ಬ್ರಹ್ಮಗಂಟು ಧಾರಾವಾಹಿ ಅಂತ್ಯ – ಕಲಾವಿದರು ಭಾವುಕ.. ದೀಪಾ ವಿದಾಯ ಹೇಳಿದ್ದು ಹೇಗೆ?

ಬ್ರಹ್ಮಗಂಟು ಧಾರಾವಾಹಿ ಅಂತ್ಯ – ಕಲಾವಿದರು ಭಾವುಕ.. ದೀಪಾ ವಿದಾಯ ಹೇಳಿದ್ದು ಹೇಗೆ?

ಜೀ ಕನ್ನಡದ ಫೇಮಸ್ ಸೀರಿಯಲ್‌ಗಳಲ್ಲಿ ಬ್ರಹ್ಮಗಂಟು ಕೂಡಾ ಒಂದು. ಇದೀಗ ಈ ಸೀರಿಯಲ್ ತನ್ನ ಪಯಣ ಮುಗಿಸಿದೆ. ತನ್ನ ನೆಚ್ಚಿನ ಸೀರಿಯಲ್ ಬಗ್ಗೆ ದೀಪಾ ಪಾತ್ರಧಾರಿ ಭಾವುಕ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ:ಮಂಗಳಗೌರಿ ಮದುವೆ ಸೀರಿಯಲ್‌ ಖ್ಯಾತಿಯ ನಟ ಇನ್ನಿಲ್ಲ!

ಬ್ರಹ್ಮಗಂಟು ಸೀರಿಯಲ್ ಮುಕ್ತಾಯವಾಗಿದೆ.  ಬರೋಬ್ಬರಿ ಮೂರು ವರ್ಷಗಳ ಕಾಲ ಈ ಧಾರಾವಾಹಿ  ಪ್ರಸಾರ ಕಂಡಿತ್ತು. ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದ ದಿಯಾ, ಇದೀಗ ತಮ್ಮ ಪಾತ್ರಗಳಿಗೆ ಭಾವುಕವಾಗಿ ವಿದಾಯ ಹೇಳಿದ್ದಾರೆ.

ಬ್ರಹ್ಮಗಂಟು ಮುಗಿದ ಬೆನ್ನಲ್ಲೇ ದಿಯಾ ಪಾಲಕ್ಕಲ್‌ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ಮೂರು ವರ್ಷಗಳು ಹೇಗೆ ಕಳೆದುಹೋಯಿತೋ ಗೊತ್ತಾಗಲಿಲ್ಲ ಎಂದು ಹೇಳಿರುವ ಅವರು, ದೀಪಾ ಹಾಗೂ ದಿಶಾ ಪಾತ್ರಗಳಿಗೆ ವಿದಾಯ ಹೇಳುವಾಗ ತಮ್ಮ ಹೃದಯ ತುಂಬಿಬಂದಿತ್ತು ಎಂದು ಬರೆದುಕೊಂಡಿದ್ದಾರೆ. ದೀಪಾ ಪಾತ್ರ ತಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿತ್ತು ಎಂದು ಅವರು ಹೇಳಿದ್ದಾರೆ. ತಮ್ಮ ನೈಜ ಜೀವನಶೈಲಿಗಿಂತ ಸಂಪೂರ್ಣ ವಿಭಿನ್ನವಾದ, ಗ್ಲಾಮರ್‌ ಇಲ್ಲದ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ದೊಡ್ಡ ಪಾಠ ಕಲಿಸಿತು ಎಂದು ದಿಯಾ ನೆನಪಿಸಿಕೊಂಡಿದ್ದಾರೆ. ಒಂದೇ ಧಾರಾವಾಹಿಯಲ್ಲಿ ದೀಪಾ ಹಾಗೂ ದಿಶಾ ಎಂಬ ಎರಡು ವಿಭಿನ್ನ ಶೇಡ್‌ಗಳ ಪಾತ್ರಗಳನ್ನು ನಿರ್ವಹಿಸುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟವೆಂದು ದಿಯಾ ಹೇಳಿಕೊಂಡಿದ್ದಾರೆ.

ತಮ್ಮ ಮೂರು ವರ್ಷದ ಪಯಣದಲ್ಲಿ ಬೆಂಬಲವಾಗಿ ನಿಂತ ನಿರ್ಮಾಪಕರಾದ ದಿಲೀಪ್‌ ರಾಜ್‌ ಹಾಗೂ ಶ್ರೀವಿದ್ಯಾ ಅವರಿಗೆ ದಿಯಾ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ. ಮೊದಲ ದಿನದಿಂದಲೂ ತಮ್ಮೊಂದಿಗೆ ನಿಂತು ಮಾರ್ಗದರ್ಶನ ನೀಡಿದ ವಿದ್ಯಾ ಮೇಡಂ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ದಿಲೀಪ್‌ ರಾಜ್‌ ಅವರಿಂದ ಕಲಿತ ಪ್ರತಿಯೊಂದು ವಿಚಾರವೂ ಸದಾ ತಮ್ಮ ಹೃದಯದಲ್ಲಿ ಉಳಿಯಲಿದೆ ಎಂದು ದಿಯಾ ಹೇಳಿದ್ದಾರೆ.

Sulekha

Leave a Reply

Your email address will not be published. Required fields are marked *