ಬೈಕ್ಗೆ ಪೆಟ್ರೋಲ್ ತುಂಬಿಸೋ ಮುಂಚೆ ಹುಷಾರ್ – ಬಂಕ್ನಲ್ಲೇ ಬೈಕ್ ಧಗಧಗ!

ಮಧ್ಯಪ್ರದೇಶದ ಪೆಟ್ರೋಲ್ ಪಂಪ್ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಪೆಟ್ರೋಲ್ ತುಂಬಿಸು ವಾಗ ಬೈಕ್ ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು ಬೈಕ್ ಕ್ಷಣಾರ್ಧದಲ್ಲಿ ಜ್ವಾಲೆಗೆ ಆಹುತಿಯಾಗಿದೆ. ಬೈಕ್ನ ಇಂಧನ ಟ್ಯಾಂಕ್ ಬಳಿ ಕೆಲವೇ ಸೆಕೆಂಡುಗಳಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ. ಪೆಟ್ರೋಲ್ ಪಂಪ್ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆ ಕ್ಷಣ ಸೆರೆಯಾಗಿದ್ದು ಭಾರೀ ವೈರಲ್ ಆಗಿದೆ.
ನೀಮುಚ್ ಜಿಲ್ಲೆಯ ಜಿರಾನ್ ಪ್ರದೇಶದಲ್ಲಿರುವ ತಿರುಪತಿ ಫಿಲ್ಲಿಂಗ್ ಸ್ಟೇಷನ್ನಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ತುಂಬಿಸುವಾಗ ಮೋಟಾರ್ ಸೈಕಲ್ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಸಿಸಿಟಿವಿ ಮಾಹಿತಿಯ ಪ್ರಕಾರ, ಪೆಟ್ರೋಲ್ ಹಾಕುವ ಸಮಯದಲ್ಲಿ ಯುವಕ ತನ್ನ ಮೊಬೈಲ್ ಫೋನ್ ಬಳಸುತ್ತಿದ್ದ ಎನ್ನಲಾಗಿದೆ. ಪೆಟ್ರೋಲ್ ಬಂಕ್ಗಳಲ್ಲಿ ಮೊಬೈಲ್ ಬಳಸಬಾರದು ಎನ್ನುವ ಎಚ್ಚರಿಕೆ ನೋಟಿಸ್ ಅನ್ನು ಹಾಕಿರುವುದನ್ನು ನೀವು ಗಮನಿಸರಬಹುದು. ಆದರೆ ಕೆಲವರು ಇದನ್ನು ಗಂಭೀರವಾಗಿ ತೆಗೆದು ಕೊಳ್ಳುವುದಿಲ್ಲ. ಇಂತಹದ್ದೇ ಒಂದು ನಿರ್ಲಕ್ಷ್ಯದಿಂದ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯ ಜೀರನ್ ಪ್ರದೇಶದಲ್ಲಿ ಭೀಕರ ಅನಾಹುತಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕನ್ನಡಿಗರಿಗೆ ಖಾಲಿ ಚೊಂಬು – ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ
ದೃಶ್ಯಗಳಲ್ಲಿ, ಸಿಬ್ಬಂದಿ ಪೆಟ್ರೋಲ್ ತುಂಬಿಸುತ್ತಿರುವಾಗ ಯುವಕನೊಬ್ಬ ನಿಂತಿದ್ದಾನೆ. ಪೆಟ್ರೋಲ್ ತುಂಬಿಸುತ್ತಿದ್ದಾಗ ಆತ ತನ್ನ ಮೊಬೈಲ್ ಫೋನ್ ಬಳಸುತ್ತಿರುವುದು ಕಾಣಬಹುದು. ಸ್ವಲ್ಪ ಸಮಯದ ನಂತರ, ಬೈಕ್ ಬಳಿ ಇದ್ದಕ್ಕಿದ್ದಂತೆ ಜ್ವಾಲೆಗಳು ಕಾಣಿಸಿಕೊಂಡು ಹರಡಲು ಪ್ರಾರಂಭಿಸುತ್ತವೆ. ಪಂಪ್ ಸುತ್ತಮುತ್ತಲಿನ ಜನರು ಗಾಬರಿಗೊಂಡು ಆ ಪ್ರದೇಶದಿಂದ ದೂರ ಸರಿದರು. ಅಪಾಯವನ್ನು ನೋಡಿ, ಪೆಟ್ರೋಲ್ ಪಂಪ್ ಸಿಬ್ಬಂದಿ ತ್ವರಿತವಾಗಿ ಮಧ್ಯಪ್ರವೇಶಿಸಿ ಬೆಂಕಿಯನ್ನು ಕಡಿಮೆ ಮಾಡಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್, ಯಾರಿಗೂ ಗಾಯವಾಗಲಿಲ್ಲ.
ಬೆಂಕಿ ಪೆಟ್ರೋಲ್ ಪಂಪ್ ಯಂತ್ರಕ್ಕೆ ಹರಡದಂತೆ ತಡೆಯಲು ಸಿಬ್ಬಂದಿ ತಕ್ಷಣ ಉರಿಯುತ್ತಿದ್ದ ಬೈಕನ್ನು ತಳ್ಳಿದ್ದಾರೆ. ತಕ್ಷಣವೇ ಅಗ್ನಿಶಾಮಕ ಉಪಕರಣ ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ನೋಡಿರಿ

