟ್.. KL ಓಪನರ್! – ಆಸಿಸ್ ಸರಣಿಗೆ ಶಮಿ ಕಮ್ ಬ್ಯಾಕ್
ಯಾರಿಗೆ WTC ಫೈನಲ್ ಟಿಕೆಟ್?
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದ್ದು, ಮೊದಲ ಪಂದ್ಯದ ಆರಂಭಕ್ಕೂ ಮುನ್ನವೇ ಬಿಗ್ ಟ್ವಿಸ್ಟ್ ಸಿಕ್ಕಿದೆ. ಟೀಂ ಇಂಡಿಯಾದ ಇಬ್ಬರು ಸ್ಟಾರ್ ಓಪನರ್ಸ್ ಹೊರಬಿದ್ದಿದ್ದು, ಪ್ಲೇಯಿಂಗ್ 11ನಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ. ಅಷ್ಟಕ್ಕೂ ಮೊದಲ ಪಂದ್ಯದಿಂದ ಹೊರಬಿದ್ದಿದ್ಯಾರು? ಓಪನಿಂಗ್ನಲ್ಲಿ ಯಾರಾಡ್ತಾರೆ? ಸೆಕೆಂಡ್ ಮ್ಯಾಚ್ಗೆ ಮೊಹಮ್ಮದ್ ಶಮಿ ಕಮ್ ಬ್ಯಾಕ್ ಫಿಕ್ಸ್ ಆಯ್ತಾ? ಕೆಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡ್ರಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: BBK ಹಂಸಾ ವಿರುದ್ಧ ಕೇಸ್ – ಪುಟ್ಟಕ್ಕನ ಮಕ್ಕಳು ತಂಡಕ್ಕೆ ಮೋಸ?
ನವೆಂಬರ್ 22 ರಿಂದ ಪರ್ತ್‌ನಲ್ಲಿ ಭಾರತ ವರ್ಸಸ್ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ಆರಂಭವಾಗಲಿದೆ. ಈಗಾಗಲೇ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಗೆ ತೆರಳಿದ್ದು, ಭರ್ಜರಿ ಪ್ರಾಕ್ಟೀಸ್ನಲ್ಲಿ ಬ್ಯುಸಿಯಾಗಿದ್ದಾರೆ. ಆಯ್ಕೆ ಸಮಿತಿ ಸೆಲೆಕ್ಟ್ ಮಾಡಿದ್ದ ಆಟಗಾರರ ಪೈಕಿ ರೋಹಿತ್ ಶರ್ಮಾ ಒಬ್ಬರನ್ನ ಹೊರತುಪಡಿಸಿದ್ರೆ ಉಳಿದವ್ರೆಲ್ಲಾ ಆಸ್ಟ್ರೇಲಿಯಾದಲ್ಲಿದ್ದಾರೆ. ರೋಹಿತ್ ಶರ್ಮಾ ತಮ್ಮ ಎರಡನೇ ಮಗುವಿನ ಖುಷಿಯಲ್ಲಿದ್ದು, ಫಸ್ಟ್ ಮ್ಯಾಚ್ನಿಂದ ಬ್ರೇಕ್ ತಗೊಂಡಿದ್ದಾರೆ. ಹಾಗೇ ಸೆಕೆಂಡ್ ಮ್ಯಾಚ್ಗೆ ರೋಹಿತ್ ಕಮ್ಬ್ಯಾಕ್ ಮಾಡಲಿದ್ದಾರೆ. ರೋಹಿತ್ ಜೊತೆಗೆ ಮಾರಕ ಬೌಲರ್ ಮೊಹಮ್ಮದ್ ಶಮಿ ಕೂಡ ಟೀಂ ಇಂಡಿಯಾಗೆ ಎಂಟ್ರಿ ಕೊಡೋದು ಕನ್ಫರ್ಮ್ ಆಗಿದೆ.
ರೋಹಿತ್ & ಗಿಲ್ ಔಟ್.. ಜೈಸ್ವಾಲ್ ಜೊತೆ ಓಪನರ್ ಯಾರು?
ಮೊದಲ ಪಂದ್ಯದಿಂದ ರೋಹಿತ್ ಶರ್ಮಾ ಹೊರಗುಳಿದ್ರೆ ಮತ್ತೊಂದ್ಕಡೆ ಶುಭ್ಮನ್ ಗಿಲ್ ಕೂಡ ಹೆಬ್ಬೆರಳಿನ ಗಾಯದಿಂದಾಗಿ ಪ್ಲೇಯಿಂಗ್ 11ನಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವುದು ಪಕ್ಕಾ. ಕಳೆದ ಒಂದು ವರ್ಷದಿಂದ ಭಾರತ ತಂಡದ ಖಾಯಂ ಓಪನರ್ ಆಗಿರುವ ಜೈಸ್ವಾಲ್ ಭರ್ಜರಿ ಪ್ರದರ್ಶನದೊಂದಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದಲ್ಲೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ಬಟ್ ಮತ್ತೊಂದು ಕಡೆ ಕಣಕ್ಕಿಳಿಯುವವರು ಯಾರು ಎಂಬುದೇ ಪ್ರಶ್ನೆ. ಹೆಬ್ಬೆರಳಿನ ಗಾಯದ ಕಾರಣ ಗಿಲ್ ಕೂಡ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಆಸಿಸ್ ನೆಲದಲ್ಲೂ ರಾಹುಲ್ ಮೇಲೆ ನಡೆಯುತ್ತಾ ಎಕ್ಸ್ ಪೆರಿಮೆಂಟ್?
ಈಗಾಗ್ಲೇ ಟೀಂ ಇಂಡಿಯಾದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಎಕ್ಸ್ಪೆರಿಮೆಂಟ್ ಹ್ಯಾಂಡ್ನಂತಾಗಿದ್ದಾರೆ. ಫಸ್ಟ್ ಸ್ಲಾಟ್ನಿಂದ ಹಿಡಿದು 6,7ನೇ ಕ್ರಮಾಂಕದವರೆಗೆ ಕಣಕ್ಕಿಳಿಸಲಾಗ್ತಿದೆ. ಒಂದೊಂದು ಮ್ಯಾಚ್ನಲ್ಲೂ ಒಂದೊಂದು ಸ್ಲಾಟ್ ನಿಡ್ತಿದ್ದಾರೆ. ಇದೀಗ ಆಸಿಸ್ ಸರಣಿಯಲ್ಲಿ ರೋಹಿತ್ ಶರ್ಮಾ ಆಬ್ಸೆನ್ಸ್ನಲ್ಲಿ ಓಪನರ್ ಆಗಿ ಕಣಕ್ಕಿಳಿಸೋ ಪ್ಲ್ಯಾನ್ ನಡೀಯಿದೆ. ವಿದೇಶದಲ್ಲಿ ರಾಹುಲ್ 51 ಇನಿಂಗ್ಸ್ಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದು, ಈ ವೇಳೆ ಒಟ್ಟು 1682 ರನ್ ಕಲೆಹಾಕಿದ್ದಾರೆ. ಅಲ್ಲದೆ ಆರಂಭಿಕನಾಗಿ 6 ಶತಕ ಹಾಗೂ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ಬದಲಿಗೆ ಟೀಮ್ ಇಂಡಿಯಾದ ಮೊದಲ ಆಯ್ಕೆ ಕೆಎಲ್ ರಾಹುಲ್ ಎನ್ನಬಹುದು. ಆದರೆ ಕೆಎಲ್ ರಾಹುಲ್ ಅವರನ್ನು ಮೊದಲು ಕಣಕ್ಕಿಳಿಸಿದರೆ ಮಿಡಲ್ ಆರ್ಡರ್ ಡಲ್ ಆಗುತ್ತೆ. ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಬ್ಯಾಟರ್ನ ಕೊರತೆ ಇದೆ. ಇಲ್ಲಿ ಸರ್ಫರಾಝ್ ಖಾನ್, ಧ್ರುವ್ ಜುರೆಲ್ ಇದ್ದರೂ, ಇಬ್ಬರಿಗೂ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವವಿಲ್ಲ. ಹೀಗಾಗಿ ಕೆಎಲ್ ರಾಹುಲ್ ಅವರ ಕ್ರಮಾಂಕ ಬದಲಾವಣೆಗೆ ಟೀಮ್ ಇಂಡಿಯಾ ತಲೆಬಿಸಿಮಾಡಿಕೊಂಡಿದೆ. ಹಾಗೇನಾದ್ರೂ ಕೆಎಲ್ ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಮುಂದುವರೆಸಿದರೆ, ಟೀಮ್ ಇಂಡಿಯಾ ಪರ ಅಭಿಮನ್ಯು ಈಶ್ವರನ್ ಇನಿಂಗ್ಸ್ ಆರಂಭಿಸಲಿದ್ದಾರೆ. 101 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು 27 ಶತಕ ಹಾಗೂ 29 ಅರ್ಧಶತಕಗಳೊಂದಿಗೆ ಒಟ್ಟು 7674 ರನ್ ಕಲೆಹಾಕಿದ್ದಾರೆ. ಹೀಗಾಗಿ ಯಶಸ್ವಿ ಜೈಸ್ವಾಲ್ ಜೊತೆ ಅಭಿಮನ್ಯು ಈಶ್ವರನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
2ನೇ ಪಂದ್ಯಕ್ಕೆ ಟೀಂ ಇಂಡಿಯಾ ಸೇರಿಕೊಳ್ತಾರೆ ಶಮಿ?
ಟೀಂ ಇಂಡಿಯಾದ ಬೌಲಿಂಗ್ ಬ್ರಹ್ಮಾಸ್ತ್ರ ಮೊಹಮ್ಮದ್ ಶಮಿ ವರ್ಷದ ಬಳಿಕ ಮೈದಾನಕ್ಕಿಳಿದಿದ್ದಾರೆ. ರಣಜಿ ಟೂರ್ನಿಯ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಶಮಿ ರಣಜಿ ಟ್ರೋಫಿಯಲ್ಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಅವರನ್ನು ಟೀಂ ಇಂಡಿಯಾಗೆ ಅವರನ್ನು ಸೇರಿದಸಿಕೊಳ್ಳಬೇಕೆ ಬೇಡವೇ ಎಂಬುದು ಇನ್ನೂ ಕೂಡ ನಿರ್ಧಾರವಾಗಿಲ್ಲ. ಅಂದರೆ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಕೂಡ ಹೇಳಲಾಗಿದೆ. ಮೊಹಮ್ಮದ್ ಶಮಿ 2023ರ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಗಾಯದ ಕಾರಣದಿಂದಾಗಿ ದೂರ ಉಳಿದಿದ್ದಾರೆ. ಇದೀಗ ರಣಜಿ ಟೂರ್ನಿಯಲ್ಲಿ ಸಾಲು ಸಾಲು ವಿಕೆಟ್ಗಳನ್ನ ಕಿತ್ತು ಎದುರಾಳಿ ತಂಡವನ್ನ ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಮತ್ತೆ ಭಾರತ ತಂಡಕ್ಕೆ ಕರೆಸಿಕೊಳ್ಳೋಕೆ ಬಿಸಿಸಿಐ ಆಯ್ಕೆ ಕಮಿಟಿ ಚಿಂತನೆ ನಡೆಸಿದೆ.
ಆಸಿಸ್ ಮಣಿಸಿದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಟಿಕೆಟ್!
ತವರು ನೆಲದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿರುವ ಭಾರತ ಇದೀಗ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿ ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಮ್ ಇಂಡಿಯಾಗೆ ಇದು ಕೊನೆಯ ಸರಣಿ.ಟೀಂ ಇಂಡಿಯಾ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ತಲುಪಬೇಕು ಅಂದ್ರೆ ಇಲ್ಲಿ ಗೆಲ್ಲಲೇಬೇಕಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಕನಿಷ್ಠ 4-1 ಅಂತರದಿಂದ ಗೆದ್ದರೆ ಭಾರತವು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸದೆ ಫೈನಲ್ ತಲುಪುತ್ತದೆ. ಮತ್ತೊಂದೆಡೆ, ಈ ಸರಣಿಯು ಆಸ್ಟ್ರೇಲಿಯಾಕ್ಕೂ ಕೂಡ ಅತ್ಯಂತ ಮಹತ್ವದ್ದಾಗಿದೆ. ಆಸಿಸ್ ಭಾರತ- ಶ್ರೀಲಂಕಾ ಸರಣಿಯೊಂದಿಗೆ ಏಳು ಪಂದ್ಯಗಳನ್ನಾಡಲಿದ್ದು, ಇದರಲ್ಲಿ ಐದರಲ್ಲಿ ಗೆಲ್ಲಬೇಕಾಗಿದೆ.
ಸದ್ಯ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಾರಾ ಬ್ಯಾಟರ್, ಕರ್ನಾಟಕದ ದೇವದತ್ ಪಡಿಕ್ಕಲ್‌ರನ್ನು ಮೀಸಲು ಆಟಗಾರನಾಗಿ ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಪಡಿಕ್ಕಲ್ ಈಗಾಗಲೇ ಆಸ್ಟ್ರೇಲಿಯಾದಲ್ಲಿದ್ದಾರೆ. ನವೆಂಬರ್ 22 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭ ಆಗಲಿದೆ. ಡಿಸೆಂಬರ್ 6 ರಿಂದ ಎರಡನೇ ಟೆಸ್ಟ್ ಪಂದ್ಯ. ಡಿಸೆಂಬರ್ 14 ರಿಂದ ಮೂರನೇ ಟೆಸ್ಟ್ ಪಂದ್ಯ. ಡಿಸೆಂಬರ್ 26 ರಿಂದ ನಾಲ್ಕನೇ ಟೆಸ್ಟ್ ಪಂದ್ಯ. ಜನವರಿ 3 ರಿಂದ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ. ಒಂದೂವರೆ ತಿಂಗಳ ಕಾಲ ಐದು ಪಂದ್ಯಗಳು ನಡೆಯಲಿದ್ದು, ಸರಣಿ ಗೆದ್ದವ್ರೇ ಬಾಸ್ ಆಗಲಿದ್ದಾರೆ.