ಬೆಳ್ಳಿ ಆಭರಣಗಳನ್ನು ಈ ರೀತಿಯಾಗಿ ಧರಿಸಬಹದು… ಇಲ್ಲಿದೆ ಸಿಂಪಲ್ ಟಿಪ್ಸ್

ಆಭರಣಗಳು ಸೌಂದರ್ಯದ ಪ್ರತಿಬಿಂಬಿಸುವ ವಸ್ತು. ಹಾಗಾಗಿಯೇ ನಾಗರೀಕತೆ ಬೆಳೆದು ಬಂದಾಗಿನಿಂದಲೂ ಪುರುಷರು ಮತ್ತು ಮಹಿಳೆಯರು ವಿವಿಧ ಲೋಹಗಳ ಆಭರಣಗಳನ್ನು ಧರಿಸುತ್ತಾರೆ. ಹೊಸತು ಹಳೆಯದಾಗುತ್ತಿದ್ದಂತೆ ಈಗ ಹಳೆಯ ಕಾಲದ ಒಡವೆಗಳು ಇತ್ತೀಚೆಗೆ ಟ್ರೆಂಡ್ ಆಗುತ್ತಿದೆ. ಯುವತಿಯರೂ ಸಹ ಅಜ್ಜ, ಅಜ್ಜಿ ಕಾಲದಲ್ಲಿ ಬಳಸುತ್ತಿದ್ದ ಒಡವೆಗಳಿಗೆ ಮಾರು ಹೋಗಿದ್ದಾರೆ. ಹಳೆ ಕಾಲದ ಒಡವೆಗಳಿಗೆ ಚಿತ್ತಾಕರ್ಷಕ ರೂಪಕೊಟ್ಟು ಧರಿಸುತ್ತಿದ್ದಾರೆ.
ಬೆಳ್ಳಿ ಆಭರಣಗಳಲ್ಲಿ ವಿವಿಧ ವಿನ್ಯಾಸದ ಕಿವಿಯೋಲೆ, ಮೂಗಿನ ನತ್ತುಗಳು, ಉಂಗುರಗಳು, ನೆಕ್ಲೆಸ್ಗಳು, ಬಳೆ, ಖಡ್ಗಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ಅನೇಕ ಮಂದಿ ಇಷ್ಟ ಪಟ್ಟು ಖರೀದಿಸುತ್ತಾರೆ ಆದರೆ ಅವುಗಳನ್ನು ಯಾವ ಉಡುಪುಗಳಿಗೆ ಧರಿಸಬೇಕು, ಅವುಗಳನ್ನು ಯಾವ ಸಂಧರ್ಭಗಳಲ್ಲಿ ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಬೆಳ್ಳಿ ಒಡವೆಗಳನ್ನು ಟ್ರೆಂಡಿಯಾಗಿ ಹೇಗೆ ಧರಿಸಬಹುದು ಎನ್ನುವವರಿಗೆ ಸಿಂಪಲ್ ಟಿಪ್ಸ್ ಇಲ್ಲಿದೆ.
ಬೊಹಿಮಿಯನ್ ಶೈಲಿ
ಬೋಹೀಮಿಯನ್ ಬೆಳ್ಳಿ ಆಭರಣಗಳು ಟ್ರೆಂಡಿ ಮತ್ತು ಆರಾಮದಾಯಕ ಶೈಲಿಯಾಗಿದೆ. ದೊಡ್ಡ ಮೂಗುತಿ ಉಡುಪಿನೊಂದಿಗೆ ಧರಿಸಬಹುದು. ಅಲ್ಲದೇ ಬೆಳ್ಳಿ ಬಳೆ ಮತ್ತು ನೆಕ್ಲೆಸ್‌ಗಳನ್ನು ಕೂಡ ಶರ್ಟ್‌ಗಳ ಮೇಲೆ ಧರಿಸಬಹುದಾಗಿದೆ.
ದೇಸಿ ಸ್ಟೈಲ್
ಬೆಳ್ಳಿಯ ಆಭರಣಗಳು ಕುರ್ತಾ ಮತ್ತು ಸಲ್ವಾರ್ ಕಮೀಜ್‌ಗಳೊಂದಿಗೆ ಉತ್ತಮವಾಗಿ ಕಾಣುತ್ತವೆ. ಜೊತೆಗೆ ಪಲಾಜೋಸ್ ಮತ್ತು ಇತರ ಟ್ರೆಡೀಷನಲ್ ಉಡುಪುಗಳೊಂದಿಗೆ ಬೆಳ್ಳಿ ಚೆನ್ನಾಗಿ ಒಪ್ಪುತ್ತದೆ. ಬೆಳ್ಳಿ ಬಳೆಗಳು, ಕಿವಿಯೋಲೆಗಳು, ಚೋಕರ್ ಅಥವಾ ನೆಕ್ಲೆಸ್ ರೂಪದಲ್ಲಿ ಧರಿಸಿ ಸ್ಟೈಲಿಷ್ ಆಗಿ ಕಾಣಬಹುದಾಗಿದೆ.
ಸ್ಟ್ರೀಟ್ ಸ್ಟೈಲ್
ಇಂಡೋ-ವೆಸ್ಟರ್ನ್ ಮತ್ತು ಬೋಹೀಮಿಯನ್ ಶೈಲಿಗಳು ಇಂದು ಹೆಚ್ಚು ಟ್ರೆಂಡಿಂಗ್ ಶೈಲಿಗಳಾಗಿವೆ. ವಿಶೇಷ ಸಂದರ್ಭಗಳಲ್ಲಿ ಅಥವಾ ಶಾಪಿಂಗ್‌ಗೆ ಹೋಗುವಾಗ ನೀವು ಆಭರಣಗಳನ್ನು ಧರಿಸಬಹುದು. ಇದು ಹೀಲ್ಸ್, ಜೆಗ್ಗಿಂಗ್‌ಗಳು ಮತ್ತು ಸಡಿಲವಾದ ಟಾಪ್‌ಗಳೊಂದಿಗೆ ಸಖತ್ ಫ್ಯಾಷನೇಬಲ್ ಆಗಿ ಕಾಣುತ್ತದೆ.
ಆಫೀಸ್‌ಗಳಲ್ಲೂ ಟ್ರೆಂಡಿ ಲುಕ್
ಬೆಳ್ಳಿ ಆಭರಣಗಳು ಒಂದೇ ರೀತಿಯದಲ್ಲ. ಹೀಗಾಗಿ ನೀವು ಅದನ್ನು ಆಫೀಸ್‌ಗೂ ಧರಿಸಿ ಹೋಗಬಹುದು. ಇದನ್ನು ನಿಮ್ಮ ಡೆನಿಮ್ ಶರ್ಟ್ ಅಥವಾ ಫಾರ್ಮಲ್ ಮೇಲೆ ಧರಿಸಬಹುದು. ಅಥವಾ ಕಾಟನ್ ಸೀರೆಗಳ ಮೇಲೂ ಧರಿಸಬಹುದಾಗಿದೆ. ಬೆಳ್ಳಿ ಖಡಗ, ಬೆಳ್ಳಿ ಉಂಗುರ, ನೆಕ್ಲೆಸ್ ಸೇರಿದಂತೆ ಬೆಳ್ಳಿ ನತ್ತುಗಳನ್ನು ಧರಿಸಿದರೆ ಸಖತ್ ಸ್ಟೈಲಿಷ್ ಲುಕ್ ನೀಡುವುದರಿಂದ ಅನೇಕ ಮಂದಿ ಬೆಳ್ಳಿ ಆಭರಣಗಳನ್ನು ಧರಿಸಿ ಆಫೀಸ್ಗೆ ಹೋಗುತ್ತಾರೆ.
Also Read :- ಈ ಊರಿನಲ್ಲಿ ಬೆಕ್ಕೇ ಗ್ರಾಮ ದೇವತೆ… ಬೆಕ್ಕನ್ನ ಪೂಜಿಸಿದರೆ ಇಷ್ಟಾರ್ಥ ಸಿದ್ದಿ!