ಮೊದಲ ವಿಶ್ವಕಪ್ ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿ – ಭಾನುವಾರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ

ಮೊದಲ ವಿಶ್ವಕಪ್ ಪಂದ್ಯಕ್ಕೆ ಟೀಮ್ ಇಂಡಿಯಾ ರೆಡಿ – ಭಾನುವಾರ ಭಾರತ-ಆಸ್ಟ್ರೇಲಿಯಾ ಮುಖಾಮುಖಿ

ಅಕ್ಟೋಬರ್ 8ರಂದು ವಿಶ್ವಕಪ್‌ನ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಆಡಲಿದೆ. ಭಾನುವಾರ ಈ ಬಾರಿಯ ವರ್ಲ್ಡ್​ಕಪ್​ನಲ್ಲಿ ಟೀಂ ಇಂಡಿಯಾದ ಜರ್ನಿ ಶುರುವಾಗುತ್ತಿದೆ. ಆಸ್ಟೇಲಿಯಾ ವಿರುದ್ಧ ಭಾರತ ಮೊದಲ ಪಂದ್ಯವನ್ನು ಆಡುತ್ತಿದೆ. ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದ್ದು ತೀವ್ರ ಕುತೂಹಲ ಕೆರಳಿಸಿದೆ. ಉಭಯ ತಂಡಗಳಿಗೂ ಇದು ಮೊದಲ ಪಂದ್ಯವಾಗಿದ್ದು ಶುಭಾರಂಭ ಮಾಡಲು ಭಾರತ-ಆಸ್ಟ್ರೇಲಿಯಾ ತಂಡಗಳು ಎದುರು ನೋಡುತ್ತಿವೆ.

ಇದನ್ನೂ ಓದಿ: ಬ್ಯಾಟಿಂಗ್‌ನಲ್ಲಿ ಪ್ಲಾಫ್ ಶೋ, ಸಹಆಟಗಾರನಿಗೆ ಕಪಾಳಮೋಕ್ಷ – ಪಾಕ್ ಕ್ಯಾಪ್ಟನ್ ಬಾಬರ್ ಆಝಂ ಯಡವಟ್ಟು

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ವಿಶ್ವಕಪ್​ನಲ್ಲಿ ಇದು ಮೊದಲ ಪಂದ್ಯವಾಗಿದ್ದು, ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡುವ ತವಕದಲ್ಲಿವೆ. ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ, ಆಸೀಸ್ ತಂಡವನ್ನು 2-1 ಅಂತರದಿಂದ ಮಣಿಸಿ ಸರಣಿ ಕೈವಶ ಮಾಡಿಕೊಂಡಿತ್ತು. ಹೀಗಾಗಿ ಅದೇ ಗೆಲುವಿನ ಸರಣಿಯನ್ನು ವಿಶ್ವಕಪ್​ನಲ್ಲೂ ಮುಂದುವರಿಸುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಆಟಗಾರರಿದ್ದಾರೆ. ಇತ್ತ ಏಕದಿನ ಸರಣಿ ಸೋತಿರುವ ಆಸ್ಟ್ರೇಲಿಯಾ ತಂಡ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಇನ್ನು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಬೌಲರ್ಸ್​ಗಳಿಗೆ ಹೆಚ್ಚು ಅಡ್ವಾಂಟೇಂಜ್ ಆಗಿರುವ ಫಿಚ್ ಎಂದು ಹೇಳಲಾಗುತ್ತಿದೆ. ಈ ಹಿಂದೆಲ್ಲಾ ಚೆನ್ನೈ ಗ್ರೌಂಡ್​ ಫಾಸ್ಟ್​ ಬೌಲರ್ಸ್​​ಗಳಿಗೆ ಹೆಚ್ಚು ಫೇವರ್​ ಆಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಸ್ಲೋ ಪಿಚ್ ಆಗಿ ಬದಲಾಗಿದ್ದು, ಸ್ಪಿನ್ನರ್​​ಗಳಿಗೆ ಹೆಚ್ಚಿನ ಅಡ್ವಾಂಟೇಜ್​ ಸಿಗಲಿದೆ. ಚೆನ್ನೈನಲ್ಲಿ ಇದುವರೆಗೆ ಮೊದಲ ಬ್ಯಾಟಿಂಗ್ ಮಾಡಿದ ತಂಡ 15 ಬಾರಿ ಗೆದ್ದಿದೆ. ಚೇಸಿಂಗ್ ಮಾಡಿದ ತಂಡವೂ 15 ಬಾರಿ ಗೆದ್ದಿದೆ. ಚೆನ್ನೈನಲ್ಲಿ ಭಾರತ ಒಟ್ಟು 14 ODI ಪಂದ್ಯಗಳನ್ನ ಆಡಿದೆ. 7 ಮ್ಯಾಚ್​ ಗೆದ್ದುಕೊಂಡಿದ್ದು, 5 ಪಂದ್ಯಗಳನ್ನ ಸೋತಿದೆ. ಹೀಗಾಗಿ ಚೆನ್ನೈ ಪಿಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 250 ರನ್​​ ಗಳಿಸಿದರೂ ಅದು ಒಳ್ಳೆಯ ಸ್ಕೋರ್ ಆಗಲಿದೆ.

ಇನ್ನು ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ ಟೀಂ ಇಂಡಿಯಾವೇ ಫೇವರೇಟ್ ತಂಡ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಯಾಕಂದ್ರೆ, ಹೋಂ ಗ್ರೌಂಡ್​ ಅನ್ನೋ ಅಡ್ವಾಂಟೇಜ್ ಒಂದು ಕಡೆಯಾದ್ರೆ, ಇತ್ತೀಚೆಗಷ್ಟೇ ನಡೆದ ಆಸ್ಟ್ರೇಲಿಯಾ ವಿರುದ್ಧದ ವಂಡೇ ಸೀರಿಸ್​ನ್ನ ಭಾರತ ಗೆದ್ದುಕೊಂಡಿತ್ತು. ಹೀಗಾಗಿ ಟೀಂ ಇಂಡಿಯಾ ಪ್ಲೇಯರ್ಸ್​​ಗಳು ಕಾನ್ಫಡೆನ್ಸ್ ಲೆವೆಲ್ ಸಹಜವಾಗಿಯೇ ಹೆಚ್ಚಾಗಿದೆ.

Sulekha