ಬೆಂಗಳೂರಿನ ನಗರದಲ್ಲಿ ಓಡಾಡುತ್ತಿವೆ ನಾಲ್ಕು ಚಿರತೆಗಳು..!

ಬೆಂಗಳೂರಿನ ನಗರದಲ್ಲಿ ಓಡಾಡುತ್ತಿವೆ ನಾಲ್ಕು ಚಿರತೆಗಳು..!

ಬೆಂಗಳೂರು: ಬೆಳಗಾವಿಯಲ್ಲಿ ಚಿರತೆ ಭಯ ಆಯ್ತು. ನಂತರ ಮೈಸೂರಿನ ಬೃಂದಾವನದಲ್ಲೂ ಚಿರತೆಯದ್ದೇ ಚಿಂತೆ ಇತ್ತು. ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಚಿರತೆಯ ಕಾಟ ಶುರುವಾಗಿದೆ. ಸಿಲಿಕಾನ್ ಸಿಟಿಯಲ್ಲಿ ನಾಲ್ಕು ಚಿರತೆಗಳು ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಆವರಿಸಿದೆ.  ಬೆಂಗಳೂರಿನ ಉತ್ತರ ಹಳ್ಳಿ ಮುಖ್ಯ ರಸ್ತೆಯ ಕೋಡಿಪಾಳ್ಯದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ ತಿಂದಿದೆ. ತುರಹಳ್ಳಿ ಫಾರೆಸ್ಟ್ ಅಂಚಿನ ಕೋಡಿಪಾಳ್ಯದ ಬಿಜಿಎಸ್ ಆಸ್ಪತ್ರೆ ಹಿಂಬದಿಯ ಗೇಟ್ ಬಳಿ ಚಿರತೆ, ಜಿಂಕೆಯನ್ನು ಬೇಟೆಯಾಡಿ ತಿಂದು ಹೋಗಿರುವುದು ಪತ್ತೆಯಾಗಿದೆ.

ಇದನ್ನೂ ಓದಿ :  ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? – ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

ಕಳೆದ ಕೆಲವು ದಿನಗಳಿಂದ ಕೋಡಿಪಾಳ್ಯ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು. ಇಂದು ಬೆಳಗ್ಗಿನ ಜಾವ ರಸ್ತೆ ಪಕ್ಕದಲ್ಲೇ ಜಿಂಕೆಯನ್ನು ಚಿರತೆ ಬೇಟೆಯಾಡಿದೆ. ಸಾರ್ವಜನಿಕರು ಹೇಳುವ ಪ್ರಕಾರ ಈ ಪ್ರದೇಶದಲ್ಲಿ ಒಟ್ಟು 4 ಚಿರತೆಗಳು ಓಡಾಡುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ವಾಕಿಂಗ್ ಮತ್ತು ಮುಖ್ಯ ರಸ್ತೆಗೆ ಹೋಗಲು ಈ ರಸ್ತೆಯನ್ನು ಬಳಸುತಿದ್ದು, ಈ ನಡುವೆ ಇದೇ ರಸ್ತೆಯಲ್ಲಿ ಒಟ್ಟು 5 ಶಾಲೆಗಳಿವೆ. ಹಾಗಾಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರು ಭಯಬೀತರಾಗಿದ್ದಾರೆ. ಇನ್ನೊಂದೆಡೆ ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಸೇರೆಗಾಗಿ ಕಾಯುತ್ತಿದ್ದಾರೆ.

suddiyaana