ಬಿಗ್ ಮನೆಗೆ ಮಾಳು ಬಾಸ್! – ಕಾವು, ರಘುನ ಹಿಂದಿಕ್ಕಿದ್ದೇಗೆ?
ಮಾತಲ್ಲೇ ಗೆದ್ನಾ ಜವಾರಿ ಹುಡ್ಗ?

ಬಿಗ್ ಮನೆಗೆ ಮಾಳು ಬಾಸ್! – ಕಾವು, ರಘುನ ಹಿಂದಿಕ್ಕಿದ್ದೇಗೆ?ಮಾತಲ್ಲೇ ಗೆದ್ನಾ ಜವಾರಿ ಹುಡ್ಗ?

ಬಿಗ್ ಬಾಸ್ ಮನೆಯ ಈ ವಾರದ ಕ್ಯಾಪ್ಟನ್ ಆಗಿ ಮಾಳು ನಿಪ್ನಾಳ್ ಆಯ್ಕೆಯಾಗಿದ್ದಾರೆ. ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಮಾಳು, ಕಾವ್ಯ, ಜಾನ್ವಿ, ಅಭಿಷೇಕ್ ಹಾಗೂ ರಘು ಇದ್ದರು. ಇವರನ್ನು ಆಯ್ಕೆ ಮಾಡುವ ಅವಕಾಶ ವೀಕ್ಷಕರಿಗೆ ನೀಡಲಾಗಿತ್ತು. ಅದರಂತೆ ಬಿಗ್ ಬಾಸ್ ಮನೆಗೆ ಬಂದ ವೀಕ್ಷಕರ ಮುಂದೆ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿರುವವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಗಿತ್ತು. ಅದರಂತೆ ಐದು ಜನರು ಬಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಕೊನೆದಾಗಿ ಅವರಿಗೆ ಬಂದ ವೀಕ್ಷಕರು ವೋಟ್ ಮಾಡ್ಬೇಕಾಗಿತ್ತು. ಈ ವೇಳೆ ಮಾಳು ಅವರಿಗೆ ಹೆಚ್ಚಿನ ಮತಗಳು ಬಂದಿದ್ದು ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಇದನ್ನೂ ಓದಿ: ಆ ಪದ ಬಳಸಿ ಗಿಲ್ಲಿ, ಕಾವ್ಯ ಪಿತ್ತ ನೆತ್ತಿಗೇರಿಸಿದ ಧ್ರುವಂತ್! – ಗಿಲ್ಲಿನಟನ ಟಾರ್ಗೆಟ್‌ ಮಾಡಿ ಇರೋ ಮರ್ಯಾದೆ ಕಳ್ಕೊಳ್ತಿದ್ದಾರಾ?

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭವಾದಾಗಿನಿಂದ ಸ್ಪರ್ಧಿ ಮಾಳು ನಿಪನಾಳ ಅವರು ಎಲ್ಲರ ಜೊತೆ ಮಾತನಾಡುವುದಿಲ್ಲ ಎಂಬ ದೂರು ಇತ್ತು.  ಮಾಳು ನಿಪ್ಪಾನಾಳ್ ಖಡಕ್ ಆಗಿಯೇ ಮಾತನಾಡಿದ್ದಾರೆ. ಕ್ಯಾಪ್ಟನ್ ಆಗಲು ರೆಡಿಯಾಗುತ್ತಿದ್ದಂತೆ  ಇರೋ ಅಷ್ಟು ಸಿಟ್ಟನ್ನು ಮಾತಿ ರೂಪದಲ್ಲಿಯೇ ಹೊರಗೆ ಹಾಕಿದ್ದಾರೆ.   ಜನರ ಎದುರಿನಲ್ಲಿ ಮಾತನಾಡಿದಾಗ ಮಾಳು, ‘ಕ್ಯಾಪ್ಟನ್ ಆಗುತ್ತೇನೆ. ಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ’ ಎಂದು ಖಡಕ್ ಆಗಿ ಹೇಳಿದ್ರು.   ಮನೆಯ ಮಂದಿ ಯಾಕೆ ಕಿತ್ತಾಡ್ತಾರೆ ಅನ್ನೋ ತಿಳಿದಿಲ್ಲ. ಯಾರು ಯಾಕೆ ಕಿತ್ತಾಡ್ತಿದ್ದಾರೆ. ಅದಕ್ಕೆ ಇರೋ ಕಾರಣ ಏನೂ ಅನ್ನೋದು ತಿಳಿಯದೇ ಜಗಳ ಆಡ್ತಾರೆ ಅಂತಲೂ ಮಾಳು ನಿಪ್ಪನಾಳ್ ಟೀಕಿಸಿದ್ದಾರೆ. ಇವರು ಮಾತು ಪ್ರೇಕ್ಷಕರಿಗೆ ಇಷ್ಟು ಆಗಿತ್ತು. ಅದರಂತೆ ಮಾಳು ಅವರನ್ನ ವೋಟ್  ಹಾಕಿ ಕ್ಯಾಪ್ಟನ್ ಮಾಡಿದ್ದಾರೆ.

Kishor KV