ರೋಹಿತ್ & ಕೊಹ್ಲಿ ಇಲ್ಲದ ಏಷ್ಯಾಕಪ್ ಡಲ್ – ಬ್ಯಾಟಿಂಗ್ ಪಂಟರ್ಸ್ ಇಲ್ಲದ್ದೇ ಮೈನಸ್
ಫ್ಯಾನ್ಸ್ ಗೆ ಕಾಡ್ತಿರೋ ಆತಂಕ ನಿಜವಾಗುತ್ತಾ?

ರೋಹಿತ್ & ಕೊಹ್ಲಿ ಇಲ್ಲದ ಏಷ್ಯಾಕಪ್ ಡಲ್ – ಬ್ಯಾಟಿಂಗ್ ಪಂಟರ್ಸ್ ಇಲ್ಲದ್ದೇ ಮೈನಸ್ಫ್ಯಾನ್ಸ್ ಗೆ ಕಾಡ್ತಿರೋ ಆತಂಕ ನಿಜವಾಗುತ್ತಾ?

2023ರ ಏಷ್ಯಾಕಪ್ ನಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತ ಚಾಂಪಿಯನ್ ಆಗಿತ್ತು. ಆದ್ರೆ ಈ ವಿಜೇತ ತಂಡದ ಹಲವು ಆಟಗಾರರು ಈ ಬಾರಿಯ ಏಷ್ಯಾಕಪ್ ಪಂದ್ಯಾವಳಿಯನ್ನು ಮಿಸ್ ಮಾಡಿಕೊಳ್ತಾರೆ. ಅದ್ರಲ್ಲಿ ನಂಬರ್ 1 ರೋಹಿತ್ ಶರ್ಮಾ. ಟಿ-20ಐಗೆ ವಿದಾಯ ಹೇಳಿರೋದ್ರಿಂದ ರೋಹಿತ್ ಈ ಬಾರಿ ಏಷ್ಯಾಕಪ್ ಆಡಲ್ಲ. ಹಾಗೇ ನಂಬರ್ 2 ವಿರಾಟ್ ಕೊಹ್ಲಿ. 2023 ರ ಏಷ್ಯಾ ಕಪ್ ವಿಜೇತ ತಂಡದ ಭಾಗವಾಗಿದ್ದ ವಿರಾಟ್ ಕೂಡ ಟಿ-20ಐ ಮಾದರಿಗೆ ನಿವೃತ್ತಿ ಹೇಳಿರೋದ್ರಿಂದ ಅವ್ರೂ ಆಡಲ್ಲ. ಇನ್ನು ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾರದ್ದೂ ಸೇಮ್ ಸಿಚುಯೇಷನ್. ಇನ್ನು ನಾಲ್ಕನೇ ಆಟಗಾರ ಇಶಾನ್ ಕಿಶನ್. ಕಳೆದ ಬಾರಿ ಏಷ್ಯಾಕಪ್ ನಲ್ಲಿ ಭಾರತದ ಪರ ಕಣಕ್ಕಿಳಿದಿದ್ದ ಇಶಾನ್ ಕಿಶನ್ ತಮ್ಮ T20I ಕಮ್ ಬ್ಯಾಕ್ ಗೆ ಕಾಯ್ತಿದ್ದಾರೆ. ಬಟ್ ಈ ಸಲವೂ ಚಾನ್ಸ್ ಸಿಗಲ್ಲ. ಬಟ್ ಇಲ್ಲಿ ಪ್ಯಾನ್ಸ್ ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದ್ದೇ ಹೆಚ್ಚು ಬೇಸರ ಮೂಡಿಸಿದೆ. ಯಾಕಂದ್ರೆ ಏಷ್ಯಾಕಪ್ ನಲ್ಲಿ ಇವ್ರಿಬ್ಬರ ಜರ್ನಿ ಅದ್ಭುತವಾಗಿದೆ.

ಇದನ್ನೂ ಓದಿ : ಅಭಿ Vs ಸಂಜು Vs ಕೆಎಲ್ Vs ಗಿಲ್ – ಏಷ್ಯಾಕಪ್ ಟೂರ್ನಿಗೆ ಓಪನರ್ಸ್ ರೇಸ್

ಏಷ್ಯಾಕಪ್ ಇತಿಹಾಸದಲ್ಲಿ ರೋಹಿತ್ ಶರ್ಮಾ ಅತ್ಯಂತ ಯಶಸ್ವೀ ಬ್ಯಾಟರ್ ಆಗಿದ್ದಾರೆ. ಹಾಗೇ ಎರಡೂ ಮಾದರಿ ಸೇರಿ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದಾರೆ. ಟೋಟಲ್ ಆಗಿ 1210 ರನ್ ಗಳಿಸಿದ್ದಾರೆ. ಅಂದ್ರೆ ಏಕದಿನ ಮಾದರಿಯಲ್ಲಿ 939 ರನ್ಸ್ ಹಾಗೇ ಟಿ-20 ಮಾದರಿಯಲ್ಲಿ 271 ರನ್ಸ್ ಕಲೆ ಹಾಕಿದ್ದಾರೆ.  ಇನ್ನು ಈ ಲಿಸ್ಟಲ್ಲಿ ವಿರಾಟ್ ಕೊಹ್ಲಿ ಸೆಕೆಂಡ್ ಪ್ಲೇಸ್ ನಲ್ಲಿದ್ದಾರೆ. ಒಟ್ಟಾರೆಯಾಗಿ 26 ಪಂದ್ಯಗಳನ್ನ ಆಡಿದ್ದು 1171 ರನ್ ಗಳಿಸಿ ರೋಹಿತ್ ಶರ್ಮಾ ಅವರ ನಂತರದ ಸ್ಥಾನದಲ್ಲಿದ್ದಾರೆ. ಏಕದಿನ ಪಂದ್ಯಗಳಲ್ಲಿ 742  ರನ್ ಮತ್ತು ಟಿ20ಗಳಲ್ಲಿ 429 ರನ್ ಗಳಿಸಿದ್ದಾರೆ. ಬಟ್ ಮೆನ್ಸ್ ಏಷ್ಯಾಕಪ್ ಟಿ-20 ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಪ್ಲೇಯರ್ ಆಗಿದ್ದಾರೆ. ಹಾಗೇ ಕ್ಯಾಪ್ಟನ್ಸ್ ಆಗಿಯೂ ಯಶಸ್ಸು ಸಾಧಿಸಿದ್ದಾರೆ. ಅಷ್ಟಕ್ಕೂ 16 ಆವೃತ್ತಿಗಳ ಏಷ್ಯಾಕಪ್ ಟೂರ್ನಿಯಲ್ಲಿ ಭಾರತವೇ ಅರ್ಧದಷ್ಟು ಬಾರಿ ಚಾಂಪಿಯನ್ ಆಗಿದೆ. ಅಂದ್ರೆ ಒಟ್ಟಾರೆಯಾಗಿ 8 ಸಲ ಪ್ರಶಸ್ತಿ ಸುತ್ತಿನಲ್ಲಿ ಗೆದ್ದು ಬೀಗಿದೆ. 1984 ರಲ್ಲಿ ಪ್ರಾರಂಭವಾದ ಏಷ್ಯಾಕಪ್‌ನ ಚೊಚ್ಚಲ ಆವೃತ್ತಿಯಲ್ಲೇ ಮೊದಲ ಪ್ರಶಸ್ತಿಯನ್ನು ಭಾರತ ಗೆದ್ದುಕೊಂಡಿತು. ಹಾಗೆಯೇ 2023 ರಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಭಾರತ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಭಾರತದ ನಾಯಕನಾಗಿ ಐವರು ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ಸ್!

ನಾಯಕ                                              ವರ್ಷ

ಸುನಿಲ್ ಗವಾಸ್ಕರ್                             1984

ದಿಲೀಪ್ ವೆಂಗ್‌ ಸರ್ಕಾರ್                   1988

ಮೊಹಮ್ಮದ್ ಅಜರುದ್ದೀನ್                1990

ಮೊಹಮ್ಮದ್ ಅಜರುದ್ದೀನ್                 1995

ಮಹೇಂದ್ರ ಸಿಂಗ್ ಧೋನಿ                     2010

ಮಹೇಂದ್ರ ಸಿಂಗ್ ಧೋನಿ                   2016

ರೋಹಿತ್ ಶರ್ಮಾ                              2018

ರೋಹಿತ್ ಶರ್ಮಾ                            2023

Shantha Kumari